ಮುಂಬೈ(ನ.07): ಬಾಂಗ್ಲಾದೇಶದ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಪತ್ನಿ ಅನುಷ್ಕಾ ಶರ್ಮಾ ಜೊತೆ ಕಾಲ ಕಳೆಯುತ್ತಿದ್ದಾರೆ. ನ. 5 ರಂದು 31ನೇ ವಸಂತಕ್ಕೆ ಕಾಲಿಟ್ಟ ಕೊಹ್ಲಿ ಭೂತಾನ್‌ನಲ್ಲಿ ವಿಶೇಷವಾಗಿ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಕೊಹ್ಲಿ ಹುಟ್ಟು ಹಬ್ಬದ ಬಳಿಕ ಕೊಹ್ಲಿ ಮಾಡಿದ ಟ್ವೀಟ್ ಭಾರಿ ಸದ್ದು ಮಾಡುತ್ತಿದೆ. 

ಇದನ್ನೂ ಓದಿ: ಅಯ್ಯೋ... ಹಗಲು-ರಾತ್ರಿ ಟೆಸ್ಟ್ ಪಂದ್ಯಕ್ಕೆ ಧೋನಿ ಕಾಮೆಂಟ್ರಿ ಇಲ್ಲ..!

ಕೊಹ್ಲಿ ಹುಟ್ಟು ಹಬ್ಬಕ್ಕೆ ಟೀಂ ಇಂಡಿಯಾ ಹಾಲಿ, ಮಾಜಿ ಹಾಗೂ ಗಣ್ಯರು ಶುಭಕೋರಿದ್ದರು. ಈ ವೇಳೆ ಮಿಡ್ಲ್ ಆರ್ಡರ್ ಬ್ಯಾಟ್ಸ್‌ಮನ್ ಸುರೇಶ್ ರೈನಾ ಕೂಡ ಕೊಹ್ಲಿಗೆ ಶುಭಕೋರಿದ್ದರು. ರೈನಾಗೆ ಧನ್ಯವಾದ ತಳಿಸುವಾಗ ಕೊಹ್ಲಿ ಥ್ಯಾಂಕ್ಸ್ ಭವೇಶ್ ಎಂದು ಹೇಳಿದ್ದಾರೆ. 

ಇದನ್ನೂ ಓದಿ: ಕೊಹ್ಲಿ ಹುಟ್ಟು ಹಬ್ಬಕ್ಕೆ ಶುಭಕೋರಿದ ರೋಹಿತ್; ಗೆಳೆತನ ಹೀಗೆ ಇರಲಿ ಎಂದ ಫ್ಯಾನ್ಸ್!

ಸುರೇಶ್ ರೈನಾಗೆ ಭವೇಶ್ ಎಂದು ಹೇಳಲು ಕಾರಣವೇನು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ. ತಪ್ಪಾಗಿ ಬರೆಯಲಾಗಿದೆಯೋ ಅಥವಾ ಉದ್ದೇಶ ಪೂರ್ವಕವಾಗಿ ಬಳಸಲಾಗಿದೆಯೋ?, ಸುರೇಶ್ ಬದಲು ಭವೇಶ್ ಯಾಕಾಯ್ತು ಎಂದು ಅಭಿಮಾನಿಗಳು ಪ್ರಶ್ನಿಸಿದ್ದಾರೆ.