Asianet Suvarna News Asianet Suvarna News

ವಿರಾಟ್‌ ಕೊಹ್ಲಿಗೆ ಒಲಿದ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವ!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವಕ್ಕೆ ಭಾಜನರಾಗಿದ್ದಾರೆ. ಇದರೊಂದಿಗೆ ಭಾರತದ ಮೂವರು ದಿಗ್ಗಜ ಕ್ರಿಕೆಟಿಗರು ದಶಕದ ಏಕದಿನ ಕ್ರಿಕೆಟಿಗರು ಎನಿಸಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.

Team India Captain Virat Kohli Named Wisdens ODI Player of the Decade kvn
Author
London, First Published Apr 16, 2021, 8:51 AM IST

ಲಂಡನ್(ಏ.16)‌: ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ಪ್ರತಿಷ್ಠಿತ ವಿಸ್ಡನ್‌ ದಶಕದ ಕ್ರಿಕೆಟಿಗ ಗೌರವ ದೊರೆತಿದೆ. 2010ರಿಂದ 2020ರ ಅವಧಿಯಲ್ಲಿ ತೋರಿದ ಪ್ರದರ್ಶನ ಪರಿಗಣಿಸಿ ಈ ಗೌರವ ನೀಡಲಾಗಿದೆ. 

ಏಕದಿನ ಕ್ರಿಕೆಟ್‌ಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ 5 ದಶಕಗಳಿಗೆ 5 ಶ್ರೇಷ್ಠ ಆಟಗಾರರನ್ನು ವಿಸ್ಡನ್‌ ಹೆಸರಿಸಿದೆ. ಈ ಪೈಕಿ 80ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಭಾರತದ ವಿಶ್ವಕಪ್‌ ವಿಜೇತ ನಾಯಕ ಕಪಿಲ್‌ ದೇವ್‌ ಪಾತ್ರರಾದರೆ, 90ರ ದಶಕದ ಶ್ರೇಷ್ಠ ಕ್ರಿಕೆಟಿಗ ಗೌರವಕ್ಕೆ ಸಚಿನ್‌ ತೆಂಡುಲ್ಕರ್‌ ಭಾಜನರಾಗಿದ್ದಾರೆ.

IPL 2021 ಸಿಕ್ಸರ್‌ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್‌ ಗೇಲ್‌..!

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 2010ರಿಂದ 2020ರ ಅವಧಿಯಲ್ಲಿ 60ಕ್ಕೂ ಹೆಚ್ಚಿನ ಸರಾಸರಿಯಲ್ಲಿ 42 ಶತಕ ಸಹಿತ 11 ಸಾವಿರಕ್ಕೂ ಅಧಿಕ ರನ್‌ ಬಾರಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್‌ ದಿಗ್ಗಜ ಮುತ್ತಯ್ಯ ಮುರುಳೀಧರನ್‌ 2000 ದಿಂದ 2020ರ ಅವಧಿಯ ವಿಸ್ಡನ್‌ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಭಾಜನರಾಗಿದ್ದಾರೆ.  ಇನ್ನು 70ರ ದಶಕದ ಕ್ರಿಕೆಟಿಗ ಪ್ರಶಸ್ತಿಗೆ ಕೆರಿಬಿಯನ್ ದಂತಕಥೆ ಸರ್‌ ವೀವ್ ರಿಚರ್ಡ್ಸ್‌ ಭಾಜನರಾಗಿದ್ದಾರೆ. 

Follow Us:
Download App:
  • android
  • ios