Asianet Suvarna News Asianet Suvarna News

ಅಭ್ಯಾಸ ಪಂದ್ಯಕ್ಕಾಗಿ ಲೀಸೆಸ್ಟರ್‌ಗೆ ತಲುಪಿದ ಟೀಮ್ ಇಂಡಿಯಾ!

ಆತಿಥೇಯ ಇಂಗ್ಲೆಂಡ್ ವಿರುದ್ಧ ಬಹುನಿರೀಕ್ಷಿತ 5ನೇ ಟೆಸ್ಟ್‌ಗೆ ಪೂರ್ವಭಾವಿಯಾಗಿ ಟೀಂ ಇಂಡಿಯಾ ಮುಂದಿನ ಏಳು ದಿನಗಳ ಕಾಲ ಲೀಸೆಸ್ಟರ್‌ನಲ್ಲಿ ಠಿಕಾಣಿ ಹೂಡಲಿದ್ದಾರೆ. ಇಲ್ಲಿ ಅವರು ಲೀಸೆಸ್ಟರ್ಷೈರ್ ಫಾಕ್ಸ್ ತಂಡದ ವಿರುದ್ಧ ನಾಲ್ಕು ದಿನಗಳ ಅಭ್ಯಾಸ ಪಂದ್ಯವನ್ನು ಆಡಲಿದ್ದಾರೆ.

Team India arrive in Leicester for warm up match Against Leicestershire Foxes India tour of England san
Author
Bengaluru, First Published Jun 20, 2022, 10:08 PM IST

ಲೀಸೆಸ್ಟರ್ (ಜೂನ್ 20): ವಿಶ್ವ ಕ್ರಿಕೆಟ್‌ನಲ್ಲಿ (World Cricke) ತನ್ನ ನಿರ್ಭೀತ ಕ್ರಿಕೆಟ್ ( fearless brand of cricket)ಮೂಲಕ ಗಮನಸೆಳೆದಿರುವ ಇಂಗ್ಲೆಂಡ್ (England)ವಿರುದ್ಧ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಟೀಮ್ ಇಂಡಿಯಾ (Team India) ಇಂಗ್ಲೆಂಡ್ ತಲುಪಿದೆ. ಲೀಸೆಸ್ಟರ್ಷೈರ್ ಫಾಕ್ಸ್  (Leicestershire Foxes) ವಿರುದ್ಧ ಜೂನ್ 24 ರಿಂದ ನಡೆಯಲಿರುವ ಚತುರ್ದಿನ ಅಭ್ಯಾಸ ಪಂದ್ಯಕ್ಕಾಗಿ (Four Day Warm Up Match)ತಂಡದ ಸಿದ್ಧತೆ ಈಗಾಗಲೇ ಆರಂಭವಾಗಿದೆ.

ಇದು ಕಳೆದ ವರ್ಷ ಇಂಗ್ಲೆಂಡ್ ನೆಲದಲ್ಲಿ ನಡೆದ ಐದು ಪಂದ್ಯಗಳ ಟೆಸ್ಟ್ ಸರಣಿಯ ಮುಂದುವರಿದ ಭಾಗವಾಗಿ ನಡೆಯಲಿರುವ ಏಕೈಕ ಟೆಸ್ಟ್ ಆಗಿದೆ. ನಾಲ್ಕು ಪಂದ್ಯಗಳ ಅಂತ್ಯಕ್ಕೆ ಟೀಂ ಇಂಡಿಯಾ 2-1 ಮುನ್ನಡೆಯಲ್ಲಿದೆ. ಕೋವಿಡ್-19 ಕಾರಣದಿಂದಾಗಿ ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಸರಣಿ ಮುಗಿಸಲು ಸಾಧ್ಯವಾಗಿರಲಿಲ್ಲ. ವಿಶ್ವ ಟೆಸ್ಟ್ ಚಾಂಪಿಯನ್‌ಷಿಪ್‌ನ (world test championship) ಅಂಕದೊಂದಿಗೆ ಪ್ರತಿಷ್ಠೆ ಕೂಡ ಪಣವಾಗಿದೆ. ಆತಿಥೇಯ ಇಂಗ್ಲೆಂಡ್ ತಂಡ ಸರಣಿಯನ್ನು ಸಮಬಲ ಸಾಧಿಸುವ ಏಕಮೇವ ಗುರಿಯಲ್ಲಿದ್ದರೆ, ಭಾರತ ತಂಡ ಗೆಲುವು ಅಥವಾ ಕನಿಷ್ಠ ಡ್ರಾ ಸಾಧಿಸುವ ಗುರಿಯಲ್ಲಿದೆ.

ಲೀಸೆಸ್ಟರ್‌ನಲ್ಲಿ ಭಾರತ ತಂಡ 7 ದಿನಗಳ ಕಾಲ ವಾಸ್ತವ್ಯ ಹೂಡಲಿದ್ದು ಆ ಬಳಿಕ ಏಕೈಕ ಟೆಸ್ಟ್ ಪಂದ್ಯಕ್ಕಾಗಿ ಬರ್ಮಿಂಗ್ ಹ್ಯಾಂಗೆ ಪ್ರಯಾಣಿಸಲಿದೆ. ಜುಲೈ 1 ರಂದು ನಡೆಯಲಿರುವ ಟೆಸ್ಟ್ ಪಂದ್ಯಕ್ಕೆ ಮುಂಚಿತವಾಗಿ, ಭಾರತವು ತನ್ನ ಏಕೈಕ ಅಭ್ಯಾಸ ಪಂದ್ಯದಲ್ಲಿ ಕೌಂಟಿ ತಂಡ ಲೀಸೆಸ್ಟರ್‌ಶೈರ್ ಅನ್ನು ಎದುರಿಸಲಿದೆ, ಜೂನ್ 24 ರಂದು ಪ್ರಾರಂಭವಾಗುವ ನಾಲ್ಕು ದಿನಗಳ ಪಂದ್ಯದಲ್ಲಿ ರೋಹಿತ್ ಶರ್ಮ ತಂಡವನ್ನು ಮುನ್ನಡೆಸಲಿದ್ದಾರೆ.


ನಾಯಕ ರೋಹಿತ್ ಶರ್ಮಾ ಲೀಸೆಸ್ಟರ್‌ಶೈರ್‌ನಲ್ಲಿ ಭಾರತದ ಮೊದಲ ತರಬೇತಿ ಶಿಬಿರವನ್ನು ಕೂಡಿಕೊಳ್ಳುವುದರೊಂದಿಗೆ ಭಾರತದ ಪೂರ್ಣಪ್ರಮಾಣದ ತಂಡ ಇಂಗ್ಲೆಂಡ್ ನಲ್ಲಿ ನೆಲೆ ನಿಂತಂತಾಗಿದೆ. ವಿರಾಟ್ ಕೊಹ್ಲಿ, ಜಸ್ಪ್ರೀತ್ ಬುಮ್ರಾ, ರವೀಂದ್ರ ಜಡೇಜಾ, ಚೇತೇಶ್ವರ ಪೂಜಾರ ಮತ್ತು ಶಾರ್ದೂಲ್ ಠಾಕೂರ್ ಇದ್ದ ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಗಳ ಮೊದಲ ಬ್ಯಾಚ್ ಜೂನ್ 16 ರಂದು ಲಂಡನ್‌ಗೆ ತೆರಳಿತ್ತು. ಅದಾದ ಒಂದು ದಿನದ ಬಳಿಕ ನಾಯಕ ರೋಹಿತ್ ಶರ್ಮ ನೇತೃತ್ವದ 2ನೇ ಬ್ಯಾಚ್ ಇಂಗ್ಲೆಂಡ್‌ಗೆ ತೆರಳಿತ್ತು.

2ನೇ ಬ್ಯಾಚ್‌ನಲ್ಲಿ ತಂಡ ಬೆಂಗಳೂರಿನಿಂದ ಇಂಗ್ಲೆಂಡ್‌ಗೆ ಪ್ರಯಾಣಿಸಿತು. ಇದರಲ್ಲಿ ರಿಷಭ್ ಪಂತ್ ಹಾಗೂ ಶ್ರೇಯಸ್ ಅಯ್ಯರ್ ಕೂಡ ಸೇರಿದ್ದರು. ಇವರಿಬ್ಬರೂ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯ ಭಾಗವಾಗಿದ್ದರು. ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ರಿಷಭ್ ಪಂತ್ ತಮಡವನ್ನು ಮುನ್ನಡೆಸಿದ್ದರು. ಕೆಎಲ್‌ ರಾಹುಲ್ ತೊಡೆಸಂಧು ಗಾಯದಿಂದಾಗಿ ಸರಣಿಯಿಂದ ಹೊರಗುಳಿದಿದ್ದರು.

ಕಳೆದ 8 ವರ್ಷಗಳಲ್ಲಿ ಭಾರತದಲ್ಲಿ ಚೆಸ್ ಸಾಕಷ್ಟು ಪ್ರಗತಿಯಾಗಿದೆ: ಪ್ರಧಾನಿ ಮೋದಿ

ಲೀಸೆಸ್ಟರ್‌ನಲ್ಲಿ ಟೀಮ್ ಇಂಡಿಯಾ ಅಭ್ಯಾಸ ನಡೆಸುತ್ತಿರುವ ಚಿತ್ರಗಳಲ್ಲಿ ಬಿಸಿಸಿಐ ಪ್ರಕಟಿಸಿದೆ. ಇದರಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮ ಅವರೊಂದಿಗೆ ನೆಟ್ ಬೌಲರ್ ಕಮಲೇಶ್ ನಾಗರಕೋಟಿ, ಶಾರ್ದೂಲ್ ಠಾಕೂರ್ ಹಾಗೂ ಜಸ್ಪ್ರೀತ್ ಬುಮ್ರಾ ಅವರ ಜೊತೆ ಅಭ್ಯಾಸ ನಡೆಸಿದ್ದಾರೆ. ಕಳೆದ ವರ್ಷದ ಸರಣಿಗೆ ಹೋಲಿಸಿದರೆ, ಎರಡೂ ತಂಡಗಳಲ್ಲಿ ಬಹುದೊಡ್ಡ ಬದಲಾವಣೆಯಾಗಿದೆ. ಟೀಂ ಇಂಡಿಯಾದ ಟೆಸ್ಟ್ ನಾಯಕತ್ವವನ್ನು ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮ ವಹಿಸಿಕೊಂಡಿದ್ದರೆ, ಇಂಗ್ಲೆಂಡ್ ತಂಡ ಜೋ ರೂಟ್ ಬದಲು ಬೆನ್ ಸ್ಟೋಕ್ಸ್ ನಾಯಕತ್ವವನ್ನು ಪಡೆದುಕೊಂಡಿದೆ.

ಮಗನ ಫಸ್ಟ್‌ ಫೋಟೋ ಜೊತೆ ಹೆಸರನ್ನೂ ರೀವಿಲ್‌ ಮಾಡಿದ ಕ್ರಿಕೆಟಿಗ Yuvraj Singh

ವಿಶ್ವ ಚಾಂಪಿಯನ್ ನ್ಯೂಜಿಲೆಂಡ್ ವಿರುದ್ಧದ 3-ಟೆಸ್ಟ್ ಸರಣಿಯಲ್ಲಿ ಅಜೇಯ 2-0 ಮುನ್ನಡೆ ಸಾಧಿಸಿದ ಇಂಗ್ಲೆಂಡ್, ಅತ್ಯಾಕರ್ಷಕ ಮತ್ತು ನಿರ್ಭೀತ ಬ್ರಾಂಡ್ ಕ್ರಿಕೆಟ್‌ನಲ್ಲಿ ಆಡುವ ಮೂಲಕ ಏಕಪಕ್ಷೀಯ ಟೆಸ್ಟ್‌ಗೆ ಹೋಗುತ್ತಿರುವುದರಿಂದ ಭಾರತವು ಕಠಿಣ ಸವಾಲನ್ನು ಎದುರಿಸಲಿದೆ.

 

Follow Us:
Download App:
  • android
  • ios