ನವದೆಹಲಿ[ಅ.20]: ನ.3ರಿಂದ ತವ​ರಿ​ನಲ್ಲಿ ಬಾಂಗ್ಲಾ​ದೇಶ ವಿರುದ್ಧ ನಡೆ​ಯ​ಲಿ​ರುವ 3 ಪಂದ್ಯ​ಗಳ ಟಿ20 ಸರ​ಣಿಗೆ ಭಾರತ ತಂಡದ ನಾಯಕ ವಿರಾಟ್‌ ಕೊಹ್ಲಿಗೆ ವಿಶ್ರಾಂತಿ ನೀಡುವ ಸಾಧ್ಯತೆ ಇದೆ. 

ರಾಂಚಿ ಟೆಸ್ಟ್: ಹರಿಣಗಳಿಗೆ ಆರಂಭಿಕ ಆಘಾತ

ಕಳೆದ ಅಕ್ಟೋಬರ್‌ನಿಂದ ಭಾರತ ಆಡಿದ 56 ಪಂದ್ಯಗಳ ಪೈಕಿ ಕೊಹ್ಲಿ 48 ಪಂದ್ಯ​ಗ​ಳಲ್ಲಿ ಆಡಿದ್ದು, ಅವ​ರಿಗೆ ವಿಶ್ರಾಂತಿ ಅಗ​ತ್ಯ​ವೆ​ನಿ​ಸಿದೆ. ಬಾಂಗ್ಲಾ ವಿರುದ್ಧ ಸರ​ಣಿಗೆ ಅ.24ರಂದು ಭಾರತ ತಂಡದ ಆಯ್ಕೆ ನಡೆ​ಯ​ಲಿದ್ದು, ರೋಹಿತ್‌ ಶರ್ಮಾ ಹೆಗ​ಲಿಗೆ ನಾಯ​ಕತ್ವದ ಜವಾ​ಬ್ದಾರಿ ವಹಿ​ಸ​ಲಾ​ಗು​ತ್ತದೆ ಎನ್ನ​ಲಾ​ಗಿದೆ. 

ಇಂದಿ​ನಿಂದ ಐಎಸ್‌ಎಲ್‌ ಫುಟ್ಬಾ​ಲ್‌ ಟೂರ್ನಿ ಆರಂಭ

ನ.3ಕ್ಕೆ ಡೆಲ್ಲಿ, ನ.7ಕ್ಕೆ ರಾಜ್‌ಕೋಟ್‌ ಹಾಗೂ ನ.10ಕ್ಕೆ ನಾಗ್ಪುರದಲ್ಲಿ ಪಂದ್ಯಗಳು ನಡೆಯಲಿವೆ. ಟಿ20 ಸರಣಿ ಬಳಿಕ 2 ಪಂದ್ಯ​ಗಳ ಟೆಸ್ಟ್‌ ಸರಣಿ ನಡೆ​ಯ​ಲಿದ್ದು, ಆ ಸರ​ಣಿಗೆ ಕೊಹ್ಲಿ ತಂಡಕ್ಕೆ ವಾಪ​ಸಾ​ಗ​ಲಿ​ದ್ದಾರೆ ಎನ್ನ​ಲಾ​ಗಿದೆ.

ಟೀಂ ಇಂಡಿಯಾ ಎದುರಿನ ಟಿ20 ಸರಣಿಗೆ ಬಾಂಗ್ಲಾದೇಶ ತಂಡ ಪ್ರಕಟ