ಟೆಸ್ಟ್ ಸರಣಿಯಾಡಲು ಚೆನ್ನೈ ತಲುಪಿದ ಭಾರತ, ಇಂಗ್ಲೆಂಡ್ ತಂಡಗಳು
ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಟೆಸ್ಟ್ ಸರಣಿಯಾಡಲು ಚೆನ್ನೈಗೆ ಬಂದಿಳಿದಿವೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.
ಚೆನ್ನೈ(ಜ.28): ಬಹುನಿರೀಕ್ಷಿತ ಟೆಸ್ಟ್ ಸರಣಿಯಲ್ಲಿ ಪಾಲ್ಗೊಳ್ಳಲು ಭಾರತ ಹಾಗೂ ಇಂಗ್ಲೆಂಡ್ ತಂಡಗಳು ಬುಧವಾರ ಚೆನ್ನೈ ತಲುಪಿದವು. ಶ್ರೀಲಂಕಾದಲ್ಲಿ 2-0 ಅಂತರದಲ್ಲಿ ಸರಣಿ ಗೆದ್ದ ಜೋ ರೂಟ್ ಪಡೆ ಬುಧವಾರ ಬೆಳಗ್ಗೆ 10.30ಕ್ಕೆ ಚೆನ್ನೈಗೆ ಬಂದಿಳಿಯಿತು. ವಿಮಾನ ನಿಲ್ದಾಣದಲ್ಲಿ ಆಟಗಾರರ ಕೋವಿಡ್ ಪರೀಕ್ಷೆ ನಡೆಸಲಾಯಿತು. ಬಳಿಕ ನೇರವಾಗಿ ಹೋಟೆಲ್‌ಗೆ ತೆರಳಿದ ಆಟಗಾರರು, ಐಸೋಲೇಷನ್‌ಗೆ ಒಳಗಾದರು.
ಭಾರತ ತಂಡದ ಉಪನಾಯಕ ಅಜಿಂಕ್ಯ ರಹಾನೆ, ರೋಹಿತ್ ಶರ್ಮಾ, ಕೋಚ್ ರವಿಶಾಸ್ತ್ರಿ ಮಂಗಳವಾರ ರಾತ್ರಿಯೇ ಚೆನ್ನೈ ತಲುಪಿದ್ದರು. ನಾಯಕ ವಿರಾಟ್ ಕೊಹ್ಲಿ, ಚೇತೇಶ್ವರ್ ಪೂಜಾರ, ಜಸ್‌ಪ್ರೀತ್ ಬುಮ್ರಾ, ರಿಷಭ್ ಪಂತ್ ಸೇರಿ ಉಳಿದ ಆಟಗಾರರು ಬುಧವಾರ ಆಗಮಿಸಿದರು.
ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ 3 ಸ್ಪಿನ್ನರ್ಸ್ ಕಣಕ್ಕೆ?
ಎರಡೂ ತಂಡಗಳ ಆಟಗಾರರು, ಸಿಬ್ಬಂದಿ 6 ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರಲಿದ್ದು, 3 ಬಾರಿ ಕೋವಿಡ್ ಪರೀಕ್ಷೆಗೆ ಒಳಗಾಗಲಿದ್ದಾರೆ. ಫೆ.2ರಿಂದ ತಂಡಗಳು ಅಭ್ಯಾಸ ಆರಂಭಿಸಲಿದ್ದು, ಮೊದಲ ಟೆಸ್ಟ್ ಫೆ.5ರಿಂದ ಇಲ್ಲಿನ ಚೆಪಾಕ್ ಕ್ರೀಡಾಂಗಣದಲ್ಲಿ ನಡೆಯಲಿದೆ.