ಕಟಕ್(ಡಿ.22): ವೆಸ್ಟ್ ಇಂಡೀಸ್ ವಿರುದ್ಧದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 4 ವಿಕೆಟ್ ಗೆಲುವು ಸಾಧಿಸಿದೆ. ನಾಯಕ ವಿರಾಟ್ ಕೊಹ್ಲಿ ಸಿಡಿಸಲಬ್ಬರದ ಬ್ಯಾಟಿಂಗ್, ಕೆಎಲ್ ರಾಹುಲ್, ರೋಹಿತ್ ಶರ್ಮಾ ಹಾಫ್ ಸೆಂಚುರಿ ನೆರವಿನಿಂದ ಟೀಂ ಇಂಡಿಯಾ 316 ರನ್ ಬೃಹತ್ ಗುರಿ ಬೆನ್ನಟ್ಟಿದೆ. ಈ ಮೂಲಕ 2-1 ಅಂತರದಲ್ಲಿ ಏಕದಿನ ಸರಣಿ ಕೈವಶ ಮಾಡಿತು. ಈ ಮೂಲಕ ವಿಂಡೀಸ್ ವಿರುದ್ಧ  ಸತತ 10ನೇ ಸರಣಿ ಗೆಲುವಿನ ಮೂಲಕ ದಾಖಲಿಸಿತು.

ಇದನ್ನೂ ಓದಿ:  22 ವರ್ಷಗಳ ಹಳೆಯ ಜಯಸೂರ್ಯ ದಾಖಲೆ ಮುರಿದ ರೋಹಿತ್ ಶರ್ಮಾ!

316 ರನ್ ಬೃಹತ್  ಟಾರ್ಗೆಟ್ ಪಡೆದ ಟೀಂ ಇಂಡಿಯಾ ಗೆಲ್ಲಲೇಬೇಕಾದ ಛಲದಲ್ಲಿ ಕಣಕ್ಕಿಳಿಯಿತು. ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಅದ್ಭುತ ಆರಂಭ ನೀಡಿದರು. ಇವರಿಬ್ಬರ ಜೊತೆಯಾಟಕ್ಕೆ ವಿಂಡೀಸ್ ಬೌಲರ್ ಸುಸ್ತಾದರು. ಇವರಿಬ್ಬರು ಮೊದಲ ವಿಕೆಟ್‌ಗೆ 122 ರನ್ ಜೊತೆಯಾಟ ನೀಡಿದರು. ಇಷ್ಟೇ ಅಲ್ಲ ರಾಹುಲ್ ಹಾಗೂ ರೋಹಿತ್ ಹಾಫ್ ಸೆಂಚುರಿ ದಾಖಲಿಸಿದರು.

ರೋಹಿತ್ ಶರ್ಮಾ 63 ಎಸೆತದಲ್ಲಿ 8 ಬೌಂಡರಿ 1 ಸಿಕ್ಸರ್ ಮೂಲಕ 63 ರನ್ ಸಿಡಿಸಿ ಔಟಾದರು. 89 ಎಸೆತ ಎದುರಿಸಿದ ರಾಹುಲ್ 8 ಬೌಂಡರಿ 1 ಸಿಕ್ಸರ್ 77 ರನ್ ಸಿಡಿಸಿ ಔಟಾದರು. ಆರಂಭಿಕರ ವಿಕೆಟ್ ಪತನದ ನಂತರ ನಾಯಕ ವಿರಾಟ್ ಕೊಹ್ಲಿ  ಅಬ್ಬರ ಆರಂಭಗೊಂಡಿತು. ಆದರೆ ಕೊಹ್ಲಿಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. 

ಶ್ರೇಯಸ್ ಅಯ್ಯರ್ 7 , ರಿಷಪ್ ಪಂತ್ 7 ರನ್ ಸಿಡಿಸಿಸಿ ಔಟಾದರು. ಇನ್ನು ಕೇದಾರ್ ಜಾದವ್ ಕೇವಲ  9 ರನ್ ಸಿಡಿಸಿ ಔಟಾದರು. ಕೊಹ್ಲಿ ಹಾಗೂ ರವೀಂದ್ರ ಜಡೇಜಾ ಜೊತೆಯಾಟ, ವೆಸ್ಟ್ ಇಂಡೀಸ್ ತಂಡಕ್ಕೆ ಅಪಾಯದ ಸೂಚನೆ ನೀಡಿತು. ರವೀಂದ್ರ ಜಡೇಜಾ ಹಾಗೂ ಠಾಕೂರ್ ಬ್ಯಾಟಿಂಗ್‌ನಿಂದ 48.4 ಓವರ್‌ಗಳಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ಸಾಧಿಸಿತು. ಜಡೇಜಾ ಅಜೇಯ 39 ರನ್ ಹಾಗೂ ಠಾಕೂರ್ ಅಜೇಯ 17 ರನ್ ಸಿಡಿಸಿದರು. ಭಾರತ 4 ವಿಕೆಟ್ ಗೆಲುವು ಸಾಧಿಸಿ, 2-1 ಅಂತರದಲ್ಲಿ ಗೆಲುವು ಸಾಧಿಸಿತು.