Asianet Suvarna News Asianet Suvarna News

ಮಿಚೆಲ್ ಸ್ಟಾರ್ಕ್​- ಅಲೀಸಾ ಹೀಲಿ ಕ್ರಿಕೆಟ್​​ ಜಗತ್ತಿನ ಚಾಂಪಿಯನ್​ ಜೋಡಿ..!

ಮಿಚೆಲ್ ಸ್ಟಾರ್ಕ್​- ಅಲೀಸಾ ಹೀಲಿ ಕ್ರಿಕೆಟ್​​ ಜಗತ್ತಿನ ಜನಪ್ರಿಯ ಜೋಡಿ
2016 ರಲ್ಲಿ ಸಪ್ತಪದಿ ತುಳಿದ ಸ್ಟಾರ್ಕ್​ ಮತ್ತು ಹೀಲಿ ಜೋಡಿ
ಈ ಜನಪ್ರಿಯ ಪೇರ್​​​ ಬರೋಬ್ಬರಿ 8 ಐಸಿಸಿ ಟ್ರೋಫಿಗಳನ್ನ ಗೆದ್ದಿದೆ. 

Mitchell Starc Alyssa Healy duo celebrates Australia gold medal win in Commonwealth Games womens cricket kvn
Author
Bengaluru, First Published Aug 11, 2022, 3:40 PM IST

ಬೆಂಗಳೂರು(ಆ.11): ಮಿಚೆಲ್​ ಸ್ಟಾರ್ಕ್​ ಹಾಗೂ ಅಲೀಸಾ ಹೀಲಿ ಯಾರಿಗೆ ತಾನೆ ಗೊತ್ತಿಲ್ಲ. ಸ್ಟಾರ್ಕ್​  ಡೆಡ್ಲಿ ಪೇಸರ್​​. ಭಯಾನಕ ದಾಳಿಯಿಂದಲೇ ಕ್ರಿಕೆಟ್ ಲೋಕವನ್ನ ನಡುಗಿಸಿದ್ದಾನೆ. ಇನ್ನೂ ಹೀಲಿ ಅಂದ್ರೆ ಸ್ಟಾರ್ಕ್​ ಪತ್ನಿ. ಇವರು ಕೂಡ ಆಸ್ಟ್ರೇಲಿಯಾದ ಸ್ಟಾರ್​​​ ಆಟಗಾರ್ತಿ. ಇವರಿಬ್ಬರ ಆಟಕ್ಕೆ ಫಿದಾ ಆಗದವರಿಲ್ಲ. 2016 ರಲ್ಲಿ ಸಪ್ತಪದಿ ತುಳಿದ ಸ್ಟಾರ್ಕ್​ ಮತ್ತು ಹೀಲಿ ಕ್ರಿಕೆಟ್ ದುನಿಯಾದ ಚಾಂಪಿಯನ್​ ಕಪಲ್ಸ್ ಅಂತಾನೇ ಕರೆಸಿಕೊಳ್ತಿದ್ದಾರೆ. 

ಇನ್ನು ಸ್ಟಾರ್ಕ್​ ಹಾಗೂ ಹೀಲಿಯನ್ನ ಮೋಸ್ಟ್​​ ಸೆಲಬ್ರಿಟಿ ಪೇರ್​​ ಅಂತ ಕರಿಯೋಕೆ ಕಾರಣವಿದೆ. ಈ ಜನಪ್ರಿಯ ಪೇರ್​​​ ಬರೋಬ್ಬರಿ 8 ಐಸಿಸಿ ಟ್ರೋಫಿಗಳನ್ನ ಗೆದ್ದಿದೆ. ಸ್ಟಾರ್ಕ್‌ ಹೆಂಡತಿ ಹೀಲಿ 6 ಐಸಿಸಿ ಟ್ರೋಫಿ ಗೆದ್ದ ಆಸೀಸ್​ ತಂಡದಲ್ಲಿದ್ರೆ, ಗಂಡ ಸ್ಟಾರ್ಕ್​ ಎರಡು ಬಾರಿ ವಿಶ್ವಕಪ್ ಗೆದ್ದ ತಂಡದ ಭಾಗವಾಗಿದ್ದಾರೆ.

8 ವಿಶ್ವಕಪ್​​​​​..ಹೀಲಿ 6 ವಿಶ್ವಕಪ್​ ವಿಜೇತ ಸದಸ್ಯೆ..: 

ಅಲೀಸಾ ಹೀಲಿ ಒಟ್ಟು ಆರು ಐಸಿಸಿ ವಿಶ್ವಕಪ್​​​​​ಗಳನ್ನು ಗೆದ್ದ ಆಸ್ಟ್ರೇಲಿಯಾ ತಂಡದ ಸದಸ್ಯೆ. 2010, 2012, 2014, 2018 ಮತ್ತು 2020ರಲ್ಲಿ ಟಿ20 ಮಹಿಳಾ ವಿಶ್ವಕಪ್ ಗೆದ್ದಾಗ ತಂಡದಲ್ಲಿದ್ರು. 2013 ರಲ್ಲಿ  ಏಕದಿನ ವಿಶ್ವಕಪ್ ಗೆದ್ದಾಗ ಕೂಡ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡದ ಭಾಗವಾಗಿದ್ರು. ಇನ್ನು ಇದಷ್ಟೇ ಅಲ್ಲ ಇತ್ತೀಚೆಗಷ್ಟೇ ಮುಗಿದ ಬರ್ಮಿಂಗ್‌ಹ್ಯಾಮ್‌ ಕಾಮನ್​ವೆಲ್ತ್​​ ಗೇಮ್ಸ್​​ನಲ್ಲಿ ಆಸೀಸ್​ ತಂಡ ಭಾರತ ಮಣಿಸಿ ಚಿನ್ನದ ಪದಕ ಗೆದ್ದಿತ್ತು. ಈ ತಂಡದಲ್ಲೂ ಹೀಲಿ ಸ್ಥಾನ ಪಡೆದಿದ್ದು ವಿಶೇಷ.

Commonwealth Games ಭಾರತ ಮಹಿಳಾ ತಂಡದ ಫೈನಲ್ ಸೋಲಿಗೆ ಕಿಡಿಕಾರಿದ ಮೊಹಮ್ಮದ್ ಅಜರುದ್ದೀನ್‌..!

ಇನ್ನು ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಎರಡು ಐಸಿಸಿ ವಿಶ್ವಕಪ್ ವಿಜೇತ ತಂಡದ ಆಟಗಾರ ಅನ್ನಿಸಿದ್ದಾರೆ. 2015ರ ಒನ್ಡೇ ವರ್ಲ್ಡ್ ಕಪ್ ಹಾಗೂ 2021ರ ಐಸಿಸಿ ಟಿ20 ವಿಶ್ವಕಪ್ ವಿಜೇತ ಆಸ್ಟ್ರೇಲಿಯಾ ತಂಡದಲ್ಲಿ ಮಿಚೆಲ್ ಸ್ಟಾರ್ಕ್ ಇದ್ದರು.

ಹೀಲಿಗೆ ಬಿಗ್​ ಸಪೋರ್ಟರ್​​​ ಸ್ಟಾರ್ಕ್​ : 

ಹೌದು, ಪ್ರೀತಿಸಿ ವಿವಾಹವಾದ ಹೀಲಿಗೆ ಪತಿ ಸ್ಟಾರ್ಕ್​ ಬಿಗ್​​​ ಸಪೋರ್ಟರ್​ ಅಂದ್ರು ತಪ್ಪಲ್ಲ. ಆಸೀಸ್​ ಮಹಿಳಾ ತಂಡ ವಿಶ್ವಕಪ್​​ನಲ್ಲಿ ಫೈನಲ್​ ಪ್ರವೇಶಿಸಿದಾಗಲೆಲ್ಲ ಸ್ಟಾರ್ಕ್​ ಕ್ರಿಕೆಟ್​ಗೆ ಚಕ್ಕರ್​ ಹಾಕ್ತಾರೆ. ಸ್ಟೇಡಿಯಂಗೆ ಹೋಗಿ ಮುದ್ದಿನ ಮಡದಿಗೆ ಸಪೋರ್ಟ್​ ಮಾಡ್ತಾರೆ. ಇನ್ನು ಹೀಲಿ ಕೂಡ ಅಷ್ಟೇ, ಆಸೀಸ್​ ಮೆನ್ಸ್​ ಟೀಮ್​​ ಫೈನಲ್​​​​​ಗೆ ಎಂಟ್ರಿಕೊಟ್ರೆ ತಾವು ಮೈದಾನಕ್ಕೆ ತೆರಳಿ ಸಪೋರ್ಟ್​ ಮಾಡೋದನ್ನ ಮರೆಯಲ್ಲ. ಫೈನಲಿ ಸ್ಟಾರ್ಕ್​-ಹೀಲಿ ಚಾಂಪಿಯನ್​ ಪೇರ್​ ಮಾತ್ರವಲ್ಲ, ಮೋಸ್ಟ್​​ ಲಕ್ಕಿ ಪೇರ್ ಅಂದ್ರು ತಪ್ಪಲ್ಲ.

Follow Us:
Download App:
  • android
  • ios