ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಆರಂಭಕ್ಕೆ ಕ್ಷಣಗಣನೆಫೆಬ್ರವರಿ 09ರಿಂದ ಟೆಸ್ಟ್ ಸರಣಿ ಆರಂಭನಾಗ್ಪುರದಲ್ಲಿ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯ

ನಾಗ್ಪುರ(ಫೆ.04): ಆಸ್ಪ್ರೇಲಿಯಾ ವಿರುದ್ಧ ಫೆಬ್ರವರಿ 9ರಿಂದ ಆರಂಭವಾಗಲಿರುವ 4 ಪಂದ್ಯಗಳ ಟೆಸ್ಟ್‌ ಸರಣಿಗೆ ಶುಕ್ರವಾರ ನಾಗ್ಪುರದಲ್ಲಿ ಟೀಂ ಇಂಡಿಯಾ ಆಟಗಾರರು ಅಭ್ಯಾಸ ಆರಂಭಿಸಿದರು. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಚೇತೇಶ್ವರ ಪೂಜಾರ, ಶುಭ್‌ಮನ್‌ ಗಿಲ್‌ ಕೆಲ ಕಾಲ ನೆಟ್ಸ್‌ನಲ್ಲಿ ಬೆವರಿಳಿಸಿದರು. 

ಇತ್ತೀಚೆಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದ ಕೆ.ಎಲ್‌.ರಾಹುಲ್‌, ಗಾಯದಿಂದ ಚೇತರಿಸಿಕೊಂಡ ರವೀಂದ್ರ ಜಡೇಜಾ, ಟೆಸ್ಟ್‌ ಪಾದಾರ್ಪಣೆ ನಿರೀಕ್ಷೆಯಲ್ಲಿರುವ ಸೂರ್ಯಕುಮಾರ್‌ ಕೂಡಾ ಬ್ಯಾಟಿಂಗ್‌ ಅಭ್ಯಾಸ ನಡೆಸಿದರು. ಮೊಹಮದ್‌ ಸಿರಾಜ್‌, ಜಯ್‌ದೇವ್‌ ಉನಾದ್ಕತ್‌ ಕೂಡಾ ನೆಟ್ಸ್‌ನಲ್ಲಿ ಕಾಣಿಸಿಕೊಂಡರು.

Scroll to load tweet…

ಆಸೀಸ್‌ ಅಭ್ಯಾಸಕ್ಕೆ ‘ಅಶ್ವಿನ್‌’ ನೆರವು!

ಬೆಂಗಳೂರು: ಆರ್‌.ಅಶ್ವಿನ್‌ ಸೇರಿದಂತೆ ಭಾರತದ ಸ್ಪಿನ್‌ ದಾಳಿಯನ್ನು ದಿಟ್ಟವಾಗಿ ಎದುರಿಸಲು ಆಸ್ಪ್ರೇಲಿಯಾ ಹೊಸ ಮಾರ್ಗ ಕಂಡುಕೊಂಡಿದ್ದು ಅಶ್ವಿನ್‌ರಂತೆಯೇ ಬೌಲ್‌ ಮಾಡುವ ಬರೋಡಾದ ಮಹೇಶ್‌ ಪಿಥಿಯಾರನ್ನು ಶಿಬಿರಕ್ಕೆ ಕರೆತಂದು ಅಭ್ಯಾಸ ನಡೆಸುತ್ತಿದೆ. 

ಬೆಂಗಳೂರಿನ ಹೊರವಲಯದಲ್ಲಿರುವ ಆಲೂರು ಕೆಎಸ್‌ಸಿಎ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿರುವ ಆಸೀಸ್‌ ಆಟಗಾರರಿಗೆ ಶುಕ್ರವಾರ ಮಹೇಶ್‌ ಬೌಲ್‌ ಮಾಡಿದರು. 21 ವರ್ಷದ ಮಹೇಶ್‌ 2013ರಿಂದಲೂ ಅಶ್ವಿನ್‌ ಶೈಲಿಯನ್ನು ಅನುಕರಿಸುತ್ತಿದ್ದು, ಕಳೆದ ಡಿಸೆಂಬರ್‌ನಲ್ಲಿ ಬರೋಡಾ ಪರ ರಣಜಿ ಪಂದ್ಯವಾಡಿದ್ದರು. ಇದೇ ವೇಳೆ ಆಸೀಸ್‌ ಆಟಗಾರರು ಎಡಗೈ ಸ್ಪಿನ್ನರ್‌ಗಳನ್ನೂ ಬಳಸಿಕೊಂಡು ಅಭ್ಯಾಸ ನಡೆಸಿತು. ಟ್ರ್ಯಾವಿಸ್‌ ಹೆಡ್‌, ಲಾಬುಶೇನ್‌ ಕೂಡಾ ಕೆಲ ಸ್ಪಿನ್‌ ಅಭ್ಯಾಸ ನಡೆಸಿದರು.

ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ ಟೆಸ್ಟ್ ಸರಣಿಯ ವೇಳಾಪಟ್ಟಿ ಹೀಗಿದೆ: 

ಫೆಬ್ರವರಿ 9-12: ಮೊದಲ ಟೆಸ್ಟ್- ನಾಗ್ಪುರ
ಫೆಬ್ರವರಿ 17-21: ಎರಡನೇ ಟೆಸ್ಟ್- ಡೆಲ್ಲಿ
ಮಾರ್ಚ್‌ 01-05: ಮೂರನೇ ಟೆಸ್ಟ್ - ಧರ್ಮಶಾಲಾ
ಮಾರ್ಚ್‌ 09-13: ನಾಲ್ಕನೇ ಟೆಸ್ಟ್ - ಅಹಮದಾಬಾದ್

ಆಸೀಸ್‌ ಟೆಸ್ಟ್‌ ಸರಣಿಗೆ ಭಾರತ ತಂಡ ಹೀಗಿದೆ: 

ರೋಹಿತ್‌ ಶರ್ಮಾ, ಕೆ ಎಲ್ ರಾಹುಲ್‌, ಶುಭ್‌ಮನ್ ಗಿಲ್‌, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್‌ ಅಯ್ಯರ್, ಸೂರ್ಯಕುಮಾರ್ ಯಾದವ್, ಕೆ ಎಸ್ ಭರತ್‌, ಇಶಾನ್ ಕಿಶನ್‌, ರವಿಚಂದ್ರನ್‌ ಅಶ್ವಿನ್‌, ಅಕ್ಷರ್‌ ಪಟೇಲ್, ಕುಲ್ದೀಪ್‌ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್‌, ಉಮೇಶ್‌ ಯಾದವ್, ಜಯದೇವ್ ಉನಾದ್ಕತ್‌.

'ಈತನೇ ಭವಿಷ್ಯದ ತಾರೆ': ಶುಭ್‌ಮನ್ ಗಿಲ್‌ ಶತಕವನ್ನು ಗುಣಗಾನ ಮಾಡಿದ ವಿರಾಟ್ ಕೊಹ್ಲಿ..!

ಭಾರತ ಸರಣಿಗೆ ಆಸ್ಟ್ರೇಲಿಯಾ ತಂಡ ಹೀಗಿದೆ ನೋಡಿ:

ಪ್ಯಾಟ್ ಕಮಿನ್ಸ್‌(ನಾಯಕ), ಆಸ್ಟನ್ ಅಗರ್, ಸ್ಕಾಟ್ ಬೋಲೆಂಡ್, ಅಲೆಕ್ಸ್ ಕ್ಯಾರಿ, ಕ್ಯಾಮರೋನ್ ಗ್ರೀನ್, ಜೋಶ್ ಹೇಜಲ್‌ವುಡ್‌, ಪೀಟರ್‌ ಹ್ಯಾಂಡ್ಸ್‌ಕಂಬ್, ಟ್ರಾವಿಸ್ ಹೆಡ್‌, ಉಸ್ಮಾನ್ ಖವಾಜ, ಮಾರ್ನಸ್ ಲಬುಶೇನ್, ನೇಥನ್ ಲಯನ್, ಲಾನ್ಸ್ ಮೋರಿಸ್, ಟೋಡ್ ಮುರ್ಫೆ, ಮ್ಯಾಥ್ಯೂ ರೆನ್‌ಶೋ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್‌, ಮಿಚೆಲ್ ಸ್ವೆಪ್ಸನ್, ಡೇವಿಡ್ ವಾರ್ನರ್.