* ಆಕರ್ಷಕ ಬ್ಯಾಟಿಂಗ್ ಮೂಲಕ ಗಮನ ಸೆಳೆಯುತ್ತಿರುವ ಸೂರ್ಯಕುಮಾರ್ ಯಾದವ್* ಮೂರನೇ ಟಿ20 ಪಂದ್ಯದಲ್ಲಿ ಆಕರ್ಷಕ ಅರ್ಧಶತಕ ಚಚ್ಚಿದ ಸೂರ್ಯ* ಐಸಿಸಿ ಟಿ20 ರ‍್ಯಾಂಕಿಂಗ್‌​​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟ ಸೂರ್ಯಕುಮಾರ್

ಬೆಂಗಳೂರು(ಆ.04): ಕ್ರಿಕೆಟ್ ಆಟದಲ್ಲಿ ಆಟಗಾರರನ್ನು ಅಡ್ಡ ಹೆಸರಿನಿಂದ ಕರೆಯುವುದು ಕಾಮನ್​​​​. ಹಾಗೇನೆ ಸ್ಕೈರನ್ನೂ ಕೂಡ. Sky ಅಂದ್ರೆ ಸೂರ್ಯ ಕುಮಾರ್​ ಯಾದವ್​ ಅಂತ. ಹೆಸರಿನಲ್ಲಿದ್ದಂತೆ ಸೂರ್ಯ ಕ್ರಿಕೆಟ್​​​​ ಅಂಗಳ ಅದ್ಭುತ ಆಟದಿಂದಾಗಿ ಬೆಳಗುತ್ತಿದ್ದಾರೆ. ಸದ್ಯ ಟೀಂ​ ಇಂಡಿಯಾದಲ್ಲಿ ಈ 31ರ ಸ್ಕೈ ನದ್ದೇ ಮೇನಿಯಾ ಅಂದ್ರು ತಪ್ಪಲ್ಲ ಬಿಡಿ. ಹೌದು, ಸದಾ ನಿರ್ಭೀತಿ ಆಟಕ್ಕೆ ಸೂರ್ಯಕುಮಾರ್​​ ಯಾದವ್ ಫೇಮಸ್​​​​​​. ಆ ಆಟ ವಿಂಡೀಸ್ ಎದುರಿನ 3ನೇ ಟಿ20 ಪಂದ್ಯದಲ್ಲಿ ಮತ್ತೆ ಮರುಕಳಿಸ್ತು. ಅಟ್ಯಾಕಿಂಗ್​ ಬ್ಯಾಟಿಂಗ್​​​ ಹಾಗೂ ಸ್ಟೈಲಿಸ್​ ಹೊಡೆತಗಳ ಮೂಲಕ ಗಮನ ಸೆಳೆದ ಸೂರ್ಯ ಬಿರುಸಿನ 76 ರನ್​ ಬಾರಿಸಿ, ಗೆಲುವಿಗೆ ಕಾರಣರಾಗಿದ್ರು. ಸದ್ಯ ಸ್ಕೈ ಆರಂಭಿಕನಾಗಿ ಅರ್ಧಶತಕ ಸಿಡಿಸೋದ್ರೊಂದಿಗೆ ತಾನು ಎಲ್ಲಾ ಸ್ಲಾಟ್​​​ನಲ್ಲೂ ಹೀಗೆ ಆಡಬಲ್ಲೆ ಎಂದು ಸಾಬೀತು ಮಾಡಿದ್ದಾರೆ.

ಸ್ಕೈ ಓಪನರ್​​​, ಮಿಡಲ್ ಆರ್ಡರ್​​​​ & ಫಿನಿಶರ್​​​ ಎಲ್ಲಾ:

ಇಂತಹ ಬಹುಮುಖ ಪ್ರತಿಭೆ ಕ್ರಿಕೆಟರ್ಸ್​ ಇರೋದು ಕಮ್ಮಿ. ಆ ವಿಚಾರದಲ್ಲಿ ಟೀಂ ಇಂಡಿಯಾ ಅದೃಷ್ಟ ಮಾಡಿದೆ. ಯಾಕಂದ್ರೆ ಸ್ಕೈ ಅಂತ ಕರೆಸಿಕೊಳ್ಳುವ ಸೂರ್ಯ ಎಲ್ಲಾ ಸ್ಲಾಟ್​​​ನಲ್ಲೂ ಆಡಬಲ್ಲ ಟ್ಯಾಲೆಂಟೆಡ್​​ ಪ್ಲೇಯರ್​​​. ಮೊದಲು ಮಧ್ಯಕ್ರಮಾಂಕದಲ್ಲಿ ಸಕ್ಸಸ್​ ಕಂಡು, ಬಳಿಕ ಆರಂಭಿಕನಾಗಿ ಬಡ್ತಿ ಪಡಿದಿದ್ರು. ಸದ್ಯ ಈ ಆರಂಭಿಕನ ಜವಾಬ್ದಾರಿ ಜೊತೆ ಫಿನಿಶರ್ ಆಗಿಯೂ ಹೊರಹೊಮ್ಮಿದ್ದಾರೆ. ವಿಂಡೀಸ್​​ ಎದುರು 3ನೇ ಟಿ20 ಪಂದ್ಯದಲ್ಲಿ ಓಪನರ್ ಆಗಿ ಅರ್ಧಶತಕ ಸಿಡಿಸಿದ್ದಲ್ಲದೇ ಸುದೀರ್ಘ ಕಾಲ ಬ್ಯಾಟಿಂಗ್ ನಡೆಸಿದ್ರು. ಚೇಸಿಂಗ್ ವೇಳೆಯೂ ನಿರ್ಭೀತಿ ಆಟದೊಂದಿಗೆ ತಂಡದ ಗೆಲುವಿನ ಈಸಿಯಾಗಿಸಿದ್ರು. ಹೀಗಾಗಿ ಸೂರ್ಯನೊಳಗೊಬ್ಬ ಮಿಡಲ್ ಆರ್ಡರ್​​, ಓಪನರ್​ ಮತ್ತು ಫಿನಿಶರ್​​ ಇದ್ದಾನೆ ಅನ್ನೋದು ಪ್ರೂವ್ ಆಗಿದೆ.

ವಿಕೆಟ್ ಕೀಪರ್ ತಲೆಯ ಮೇಲೆ ಚೆಂಡನ್ನು ಬೌಂಡರಿಗಟ್ಟಿದ ಸೂರ್ಯಕುಮಾರ್ ಯಾದವ್..! ವಿಡಿಯೋ ವೈರಲ್

ಎಲ್ಲಾ ಬೌಲರ್ಸ್​ ಮೇಲೆ 140 ಪ್ಲಸ್​ ಸ್ಟೈಕ್​ರೇಟ್​​: 

ಹೌದು, ಸೂರ್ಯ ಬ್ಯಾಟಿಂಗ್​​ ಅಂದ್ರೆ ಎಂತಹ ಬೌಲರ್​ ಆದ್ರೂ ಥಂಡಾ ಹೊಡಿತಾರೆ. ಯಾಕಂದ್ರೆ ಸ್ಕೈ ಸ್ಟ್ರೈಕ್​ರೇಟೆ ಹಾಗಿದೆ. ಇವರು ರೈಟ್​​​​ ಆರ್ಮ್​ ಪೇಸರ್​​ಗೆ 152 ಸ್ಟ್ರೈಕರೇಟ್​ ಹೊಂದಿದ್ರೆ, ಲೆಫ್ಟಿ ಪೇಸ್​​ 159.23, ಆಫ್​ ಬ್ರೇಕರ್​​ 146.21, ಲೆಗ್ ಬ್ರೇಕರ್​​​ 143.82 ಹಾಗೂ ಲೆಫ್ಟ್​ ಆರ್ಥಡಕ್ಸ್​​​​ ಬೌಲರ್​​​ ಎದುರು 116.58ರ ಸ್ಟೈಕ್​ರೇಟ್​ ಹೊಂದಿದ್ದಾರೆ. 

ಟಿ20 ರ‍್ಯಾಂಕಿಂಗ್‌​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆ : 

ರಣಭಯಂಕರ ಸ್ಕೈ, ಐಸಿಸಿ ಟಿ20 ರ‍್ಯಾಂಕಿಂಗ್‌​​​ನಲ್ಲಿ 2ನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ. ಸೂರ್ಯಕುಮಾರ್ 816 ಪಾಯಿಂಟ್ಸ್​​ ಹೊಂದಿದ್ದು, ಇನ್ನೂ 2 ಪಾಯಿಂಟ್ಸ್​ ಸಂಪಾದಿಸಿದ್ರೆ ನಂ.1 ಸ್ಥಾನದಲ್ಲಿರೋ ಪಾಕ್​​​ನ ಬಾಬರ್ ಅಜಾಮ್​​​ರನ್ನ ಹಿಂದಿಕ್ಕಲಿದ್ದಾರೆ.