ಕಟಕ್(ಡಿ.22): ವೆಸ್ಟ್ ಇಂಡೀಸ್ ವಿರುದ್ದದ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಭಾರತ 316 ರನ್ ಗುರಿ ಬೆನ್ನಟ್ಟೋ ಮೂಲಕ ರೋಚಕ ಗೆಲುವು ದಾಖಲಿಸಿತು. ಇಷ್ಟೇ ಅಲ್ಲ ಏಕದಿನ ಸರಣಿಯನ್ನೂ ವಶಪಡಿಸಿಕೊಂಡಿತು.  ಈ ಮೂಲಕ ಟೀಂ ಇಂಡಿಯಾ ತನ್ನ ದಾಖಲೆಯನ್ನು ಮತ್ತಷ್ಟು ಉತ್ತಮ ಪಡಿಸಿಕೊಂಡಿತು. 300+ ಪ್ಲಸ್ ರೇನ್ ಚೇಸ್ ಮಾಡಿ ಗೆಲುವು ದಾಖಲಿಸಿದ ತಂಡಗಳ ಪೈಕಿ ಭಾರತದ ಸಾಧನೆ ಮತ್ತಷ್ಟು ಗಟ್ಟಿಗೊಂಡಿದೆ.

ಇದನ್ನೂ ಓದಿ:  ಕಟಕ್‌ನಲ್ಲಿ ವಿಂಡೀಸ್ ಉಡೀಸ್; ಏಕದಿನ ಸರಣಿ ಗೆದ್ದು ದಾಖಲೆ ಬರೆದ ಭಾರತ!

ಟೀಂ ಇಂಡಿಯಾ  ಏಕದಿನದಲ್ಲಿ  17 ಬಾರಿ 300 ಪ್ಲಸ್ ರನ್ ಚೇಸ್ ಮಾಡಿ ಗೆಲುವು ಸಾಧಿಸಿದ ಸಾಧನೆ ಮಾಡಿದೆ. ದ್ವಿತೀಯ ಸ್ಥಾನದಲ್ಲಿರುವ ಇಂಗ್ಲೆಂಡ್ 11 ಗೆಲುವು ದಾಖಲಿಸಿದೆ. ಈ ಮೂಲಕ ಭಾರತ ಹಾಗೂ ಇಂಗ್ಲೆಂಡ್ ನಡುವೆ 6 ಗೆಲುವಿನ ಅಂತರವಿದೆ. ಮೂರನೇ ಸ್ಥಾನವನ್ನು ಆಸ್ಟ್ರೇಲಿಯಾ ಹಾಗೂ ಶ್ರೀಲಂಕಾ ಹಂಚಿಕೊಂಡಿದೆ

ಇದನ್ನೂ ಓದಿ:  22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!.

 300+ ಪ್ಲಸ್ ರೇನ್ ಚೇಸ್ ಮಾಡಿದ ಯಶಸ್ವಿ ತಂಡ
17 ಭಾರತ*
11 ಇಂಗ್ಲೆಂಡ್
10 ಆಸ್ಟ್ರೇಲಿಯಾ/ ಶ್ರೀಲಂಕಾ
06 ಸೌತ್ ಆಫ್ರಿಕಾ / ಪಾಕಿಸ್ತಾನ

ವಿಂಡೀಸ್ ವಿರುದ್ಧಧ 3ನೇ ಏಕದಿನ ಪಂದ್ಯದಲ್ಲಿ ಭಾರತ 316 ರನ್ ಟಾರ್ಗೆಟ್ ಚೇಸ್ ಮಾಡಿದೆ. ಕೆಎಲ್ ರಾಹುಲ್ 77, ರೋಹಿತ್ ಶರ್ಮಾ 63, ನಾಯಕ ವಿರಾಟ್ ಕೊಹ್ಲಿ 85, ರವೀಂದ್ರ ಜಡೇಜಾ ಅಜೇಯ 39 ಹಾಗೂ ಶಾರ್ದೂಲ್ ಠಾಕೂರ್ ಅಜೇಯ 17 ರನ್ ಸಿಡಿಸೋ ಮೂಲಕ ಇನ್ನೂ 8 ಎಸೆತ ಬಾಕಿ ಇರುವಂತೆ ಗೆಲುವು ಸಾಧಿಸಿತು.