IPL 2021 ಸಿಕ್ಸರ್ ಚಚ್ಚುವಲ್ಲಿ ಹೊಸ ದಾಖಲೆ ಬರೆದ ಕ್ರಿಸ್ ಗೇಲ್..!
ಮುಂಬೈ: ‘ಯೂನಿವರ್ಸ್ ಬಾಸ್’ ಕ್ರಿಸ್ ಗೇಲ್, ಐಪಿಎಲ್‌ನಲ್ಲಿ ಮತ್ತೊಂದು ದಾಖಲೆ ಬರೆದಿದ್ದಾರೆ. ರಾಜಸ್ಥಾನ ರಾಯಲ್ಸ್ ವಿರುದ್ಧ ಸೋಮವಾರ(ಏ.12) ನಡೆದ ಈ ಆವೃತ್ತಿಯ 4ನೇ ಪಂದ್ಯದಲ್ಲಿ ಗೇಲ್ 2 ಅಮೋಘ ಸಿಕ್ಸರ್ ಸಿಡಿಸಿ, ಐಪಿಎಲ್‌ನಲ್ಲಿ 350 ಸಿಕ್ಸರ್‌ಗಳನ್ನು ಪೂರೈಸಿದರು. ಈ ಮೈಲಿಗಲ್ಲು ತಲುಪಿದ ಮೊದಲ ಬ್ಯಾಟ್ಸ್‌ಮನ್ ಎನ್ನುವ ದಾಖಲೆಯನ್ನು ಗೇಲ್ ಬರೆದರು. ಐಪಿಎಲ್‌ನಲ್ಲಿ ಮೊದಲು 50 ಸಿಕ್ಸರ್ ಬಾರಿಸಿದ್ದು ಆ್ಯಡಂ ಗಿಲ್‌ಕ್ರಿಸ್ಟ್, ಆ ಬಳಿಕ ಮೊದಲು 100, 150, 200, 250, 300, 350 ಸಿಕ್ಸರ್ ಬಾರಿಸಿದ ದಾಖಲೆ ಗೇಲ್ ಹೆಸರಿನಲ್ಲೇ ಇದೆ.
ಐಪಿಎಲ್‌ನಲ್ಲಿ ಕೆಕೆಆರ್, ಆರ್‌ಸಿಬಿ ಹಾಗೂ ಪಂಜಾಬ್ ಪರ ಒಟ್ಟು 133 ಪಂದ್ಯಗಳನ್ನು ಆಡಿರುವ ಗೇಲ್ 351 ಸಿಕ್ಸರ್‌ಗಳನ್ನು ಸಿಡಿಸಿದ್ದಾರೆ. 2ನೇ ಸ್ಥಾನದಲ್ಲಿರುವುದು ಎಬಿ ಡಿ ವಿಲಿಯರ್ಸ್. 170 ಪಂದ್ಯಗಳಲ್ಲಿ ಎಬಿಡಿ ಗಳಿಸಿರುವುದು 237 ಸಿಕ್ಸರ್‌ಗಳನ್ನು. ಎಬಿಡಿಗಿಂತ 37 ಪಂದ್ಯ ಕಡಿಮೆ ಆಡಿದ್ದರೂ ಗೇಲ್, 114 ಸಿಕ್ಸರ್ ಹೆಚ್ಚಿಗೆ ಬಾರಿಸಿದ್ದಾರೆ.
ಐಪಿಎಲ್‌ನಲ್ಲಿ ಗರಿಷ್ಠ ಸಿಕ್ಸರ್ ಬಾರಿಸಿದ ಟಾಪ್ 5 ಆಟಗಾರರ ವಿವರ ಇಲ್ಲಿದೆ ನೋಡಿ.
1. ಕ್ರಿಸ್ ಗೇಲ್
ಒಟ್ಟು 133 ಪಂದ್ಯಗಳು, ಸಿಕ್ಸರ್‌ಗಳು 351
2. ಎಬಿ ಡಿ ವಿಲಿಯರ್ಸ್
ಒಟ್ಟು 170 ಪಂದ್ಯಗಳು, ಸಿಕ್ಸರ್‌ಗಳು 237
3. ಎಂ.ಎಸ್. ಧೋನಿ
ಒಟ್ಟು 205 ಪಂದ್ಯಗಳು, ಸಿಕ್ಸರ್‌ಗಳು 216
4. ರೋಹಿತ್ ಶರ್ಮಾ
ಒಟ್ಟು 201 ಪಂದ್ಯಗಳು, 214 ಸಿಕ್ಸರ್‌ಗಳು
5. ವಿರಾಟ್ ಕೊಹ್ಲಿ
ಒಟ್ಟು 193 ಪಂದ್ಯಗಳು, 201 ಸಿಕ್ಸರ್‌ಗಳು