ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಟೆಸ್ಟ್ ಸರಣಿಯಾಡಲು ಸಜ್ಜಾಗುತ್ತಿರುವ ಟೀಂ ಇಂಡಿಯಾ ಬಯೋಬಬಲ್ ಪ್ರವೇಶಿಸುವ ಮುನ್ನ ಕೊರೋನಾ ಟೆಸ್ಟ್‌ಗೆ ಒಳಗಾಗಿದ್ದು, ಅದರ ರಿಪೋರ್ಟ್ ಹೊರಬಿದ್ದಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ. 

ಚೆನ್ನೈ(ಜ.30): ಇಂಗ್ಲೆಂಡ್‌ ವಿರುದ್ಧ ಮೊದಲೆರಡು ಟೆಸ್ಟ್‌ಗಳನ್ನು ಆಡಲು ಚೆನ್ನೈಗೆ ತೆರಳಿರುವ ಭಾರತ ಕ್ರಿಕೆಟ್‌ ತಂಡದ ಆಟಗಾರರ ಮೊದಲ ಕೋವಿಡ್‌ ಪರೀಕ್ಷಾ ವರದಿ ಬಂದಿದ್ದು, ಯಾರಿಗೂ ಕೊರೋನಾ ಸೋಂಕು ತಗುಲಿಲ್ಲ ಎನ್ನುವುದು ದೃಢಪಟ್ಟಿದೆ. 

Add Asianetnews Kannada as a Preferred SourcegooglePreferred

ಆಟಗಾರರು ಹೋಟೆಲ್‌ ಕೊಠಡಿಯಲ್ಲಿ ಕ್ವಾರಂಟೈನ್‌ಗೆ ಒಳಪಟ್ಟಿದ್ದು, ಕೆಲವರ ಕುಟುಂಬ ಸದಸ್ಯರೂ ಬಯೋ ಬಬಲ್‌ ಪ್ರವೇಶಿಸಿದ್ದಾರೆ. ಒಟ್ಟು 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದು, ಈ ಅವಧಿಯಲ್ಲಿ ಇನ್ನೂ 2 ಬಾರಿ ಕೋವಿಡ್‌ ಪರೀಕ್ಷೆಗೆ ಒಳಗಾಗಲಿದ್ದಾರೆ. ಫೆಬ್ರವರಿ 2ರಿಂದ ತಂಡ ಅಭ್ಯಾಸ ಆರಂಭಿಸಲಿದ್ದು, ಫೆ.5ರಿಂದ ಮೊದಲ ಟೆಸ್ಟ್‌ ಚೆನ್ನೈನಲ್ಲಿ ಆರಂಭಗೊಳ್ಳಲಿದೆ.

ಟೆಸ್ಟ್ ಸರಣಿಯಾಡಲು ಚೆನ್ನೈ ತಲುಪಿದ ಭಾರತ, ಇಂಗ್ಲೆಂಡ್‌ ತಂಡಗಳು

ಟೀಂ ಇಂಡಿಯಾ ಆಟಗಾರರು ಹೋಟೆಲ್‌ ರೂಂನಲ್ಲೇ ಫಿಟ್ನೆಸ್‌ ಅಭ್ಯಾಸ ನಡೆಸುತ್ತಿದ್ದಾರೆ. ನಾಯಕ ವಿರಾಟ್‌ ಕೊಹ್ಲಿ ಕೊಠಡಿಯಲ್ಲಿ ವರ್ಕೌಟ್‌ ಮಾಡುತ್ತಿರುವ ವಿಡಿಯೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಾಕಿದ್ದು, ಫೋಟೋ ವೈರಲ್‌ ಆಗಿದೆ. ಈಗಾಗಲೇ ಬಾರ್ಡರ್‌-ಗವಾಸ್ಕರ್ ಟೆಸ್ಟ್ ಸರಣಿ ಗೆದ್ದು ಬೀಗುತ್ತಿರುವ ಟೀಂ ಇಂಡಿಯಾ, ಪ್ರವಾಸಿ ಇಂಗ್ಲೆಂಡ್ ವಿರುದ್ದ ತವರಿನಲ್ಲಿ ಅಂತಹದ್ದೇ ಪ್ರದರ್ಶನ ತೋರುವ ವಿಶ್ವಾಸದಲ್ಲಿದೆ. 

View post on Instagram