Asianet Suvarna News Asianet Suvarna News

ಮದುವೆಯಾದ ವರ್ಷಗಳ ಬಳಿಕ ಮೊದಲ ಬಾರಿಗೆ ಅತ್ತೆಯನ್ನು ಭೇಟಿ ಮಾಡಿದ ಹಾರ್ದಿಕ್ ಪಾಂಡ್ಯ; ವಿಡಿಯೋ ವೈರಲ್..!

ಕುಟುಂಬದ ಜತೆಗಿನ ಮುದ್ದಾದ ವಿಡಿಯೋ ಹಂಚಿಕೊಂಡ ಹಾರ್ದಿಕ್ ಪಾಂಡ್ಯ
ಮೊದಲ ಬಾರಿಗೆ ನತಾಶಾ ಕುಟುಂಬವನ್ನು ಭೇಟಿ ಮಾಡಿದ ಪಾಂಡ್ಯ
ದಕ್ಷಿಣ ಆಫ್ರಿಕಾ ಎದುರಿನ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿರುವ ಪಾಂಡ್ಯ

Team India all rounder Hardik Pandya meets wife Natasa Stankovic family for the first time video goes viral kvn
Author
First Published Sep 29, 2022, 5:52 PM IST

ಮುಂಬೈ(ಸೆ.29): ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್‌ ಪಾಂಡ್ಯ, ಇದೇ ಮೊದಲ ಬಾರಿಗೆ ತಮ್ಮ ಪತ್ನಿ ನತಾಶಾ ಸ್ಟ್ಯಾಂಕೋವಿಕ್ ಅವರ ತಾಯಿ ಹಾಗೂ ಮತ್ತವರ ಕುಟುಂಬವನ್ನು ಭೇಟಿ ಮಾಡಿದ್ದಾರೆ. ಹಾರ್ದಿಕ್ ಪಾಂಡ್ಯ-ನತಾಶಾ ಸ್ಟಾಂಕೋವಿಚ್ ಜೋಡಿಯು 2020ರ ಜನವರಿ 01ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದಾದ ಬಳಿಕ ಹಾರ್ದಿಕ್ ಪಾಂಡ್ಯ ಮೇ 31, 2020ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇನ್ನು ಈ ಜೋಡಿಯು ಜುಲೈ 30ರಂದು ಅಗಸ್ತ್ಯ ಎನ್ನುವ ಮುದ್ದಾದ ಮಗುವನ್ನು ಸ್ವಾಗತಿಸಿದ್ದರು.

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಪೋಸ್ಟ್‌ ಮಾಡಿದ್ದು, ನತಾಶಾ ಕುಟುಂಬವನ್ನು ಮೊದಲ ಬಾರಿಗೆ ಭೇಟಿಯಾಗುತ್ತಿರುವುದಾಗಿ ತಿಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ತಮ್ಮ ಅತ್ತೆ ರಾಧಾ ಅವರನ್ನು ಭೇಟಿಯಾಗಿ ಅಪ್ಪಿಕೊಳ್ಳುವ ವಿಡಿಯೋ ಸಾಕಷ್ಟು ವೈರಲ್ ಆಗಿದೆ. 

ತಮ್ಮ ಅಳಿಯನನ್ನು ಭೇಟಿಯಾದ ಬಳಿಕ ಮಾತನಾಡಿದ ರಾಧಾ, ನನಗೆ ಅವರು ಬಂದೇ ಬರುತ್ತಾರೆ ಎನ್ನುವುದು ಗೊತ್ತಿತ್ತು ಎಂದಿದ್ದಾರೆ. ಇನ್ನು 28 ವರ್ಷದ ಹಾರ್ದಿಕ್ ಪಾಂಡ್ಯ, ಫೋನ್ ಕಾಲ್, ವಿಡಿಯೋ ಕಾಲ್‌ನಿಂದ ಕೊನೆಗೂ ಅದ್ಭುತ ವ್ಯಕ್ತಿಗಳನ್ನು ಮೊದಲ ಬಾರಿಗೆ ಭೇಟಿ ಮಾಡಿದೆ. ಒಳ್ಳೆಯ ಸ್ಮರಣೀಯ ಕ್ಷಣಗಳು ಎಂದು ವಿಡಿಯೋ ಜತೆ ಬರೆದುಕೊಂಡಿದ್ದಾರೆ.

ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟಾಂಕೋವಿಚ್‌ ಕೋವಿಡ್ 19 ಸೋಂಕು ವಕ್ಕರಿಸುವ ಮುನ್ನವೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದರು. ಇದಾದ ಬಳಿಕ ಈ ಜೋಡಿ ಹಲವು ಸುಂದರ ಕ್ಷಣಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. 

Ind vs SA ಕ್ಯಾಪ್ಟನ್‌ ಕೂಲ್ ಎಂ ಎಸ್ ಧೋನಿ ದಾಖಲೆ ಮುರಿದ ರೋಹಿತ್ ಶರ್ಮಾ..!

ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ಸದ್ಯ ದಕ್ಷಿಣ ಆಫ್ರಿಕಾ ವಿರುದ್ದದ ಮೂರು ಪಂದ್ಯಗಳ ಟಿ20 ಸರಣಿಯಿಂದ ವಿಶ್ರಾಂತಿ ಪಡೆದಿದ್ದು, ಮುಂಬರುವ ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ಭಾರತ ಕ್ರಿಕೆಟ್ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 16ರಿಂದ ಆಸ್ಟ್ರೇಲಿಯಾದಲ್ಲಿ ಆರಂಭವಾಗಲಿದೆ. 

ಟೀಂ ಇಂಡಿಯಾ ಆಲ್ರೌಂಡರ್ ರವೀಂದ್ರ ಜಡೇಜಾ ಫಿಟ್ನೆಸ್ ಕಾರಣದಿಂದ ಭಾರತ ತಂಡದಿಂದ ಹೊರಬಿದ್ದಿದ್ದಾರೆ. ಹೀಗಾಗಿ ಜಡೇಜಾ ಅನುಪಸ್ಥಿತಿಯಲ್ಲಿ ಹಾರ್ದಿಕ್ ಪಾಂಡ್ಯ ಅವರಿಂದ ಹೆಚ್ಚಿನ ಪ್ರಮಾಣದ ನೆರವನ್ನು ಟೀಂ ಇಂಡಿಯಾ ನಿರೀಕ್ಷಿಸುತ್ತಿದೆ. ಹಾರ್ದಿಕ್ ಪಾಂಡ್ಯ ಮ್ಯಾಚ್ ಫಿನಿಶರ್ ಮಾತ್ರವಲ್ಲದೇ ಅಗತ್ಯ ಸಂದರ್ಭದಲ್ಲಿ ಬೌಲಿಂಗ್‌ನಲ್ಲಿಯೂ ತಂಡಕ್ಕೆ ನೆರವಾಗಬೇಕಿದೆ. 
 

Follow Us:
Download App:
  • android
  • ios