ಕ್ರೈಸ್ಟ್‌ಚರ್ಚ್(ಮಾ.03): ಟೆಸ್ಟ್ ಸರಣಿಯ ಹೀನಾಯ ಸೋಲಿನ ಬಳಿಕ ಪತ್ರಕರ್ತನೊಬ್ಬ ಕೇಳಿದ ಪ್ರಶ್ನೆಗೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ತಾಳ್ಮೆ ಕಳೆದುಕೊಂಡ ಘಟನೆ ಸೋಮವಾರ ನಡೆಯಿತು.

ನ್ಯೂಜಿಲೆಂಡ್‌ ನಾಯಕ ಕೇನ್‌ ವಿಲಿಯಮ್ಸನ್‌ ಔಟಾದಾಗ ಸಂಭ್ರಮಿಸುವ ಭರದಲ್ಲಿ ಅತಿರೇಕದ ವರ್ತನೆ ತೋರಿದ್ದನ್ನು ಪ್ರಶ್ನಿಸಿದಾಗ, ವಿರಾಟ್ ಕೊಹ್ಲಿ ಗಲಿಬಿಲಿಯಾದರು. ನೀವು ಏನು ಹೇಳುತ್ತಿರಾ, ಅದರ ಬಗ್ಗೆ ಸ್ಪಷ್ಟತೆ ನೀಡಿ ಎಂದರು. ಅರ್ಧಂಬರ್ಧ ಪ್ರಶ್ನೆಯೊಂದಿಗೆ ಬರಬೇಡಿ. ಸುದ್ದಿಗೋಷ್ಠಿಗೆ ಬರುವಾಗಲೇ ಸ್ಪಷ್ಟಪ್ರಶ್ನೆಯೊಂದಿಗೆ ಬನ್ನಿ ಆಗ ಉತ್ತರ ನೀಡುತ್ತೇನೆ ಎಂದು ಕೊಹ್ಲಿ ಖಾರವಾಗಿ ಪ್ರತಿಕ್ರಿಯಿಸಿದರು. ಇದೇ ವೇಳೆ ‘ನ್ಯೂಜಿಲೆಂಡ್‌ ವಿರುದ್ಧದ ಸೋಲು ತಮ್ಮನ್ನು ಘಾಸಿಗೊಳಿಸಿದೆ’ ಎಂದು ಸರಣಿ ಸೋಲಿನ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ನಾಯಕ ಕೊಹ್ಲಿ ಹೇಳಿದ್ದಾರೆ.

ವೈಟ್‌ವಾಷ್: ಕಿವೀಸ್ ಟೆಸ್ಟ್‌ನಲ್ಲೂ ಟೀಂ ಇಂಡಿಯಾಗೆ ಮುಖಭಂಗ

ಟಿ20 ಸರಣಿಯನ್ನು 5-0 ಅಂತರದಲ್ಲಿ ಗೆದ್ದು ಬೀಗಿದ್ದ ವಿರಾಟ್ ಪಡೆ ಆ ಬಳಿಕ ಏಕದಿನ ಹಾಗೂ ಟೆಸ್ಟ್ ಪಂದ್ಯದಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿತ್ತು. ಮೊದಲ ಟೆಸ್ಟ್ ಪಂದ್ಯವನ್ನು 10 ವಿಕೆಟ್‌ಗಳಿಂದ ಸೋತಿದ್ದ ಟೀಂ ಇಂಡಿಯಾ ಎರಡನೇ ಟೆಸ್ಟ್ ಪಂದ್ಯವನ್ನು 7 ವಿಕೆಟ್‌ಗಳಿಂದ ಶರಣಾಗಿತ್ತು.