ಚೆಪಾಕ್‌ನ ಕಿಂಗ್ಸ್ ಕದನದಲ್ಲಿ ಸೋತ ಚೆನ್ನೈ ಸೂಪರ್ ಕಿಂಗ್ಸ್!
ತನ್ನ ಭದ್ರಕೋಟೆ ಎನಿಸಿಕೊಂಡಿರುವ ಚೆಪಾಕ್ ಕ್ರೀಡಾಂಗಣದಲ್ಲೇ ಚೆನ್ನೈಗೆ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಸೋಲು ಎದುರಾಯಿತು. ಆಡಿರುವ 10 ಪಂದ್ಯಗಳಲ್ಲಿ 5ನೇ ಸೋಲು ಕಂಡ ಚೆನ್ನೈ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿದರೆ, ಪಂಜಾಬ್ 10ರಲ್ಲಿ 4ನೇ ಗೆಲುವು ಸಾಧಿಸಿ ಪ್ಲೇ-ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಚೆನ್ನೈ: ಹಾಲಿ ಚಾಂಪಿಯನ್, ಈ ಬಾರಿಯೂ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ ಎಂದೇ ಟೂರ್ನಿಗೆ ಕಾಲಿರಿಸಿದ್ದ ಚೆನ್ನೈ ಸೂಪರ್ ಕಿಂಗ್ಸ್ ಈಗ ಅಸ್ಥಿರ ಆಟವಾಡುತ್ತಿದ್ದು, ಸೋಲುಗಳೂ ತಂಡವನ್ನು ಬೆಂಬಿಡದೆ ಕಾಡುತ್ತಿದೆ.
ತನ್ನ ಭದ್ರಕೋಟೆ ಎನಿಸಿಕೊಂಡಿರುವ ಚೆಪಾಕ್ ಕ್ರೀಡಾಂಗಣದಲ್ಲೇ ಚೆನ್ನೈಗೆ ಬುಧವಾರ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಸೋಲು ಎದುರಾಯಿತು. ಆಡಿರುವ 10 ಪಂದ್ಯಗಳಲ್ಲಿ 5ನೇ ಸೋಲು ಕಂಡ ಚೆನ್ನೈ ಪ್ಲೇ-ಆಫ್ ಹಾದಿಯನ್ನು ಕಠಿಣಗೊಳಿಸಿದರೆ, ಪಂಜಾಬ್ 10ರಲ್ಲಿ 4ನೇ ಗೆಲುವು ಸಾಧಿಸಿ ಪ್ಲೇ-ಆಸೆಯನ್ನು ಜೀವಂತವಾಗಿರಿಸಿಕೊಂಡಿತು.
ಮತ್ತೆ ಟಾಸ್ ಸೋತ ಚೆನ್ನೈ ಬ್ಯಾಟಿಂಗ್‌ಗೆ ಇಳಿಸಲ್ಪಟ್ಟಿತು. ಋತುರಾಜ್‌ರ ಏಕಾಂಗಿ ಹೋರಾಟದ ಹೊರತಾಗಿಯೂ ತಂಡ 7 ವಿಕೆಟ್‌ಗೆ 162 ರನ್ ಮಾತ್ರ ಕಲೆಹಾಕಿತು. ಕಳೆದ ಪಂದ್ಯದಲ್ಲಿ ಕೋಲ್ಕತಾ 262 ರನ್ ಬೆನ್ನತ್ತಿ ಗೆದ್ದಿದ್ದ ಪಂಜಾಬ್‌ಗೆ 163 ರನ್ ಸುಲಭ ತುತ್ತಾಯಿತು. ತಂಡ 000 ಓವರಲ್ಲಿ 00 ವಿಕೆಟ್ ನಷ್ಟದಲ್ಲಿ ಜಯಭೇರಿ ಬಾರಿಸಿತು.
IPL 2024: ರುತುರಾಜ್ ಶೈನ್, ಸವಾಲಿನ ಮೊತ್ತ ಪೇರಿಸಿದ ಚೆನ್ನೈ ಸೂಪರ್ ಕಿಂಗ್ಸ್!
ಪ್ರಭ್‌ಸಿಮ್ರನ್(13) ಬೇಗನೇ ಪೆವಿಲಿಯನ್‌ಗೆ ಮರಳಿದರೂ, ರೀಲಿ ರೋಸ್ಸೌ ಹಾಗೂ ಜಾನಿ ಬೇರ್‌ಸ್ಟೋವ್ ಚೆನ್ನೈ ಬೌಲರ್‌ಗಳನ್ನು ಚೆಂಡಾಡಿದರು. ಈ ಜೋಡಿ 2ನೇ ವಿಕೆಟ್‌ಗೆ 64 ರನ್ ಸೇರಿಸಿತು. ಬೇರ್‌ಸ್ಟೋಬ್ 46, ರೋಸ್ಸೌ 43 ರನ್ ಗಳಿಸಿ ಔಟಾದ ಬಳಿಕ, ಶಶಾಂಕ್(26) ಹಾಗೂ ಸ್ಯಾಮ್ ಕರ್ರನ್(25) ತಂಡವನ್ನು ಗೆಲುವಿನ ದಡ ಸೇರಿಸಿತು.
ಋತು ಆಸರೆ: ಪವರ್-ಪ್ಲೇನಲ್ಲಿ ವಿಕೆಟ್ ನಷ್ಟವಿಲ್ಲದೆ 55 ರನ್ ಗಳಿಸಿದ್ದ ಚೆನ್ನೈ ಇದ್ದಕ್ಕಿದ್ದಂತೆ ಕುಸಿಯಿತು. 7ರಿಂದ 15 ಓವರ್ ತನಕ ಒಂದೂ ಬೌಂಡರಿ ಬಾರಿಸದ ತಂಡ ಈ 9 ಓವರಲ್ಲಿ ಕೇವಲ 47 ರನ್ ಗಳಿಸಿ, 3 ವಿಕೆಟ್ ಕೂಡಾ ಕಳೆದುಕೊಂಡಿತು. ಆದರೆ ಟೂರ್ನಿಯುದ್ದಕ್ಕೂ ಚೆನ್ನೈನ ಕೈ ಹಿಡಿದಿದ್ದ ನಾಯಕ ಋತುರಾಜ್(48 ಎಸೆತದಲ್ಲಿ 52) ಈ ಪಂದ್ಯದಲ್ಲೂ ತಂಡಕ್ಕೆ ಆಸರೆಯಾದರು. ಉಳಿದಂತೆ ರಹಾನೆ 29, ಸಮೀರ್ ರಿಜ್ವಿ 21 ರನ್ ಕೊಡುಗೆ ನೀಡಿದರು.
ಟಿ20 ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾದಲ್ಲಿ ಸ್ಥಾನ ಪಡೆಯದ ನತದೃಷ್ಟ ಕ್ರಿಕೆಟಿಗರಿವರು..!
ಸ್ಕೋರ್: ಚೆನ್ನೈ 20 ಓವರಲ್ಲಿ 162/7 (ಋತುರಾಜ್ 62, ರಾಹುಲ್ ಚಹರ್ 2-16, ಬ್ರಾರ್ 2-17), ಪಂಜಾಬ್ 17.5 ಓವರಲ್ಲಿ 163 (ಬೇರ್‌ಸ್ಟೋವ್ 46, ರೋಸ್ಸೌ 43, ದುಬೆ 1-14)
10ರಲ್ಲಿ 9 ಪಂದ್ಯದಲ್ಲಿ ಟಾಸ್ ಸೋತ ಋತು!
ಚೆನ್ನೈ ನಾಯಕ ಋತುರಾಜ್ ಗಾಯಕ್ವಾಡ್ ಈ ಬಾರಿ 10 ಪಂದ್ಯಗಳನ್ನಾಡಿದ್ದು, ಈ ಪೈಕಿ 9ರಲ್ಲಿ ಟಾಸ್ ಸೋತಿದ್ದಾರೆ. ಅವರು ಕೋಲ್ಕತಾ ವಿರುದ್ಧ ಪಂದ್ಯದಲ್ಲಿ ಮಾತ್ರ ಟಾಸ್ ಗೆದ್ದಿದ್ದರು.
66 ಸಿಕ್ಸರ್: ಧೋನಿ ಐಪಿಎಲ್‌ನ 20ನೇ ಓವರ್‌ನಲ್ಲಿ 66 ಸಿಕ್ಸರ್ ಸಿಡಿಸಿದ್ದಾರೆ. ಕೀರನ್ ಪೊಲ್ಲಾರ್ಡ್ 33 ಸಿಕ್ಸರ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
ವಿಶ್ವಕಪ್‌ಗೆ ಆಯ್ಕೆಯಾದ ದುಬೆ ಬೌಲಿಂಗ್ ಆರಂಭ!
ಟಿ20 ವಿಶ್ವಕಪ್‌ನ ಭಾರತ ತಂಡಕ್ಕೆ ಆಯ್ಕೆಯಾದ ಶಿವಂ ದುಬೆ ಈ ಬಾರಿ ಐಪಿಎಲ್‌ನಲ್ಲಿ ಮೊದಲ ಬಾರಿ ಬೌಲಿಂಗ್ ಮಾಡಿದರು. ಪಂಜಾಬ್ ವಿರುದ್ಧ ಅವರು 1 ಓವರ್ ಬೌಲ್ ಮಾಡಿ 14 ರನ್‌ಗೆ 1 ವಿಕೆಟ್ ಪಡೆದರು. ಆಲ್ರೌಂಡರ್ ಆಗಿದ್ದರೂ ಈ ಬಾರಿ ಐಪಿಎಲ್‌ನ ಮೊದಲ 9 ಪಂದ್ಯಗಳಲ್ಲಿ ದುಬೆಗೆ ಬೌಲಿಂಗ್ ಅವಕಾಶ ಸಿಕ್ಕಿರಲಿಲ್ಲ.