ಟೀಂ ಇಂಡಿಯಾ ಬೌಲರ್ ಮೊಹಮ್ಮದ್ ಶಮಿ ಮನೆಗೆ ಪುಟ್ಟ ರಾಜಕುಮಾರಿ ಆಗಮನ| ಕಿವೀಸ್ ಪ್ರವಾಸದಲ್ಲಿರುವ ಶಮಿಗೆ ಗುಡ್‌ ನ್ಯೂಸ್| ಪುಟ್ಟ ಕಂದನಿಗೆ ಆದರದ ಸ್ವಾಗತ ಕೋರಿದ ಶಮಿ

ನವದೆಹಲಿ[ಫೆ.04]: ಭಾರತೀಯ ಕ್ರಿಕೆಟ್ ತಂಡದ ಬೌಲರ್ ಮೊಹಮ್ಮದ್ ಶಮಿ ಪುಟ್ಟ ಕಂದನ ಆಗಮನವಾಗಿದೆ. ಈ ಸಂಬಂಧ ಟ್ವೀಟ್ ಮಾಡಿರುವ ಮೊಹಮ್ಮದ್ ಶಮಿ ತನ್ನ ಅಭಿಮಾನಿಗಳೊಂದಿಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ. ಅಲ್ಲದೇ ಪುಟ್ಟ ರಾಜಕುಮರಿಗೆ ಆದರದ ಸ್ವಾಗತ ಕೋರಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು ಸದ್ಯ ಕಿವೀಸ್ ಪ್ರವಾಸದಲ್ಲಿರುವ ಮೊಹಮ್ಮದ್ ಶಮಿ ಪುಟ್ಟ ಕಂದಮ್ಮನ ಫೋಟೋ ಟ್ವೀಟ್ ಮಾಡುತ್ತಾ 'ನಮ್ಮ ಕುಟುಂಬಕ್ಕೆ ಮತ್ತೊಂದು ಹೆಣ್ಮಗುವಿನ ಆಗಮನವಾಗಿದೆ. ರಾಜಕುಮಾರೀ ನಿನಗೆ ಆದರದ ಸ್ವಾಗತ. ಅಣ್ಣನ ಕುಟುಂಬಕ್ಕೆ ಅಭಿನಂದನೆಗಳು' ಎಂದು ಬರೆದಿದ್ದಾರೆ.

Scroll to load tweet…

ಮೊಹಮ್ಮದ್ ಶಮಿ ಪತ್ನಿ ಅರೆಸ್ಟ್- ಹಸೀನಾ ಜಹಾನ್ ಬದುಕಲ್ಲಿ ಹೊಸ ಟ್ವಿಸ್ಟ್!

ಇತ್ತೀಚೆಗಷ್ಟೇ ಮಗಳ ಫೋಟೋ ಶೇರ್ ಮಾಡಿಕೊಂಡಿದ್ದ ಶಮಿ

ಇತ್ತೀಚೆಗಷ್ಟೇ ಶಮಿ ತನ್ನ ಮಗಳ ಫೋಟೋ ಶೇರ್ ಮಾಡಿಕೊಂಡಿದ್ದರು. ಈ ವೇಳೆ ನೀನು ತುಂಬಾ ಮುದ್ದಾಗಿ ಕಾಣಿಸುತ್ತೀ ಮಗಳೇ, ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ. ಭಗವಂತ ನಿನಗೆ ಒಳ್ಳೆದು ಮಾಡಲಿ. ಮುದ್ದಿನ ಮಗಳೇ ಶೀಘ್ರದಲ್ಲೇ ಬರುತ್ತೇನೆ' ಎಂದು ಬರೆದಿದ್ದರು. ಈ ಫೋಟೋ ಭಾರೀ ವೈರಲ್ ಆಗಿತ್ತು. 

View post on Instagram

ಹೆಂಡತಿ ಹಸೀನಾ ಜಹಾಂ ಜೊತೆ ವಿವಾದ

ಶಮಿ ಹೆಂಡತಿ ಹಸೀನಾ ಜಹಾಂ ತನ್ನ ಗಂಡನ ವಿರುದ್ಧ ಫಿಕ್ಸಿಂಗ್ ಹಾಗೂ ಬೇರೆ ಯುವತಿಯರ ಜೊತೆ ಅಕ್ರಮ ಸಂಬಂಧ ಇದೆ ಎಂಬ ಆರೋಪವೆಸಗಿದ್ದರು. ಅಲ್ಲದೇ ಶಮಿ ಅಣ್ಣನ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದರು.

ಪೂಜೆ ಮಾಡಿದ ಮೊಹಮ್ಮದ್ ಶಮಿ ಪುತ್ರಿ, ಮುಸ್ಲಿಂ ಸಂಪ್ರದಾಯವಾದಿಗಳು ಗರಂ!