ಕೋವಿಡ್ ಲಸಿಕೆ ಪಡೆದು ಮಹತ್ವದ ಸಂದೇಶ ಸಾರಿದ ವಿರಾಟ್ ಕೊಹ್ಲಿ..!
* ಮೊದಲ ಹಂತದ ಕೋವಿಡ್ ಲಸಿಕೆ ಪಡೆದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ
* ಎಲ್ಲರೂ ಆದಷ್ಟು ಬೇಗ ಕೋವಿಡ್ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿದ ಕಿಂಗ್ ಕೊಹ್ಲಿ
* ಅನುಭವಿ ವೇಗಿ ಇಶಾಂತ್ ಶರ್ಮಾ ಕೂಡಾ ಲಸಿಕೆ ಪಡೆದಿದ್ದಾರೆ.
ನವದೆಹಲಿ(ಮೇ.10): ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮೊದಲ ಡೋಸ್ ಕೋವಿಡ್ 19 ಲಸಿಕೆ ಪಡೆದಿದ್ದು, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಲಸಿಕೆ ಪಡೆಯುತ್ತಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ. ಇದರ ಜತಗೆ ಮಹತ್ವದ ಸಂದೇಶವನ್ನು ಸಾರಿದ್ದಾರೆ.
ಹೌದು, ಕಿಂಗ್ ಕೊಹ್ಲಿ ಇಂದು(ಮೇ.10) ಮೊದಲ ಡೋಸ್ ಕೋವಿಡ್ ಲಸಿಕೆ ಪಡೆದಿದ್ದು, ಎಲ್ಲರೂ ಎಷ್ಟು ಸಾಧ್ಯವೋ ಅಷ್ಟು ಬೇಗ ಲಸಿಕೆ ಪಡೆಯಿರಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಟೀಂ ಇಂಡಿಯಾ ಮತ್ತೋರ್ವ ಆಟಗಾರ, ಅನುಭವಿ ವೇಗಿ ಇಶಾಂತ್ ಶರ್ಮಾ ಕೂಡಾ ತಾವು ಕೋವಿಡ್ ಲಸಿಕೆ ಪಡೆದಿರುವುದಾಗಿ ಟ್ವೀಟ್ ಮೂಲಕ ತಿಳಿಸಿದ್ದಾರೆ.
ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭಾರತ ಎದುರಿಸುತ್ತಿರುವ ಎರಡನೇ ಕೋವಿಡ್ ಅಲೆಯ ವಿರುದ್ದ ಹೋರಾಟಕ್ಕೆ ಕೈಜೋಡಿಸಿದ್ದು, 2 ಕೋಟಿ ರುಪಾಯಿ ದೇಣಿಗೆ ನೀಡಿದ್ದಾರೆ. ಇದಷ್ಟೇ ಅಲ್ಲದೇ ಕೆಟ್ಟೋ ಮೂಲಕ ಒಂದು ವಾರದಲ್ಲಿ 7 ಕೋಟಿ ರುಪಾಯಿ ಸಂಗ್ರಹಿಸುವ ಗುರಿ ಹೊಂದಿದ್ದಾರೆ. ವಿರಾಟ್ ಆರಂಭಿಸಿದ ದೇಣಿಗೆ ಅಭಿಯಾನಕ್ಕೆ ಮೊದಲ ದಿನವೇ ಮೂರೂವರೆ ಕೋಟಿ ಹಣ ಸಂಗ್ರಹವಾಗಿದೆ. ವಿರಾಟ್ ಅಭಿಯಾನಕ್ಕೆ ಯುಜುವೇಂದ್ರ ಚಹಲ್ ಸಹಾ 95 ಸಾವಿರ ರುಪಾಯಿ ದೇಣಿಗೆ ನೀಡಿ ದೇಶದ ಸಂಕಷ್ಟಕ್ಕೆ ನೆರವಾಗಿದ್ದಾರೆ.
ಕೋವಿಡ್ ಸಂಕಷ್ಟಕ್ಕೆ ಯುಜುವೇಂದ್ರ ಚಹಲ್ 95,000 ರೂ ದೇಣಿಗೆ..!
ಬಯೋ ಬಬಲ್‌ನೊಳಗೆ ಕೋವಿಡ್ ಪ್ರಕರಣಗಳು ಪತ್ತೆಯಾದ ಬೆನ್ನಲ್ಲೇ 14ನೇ ಆವೃತ್ತಿಯ ಐಪಿಎಲ್ ಟೂರ್ನಿಯನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಸದ್ಯ ವಿರಾಟ್ ಕೊಹ್ಲಿ ಜೂನ್ 18ರಿಂದ 22ರವರೆಗೆ ನಡೆಯಲಿರುವ ವಿಶ್ವಟೆಸ್ಟ್ ಚಾಂಪಿಯನ್ ಫೈನಲ್‌ಗೆ ಸಜ್ಜಾಗುತ್ತಿದ್ದಾರೆ.