Rohit Sharma ಟೀಂ ಇಂಡಿಯಾ ನಾಯಕನಿಗೆ ಕೋವಿಡ್ ದೃಢ..!
* ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಶಾಕ್
* ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾಗೆ ಕೋವಿಡ್ ದೃಢ
* ಜುಲೈ 01ರಿಂದ ಇಂಗ್ಲೆಂಡ್ ಎದುರಿನ ಟೆಸ್ಟ್ ಪಂದ್ಯ ಆರಂಭ
ಲೀಸೆಸ್ಟರ್(ಜೂ.26): ಇಂಗ್ಲೆಂಡ್ ಎದುರಿನ ಏಕೈಕ ಟೆಸ್ಟ್ ಪಂದ್ಯವನ್ನಾಡಲು ಲೀಸೆಸ್ಟರ್‌ಗೆ ಬಂದಿಳಿದು ಲೀಸೆಸ್ಟರ್‌ಶೈರ್ ಎದುರು ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿರುವ ಟೀಂ ಇಂಡಿಯಾಗೆ ಬಿಗ್ ಶಾಕ್ ಎದುರಾಗಿದೆ. ಅಭ್ಯಾಸ ಪಂದ್ಯದಲ್ಲಿ ಪಾಲ್ಗೊಂಡಿದ್ದ ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾಗೆ ಕೋವಿಡ್ 19 ಸೋಂಕು (Rohit Sharma tests positive for Covid 19) ತಗುಲಿರುವುದು ದೃಢಪಟ್ಟಿದೆ. ಜುಲೈ 01ರಿಂದ ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ಟೀಂ ಇಂಡಿಯಾ (Team India), ಇಂಗ್ಲೆಂಡ್ ಎದುರು ಟೆಸ್ಟ್ ಪಂದ್ಯವನ್ನಾಡಲಿದೆ.
ಕಳೆದ ವರ್ಷ ಭಾರತ ಕ್ರಿಕೆಟ್ ತಂಡವು 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್‌ಗೆ ತೆರಳಿತ್ತು. 4 ಪಂದ್ಯಗಳು ಮುಕ್ತಾಯದ ವೇಳೆಗೆ ಭಾರತ ತಂಡವು ಸರಣಿಯಲ್ಲಿ 2-1ರ ಮುನ್ನಡೆ ಸಾಧಿಸಿತ್ತು. ಇನ್ನು ಮ್ಯಾಂಚೆಸ್ಟರ್‌ನಲ್ಲಿ ನಡೆಯಬೇಕಿದ್ದ 5ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಭಾರತೀಯ ತಂಡದ ಪಾಳಯದಲ್ಲಿ ಕೋವಿಡ್ ಸೋಂಕು ಕಾಣಿಸಿಕೊಂಡಿದ್ದರಿಂದ ಕೊನೆಯ ಟೆಸ್ಟ್ ಪಂದ್ಯವನ್ನು ಮೊಟಕುಗೊಳಿಸಿ ತಂಡವು 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಳ್ಳಲು ತವರಿಗೆ ಯುಎಇನತ್ತ ಹಾರಿತ್ತು.
ಭಾನುವಾರವಾದ ಇಂದು ಬೆಳಗ್ಗೆ ಬಿಸಿಸಿಐ, ರೋಹಿತ್ ಶರ್ಮಾಗೆ ಕೋವಿಡ್ ತಗುಲಿರುವ ವಿಚಾರವನ್ನು ಟ್ವೀಟ್ ಮೂಲಕ ಖಚಿತಪಡಿಸಿದೆ. ಶನಿವಾರ ನಡೆಸಿದ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ವೇಳೆ ರೋಹಿತ್ ಶರ್ಮಾ ಅವರ ಕೋವಿಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ರೋಹಿತ್ ಶರ್ಮಾ ಅವರನ್ನು ಹೋಟೆಲ್‌ನ ರೂಂನಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ. ಬಿಸಿಸಿಐ ವೈದ್ಯಕೀಯ ಸಿಬ್ಬಂದಿಗಳು ಅವರ ಆರೋಗ್ಯದ ಮೇಲೆ ನಿಗಾಯಿಟ್ಟಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.
ರೋಹಿತ್ ಶರ್ಮಾಗೆ ಕೊಂಚ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಲೀಸೆಸ್ಟರ್‌ಶೈರ್ ಎದುರಿನ ಅಭ್ಯಾಸ ಪಂದ್ಯದ ಎರಡನೇ ಇನಿಂಗ್ಸ್‌ನಲ್ಲಿ ಅವರು ಬ್ಯಾಟಿಂಗ್ ಮಾಡಲು ಕಣಕ್ಕಿಳಿದಿರಲಿಲ್ಲ. ಇಂದು ಬಿಸಿಸಿಐ, ರೋಹಿತ್ ಶರ್ಮಾ ಅವರನ್ನು ಮತ್ತೊಮ್ಮೆ ಕೋವಿಡ್ ಟೆಸ್ಟ್‌ಗೆ ಒಳಪಡಿಸಲಿದೆ.
India Tour of England: 9 ತಿಂಗಳಲ್ಲಿ ಟೀಂ ಇಂಡಿಯಾದಲ್ಲಿ ಎಲ್ಲವೂ ಚೇಂಜ್
ಭಾರತ ಕ್ರಿಕೆಟ್ ತಂಡವು ಇಂಗ್ಲೆಂಡ್ ನೆಲದಲ್ಲಿ 2007ರಲ್ಲಿ ಕೊನೆಯ ಬಾರಿಗೆ ಟೆಸ್ಟ್ ಸರಣಿಯನ್ನು ಜಯಿಸಿದ ಸಾಧನೆ ಮಾಡಿತ್ತು. ಇದಾದ ಬಳಿಕ ಟೀಂ ಇಂಡಿಯಾ, ಆಂಗ್ಲರ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲಲು ಯಶಸ್ವಿಯಾಗಿರಲಿಲ್ಲ. ಬರ್ಮಿಂಗ್‌ಹ್ಯಾಮ್‌ನ ಎಡ್ಜ್‌ಬಾಸ್ಟನ್‌ನಲ್ಲಿ ನಡೆಯಲಿರುವ ಕೊನೆಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಗೆಲುವು ಇಲ್ಲವೇ ಡ್ರಾ ಮಾಡಿಕೊಂಡರೂ ಸಹಾ ಟೆಸ್ಟ್ ಸರಣಿ ಟೀಂ ಇಂಡಿಯಾ ಪಾಲಾಗಲಿದೆ.
ಒಂದು ವೇಳೆ ಜುಲೈ 01ರೊಳಗಾಗಿ ರೋಹಿತ್ ಶರ್ಮಾ ಕೋವಿಡ್‌ನಿಂದ ಚೇತರಿಸಿಕೊಂಡರೇ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ಭಾರತ ಟೆಸ್ಟ್ ತಂಡವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ. ಈ ವರ್ಷಾರಂಭದಲ್ಲಿ ವಿರಾಟ್ ಕೊಹ್ಲಿ ಭಾರತ ಟೆಸ್ಟ್ ತಂಡದ ನಾಯಕತ್ವದಿಂದ ಕೆಳಗಿಳಿದ ಬಳಿಕ ರೋಹಿತ್ ಶರ್ಮಾ ಮೂರು ಮಾದರಿಯ ತಂಡದ ನಾಯಕರಾಗಿ ನೇಮಕವಾಗಿದ್ದರು. ಆದರೆ ದಕ್ಷಿಣ ಆಫ್ರಿಕಾ ಪ್ರವಾಸದಲ್ಲಿನ ಟೆಸ್ಟ್ ಸರಣಿಗೂ ಮುನ್ನ ಗಾಯಕ್ಕೊಳಗಾಗಿದ್ದ ರೋಹಿತ್ ಶರ್ಮಾ ತಂಡದಿಂದ ಹೊರಗುಳಿದಿದ್ದರು. ಇದೀಗ ಒಂದು ವೇಳೆ ಇಂಗ್ಲೆಂಡ್ ಎದುರಿನ ಟೆಸ್ಟ್ ಸರಣಿಗೂ ಮುನ್ನ ರೋಹಿತ್ ಶರ್ಮಾ ಚೇತರಿಸಿಕೊಳ್ಳದಿದ್ದರೇ ಭಾರತ ತಂಡವನ್ನು ನಾಯಕನಾಗಿ ಯಾರು ಮುನ್ನಡೆಸಲಿದ್ದಾರೆ ಎನ್ನುವ ಕುತೂಹಲ ಜೋರಾಗಿದೆ.
ಅಭ್ಯಾಸ ಪಂದ್ಯ: ಬೃಹತ್ ಮೊತ್ತದತ್ತ ಭಾರತ
ಲೀಸೆಸ್ಟರ್: ಲೀಸೆಸ್ಟರ್‌ಶೈರ್ ವಿರುದ್ಧದ 4 ದಿನಗಳ ಅಭ್ಯಾಸ ಪಂದ್ಯದಲ್ಲಿ ಭಾರತ ಮತ್ತೆ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್‌್ಸನಲ್ಲಿ 2 ರನ್‌ಗಳ ಅಲ್ಪ ಮುನ್ನಡೆ ಸಾಧಿಸಿದ ಬಳಿಕ ಭಾರತ 2ನೇ ಇನ್ನಿಂಗ್‌್ಸನಲ್ಲಿ 6 ವಿಕೆಟ್ 343 ರನ್ ಕಲೆ ಹಾಕಿದ್ದು, ದೊಡ್ಡ ಮೊತ್ತದತ್ತ ದಾಪುಗಾಲಿಟ್ಟಿದೆ.
ಮೊದಲ ಇನ್ನಿಂಗ್‌್ಸನಲ್ಲಿ 248/8ಕ್ಕೆ ಇನ್ನಿಂಗ್‌್ಸ ಡಿಕ್ಲೇರ್ ಮಾಡಿಕೊಂಡಿದ್ದ ಭಾರತ ಲೀಸೆಸ್ಟರ್‌ಶೈರ್ ತಂಡವನ್ನು 246ಕ್ಕೆ ನಿಯಂತ್ರಿಸಿತು. ಬಳಿಕ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ತಲಾ ಅರ್ಧಶತಕದ ಮೂಲಕ ನೆರವಾಗಿದ್ದಾರೆ. ವಿರಾಟ್ 67 ರನ್‌ಗೆ ವಿಕೆಟ್ ಒಪ್ಪಿಸಿದರೆ, ಶ್ರೇಯಸ್ 62 ರನ್‌ಗೆ ವಿಕೆಟ್ ಒಪ್ಪಿಸಿದರು. ಶ್ರೀಕರ್ ಭರತ್(43) ಮತ್ತೊಮ್ಮೆ ಮಿಂಚಿದರೆ, ಶುಭ್‌ಮನ್ ಗಿಲ್ 38, ರವೀಂದ್ರ ಜಡೇಜಾ ಔಟಾಗದೆ 48 ರನ್ ಸಿಡಿಸಿದರು. ಲೀಸೆಸ್ಟರ್‌ಶೈರ್ ಪರ ನವದೀಪ್ ಸೈನಿ 3 ವಿಕೆಟ್ ಕಿತ್ತರೆ, ಕಮಲೇಶ್ ನಾಗರಕೋಟಿ 2 ವಿಕೆಟ್ ಪಡೆದರು. ಬೂಮ್ರಾ, ಸಾಯಿ ಕಿಶೋರ್ ತಲಾ 1 ವಿಕೆಟ್ ಕಬಳಿಸಿದರು.