Asianet Suvarna News Asianet Suvarna News

141 ಎಸೆತಗಳಲ್ಲಿ 277 ರನ್‌..! ಲಿಸ್ಟ್‌ ಎ ಕ್ರಿಕೆಟ್‌ನ ವಿಶ್ವದಾಖಲೆ ಪುಡಿಗಟ್ಟಿದ ಎನ್‌.ಜಗದೀಶನ್‌!


ತಮಿಳುನಾಡು ತಂಡದ ಆಟಗಾರ ನಾರಾಯಣನ್‌ ಜಗದೀಶನ್ ಲಿಸ್ಟ್‌ ಎ (50 ಓವರ್‌ಗಳ ಏಕದಿನ ಮಾದರಿ) ಕ್ರಿಕೆಟ್‌ನ ಹೊಸ ವಿಶ್ವದಾಖಲೆ ನಿರ್ಮಾಣ ಮಾಡಿದ್ದಾರೆ. ಕೇವಲ 141 ಎಸೆತಗಳಲ್ಲಿ 277 ರನ್‌ ಸಿಡಿಸುವ ಮೂಲಕ ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಗರಿಷ್ಠ ರನ್‌ಗಳ ವಿಶ್ವದಾಖಲೆ ನಿರ್ಮಿಸಿದ್ದಾರೆ. 20 ವರ್ಷಗಳ ಹಿಂದೆ ಆಲಿಸ್ಟರ್‌ ಬ್ರೌನ್‌ ಅವರ 268 ರನ್‌ ದಾಖಲೆಯನ್ನು ಅವರು ಮುರಿದಿದ್ದಾರೆ.

Tamil Nadu Cricketer Narayan Jagadeesan 277 off 141 balls shatters world records in List A cricket san
Author
First Published Nov 21, 2022, 1:35 PM IST

ಬೆಂಗಳೂರು (ನ.21): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಸೋಮವಾರ ನಡೆದ ತಮಿಳುನಾಡು ಹಾಗೂ ಅರುಣಾಚಲ ಪ್ರದೇಶ ನಡುವವಿನ ವಿಜಯ್‌ ಹಜಾರೆ ಟ್ರೋಫಿಯ ಪಂದ್ಯದಲ್ಲಿ, ಎನ್‌.ಜಗದೀಶನ್‌ ಬಾರಿಸಿದ 141 ಎಸೆತಗಳ 277 ರನ್‌ಗಳ ನೆರವಿನಿಂದ ತಮಿಳುನಾಡು ತಂಡ 50 ಓವರ್‌ಗಳಲ್ಲಿ 2 ವಿಕೆಟ್‌ಗೆ 506 ರನ್‌ಗಳ ದಾಖಲೆ ಮೊತ್ತ ಪೇರಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ಮಾಜಿ ಆಟಗಾರ ಎನ್‌.ಜಗದೀಶನ್‌ ಬಾರಿಸಿರುವ ಈ ಮೊತ್ತ ಲಿಸ್ಟ್‌ ಎ ಕ್ರಿಕೆಟ್‌ನ ವಿಶ್ವದಾಖಲೆ ಎನಿಸಿದೆ. ಪುರುಷರ ಲಿಸ್ಟ್‌ ಎ ಕ್ರಿಕೆಟ್‌ ಅಂದರೆ 50 ಓವರ್‌ಗಳ ದೇಶೀಯ ಮಾದರಿಯ ಕ್ರಿಕೆಟ್‌ನಲ್ಲಿ ಸರ್ವಾಧಿಕ ಸ್ಕೊರ್‌ ಎನಿಸಿದೆ. ಇದಕ್ಕೂ ಮುನ್ನ 2002ರಲ್ಲಿ ಗ್ಲಾಮರ್ಗನ್‌ ವಿರುದ್ಧ ಇಂಗ್ಲೆಂಡ್‌ನ ಆಲಿಸ್ಟರ್‌ ಬ್ರೌನ್‌ ಬಾರಿಸಿದ 268 ರನ್‌ ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ವಿಶ್ವದಾಖಲೆಯ ಮೊತ್ತ ಎನಿಸಿತ್ತು. ಅದಲ್ಲದೆ, ಪುರುಷರು ಹಾಗೂ ಮಹಿಳೆಯರ ಲಿಸ್ಟ್‌ ಎ ಕ್ರಿಕೆಟ್‌ನಲ್ಲೂ ಇದು ಸರ್ವಾಧಿಕ ಸ್ಕೋರ್‌ ಎನಿಸಿದೆ. 2007ರಲ್ಲಿ ಶ್ರೀಲಂಕಾದ ಮಹಿಳೆಯರ ಏಕದಿನ ಕ್ರಿಕೆಟ್‌ ಟೂರ್ನಿಯಲ್ಲಿ ಶ್ರೀಪಾಲಿ ವೀರಕೋಡಿ, ಪುಷ್ಪಾದನಾ ಲೇಡೀಸ್‌ ತಂಡದ ವಿರುದ್ಧ ಅಜೇಯ 271 ರನ್‌ ಬಾರಿಸಿದ್ದು ಲಿಸ್ಟ್‌ ಎ ಕ್ರಿಕೆಟ್‌ನ ದೊಡ್ಡಮೊತ್ತ ಎನಿಸಿತ್ತು.

26 ವರ್ಷದ ಎನ್‌.ಜಗದೀಶನ್‌ ಅವರು ನಿರ್ಮಿಸಿರುವ ದಾಖಲೆಗಳು!

  • ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಸತತ ಐದು ಪಂದ್ಯಗಳಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರ ಎನ್‌.ಜಗದೀಶನ್‌. ಇದಕ್ಕೂ ಮುನ್ನ ಮೂರು ಬ್ಯಾಟ್ಸ್‌ಮನ್‌ಗಳು ಸತತ ನಾಲ್ಕು ಶತಕಗಳನ್ನು ಸಿಡಿಸಿದ್ದರು. 2014-15ರಲ್ಲಿ ಶ್ರೀಲಂಕಾದ ಕುಮಾರ ಸಂಗಕ್ಕರ, 2015-16 ರಲ್ಲಿ ದಕ್ಷಿಣ ಆಫ್ರಿಕಾದ ಅಲ್ವಿರೋ ಪೀಟರ್ಸೆನ್‌ ಹಾಗೂಸ 2020-21ರಲ್ಲಿ ಕರ್ನಾಟಕದ ದೇವದತ್‌ ಪಡಿಕ್ಕಲ್‌ ಈ ಸಾಧನೆ ಮಾಡಿದ್ದರು. ವಿಜಯ್‌ ಹಜಾರೆ ಟ್ರೋಫಿಯಲ್ಲಿ ಎನ್‌. ಜಗದೀಶನ್‌ ಈವರೆಗೂ 6, 114* (112 ಎಸೆತ), 107 (113 ಎಸೆತ), 168 (140 ಎಸೆತ), 128 (123 ಎಸೆತ) ಹಾಗೂ 277 (141 ಎಸೆತ) ರನ್‌ ಬಾರಿಸಿದ್ದಾರೆ.
     
  • ಅರುಣಾಚಲ ಪ್ರದೇಶದ ವಿರುದ್ಧ ತಮಿಳುನಾಡು ತಂಡ ಬಾರಿಸಿದ 2 ವಿಕೆಟ್‌ಗೆ 506 ರನ್‌, ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ತಂಡವೊಂದು ಮೊದಲ ಬಾರಿಗೆ 500 ರನ್‌ ಬಾರಿಸಿದ ದೃಷ್ಟಾಂತವಾಗಿದೆ. ಇದಕ್ಕೂ ಮುನ್ನ ಈ ವರ್ಷದ ಆರಂಭದಲ್ಲಿ ಇಂಗ್ಲೆಂಡ್‌ ತಂಡ ನೆದರ್ಲೆಂಡ್ಸ್‌ ವಿರುದ್ಧ 4 ವಿಕೆಟ್‌ಗೆ 498 ರನ್‌ ಬಾರಿಸಿದ್ದು ದಾಖಲೆ ಎನಿಸಿತ್ತು.
     
  • ಅರುಣಾಚಲ ಪ್ರದೇಶದ ವಿರುದ್ಧ ದ್ವಿಶತಕ ಬಾರಿಸಲು ಎನ್‌.ಜಗದೀಶನ್‌ 114 ಎಸೆತಗಳನ್ನು ತೆಗೆದುಕೊಂಡರು. ಇದು ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಲು ತೆಗೆದುಕೊಂಡ ಜಂಟಿ ಗರಿಷ್ಠ ಎಸೆತ ಎನಿಸಿದೆ. ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌ ಕಳೆದ ವರ್ಷದ ಮಾರ್ಷ್‌ ಒಂಡೇ ಕಪ್‌ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್‌ ವಿರುದ್ಧ ದ್ವಿಶತಕಕ್ಕಾಗಿ 114 ಎಸೆತ ಆಡಿದ್ದರು.
     
  • 141 ಎಸೆತಗಳ 277 ರನ್‌ ಇನ್ನಿಂಗ್ಸ್‌ ವೇಳೆ ಜಗದೀಶನವ್‌ ಅವರ ಸ್ಟ್ರೈಕ್‌ ರೇಟ್‌ 196.45 ಆಗಿತ್ತು. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದ ವೇಳೆ ಆಟಗಾರನೊಬ್ಬನ ಗರಿಷ್ಠ ಸ್ಟ್ರೈಕ್‌ ರೇಟ್‌ ಎನಿಸಿದೆ. ಇದಕ್ಕೂ ಮುನ್ನ ಟ್ರಾವಿಸ್‌ ಹೆಡ್‌ ಹೆಸರಲ್ಲಿ ಈ ದಾಖಲೆ ಇತ್ತು. 2021ರಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 127 ಎಸೆತಗಳಲ್ಲಿ 230 ರನ್‌ ಸಿಡಿಸುವ ವೇಳೆ 181.1  ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದರು. ಉಳಿದಂತೆ ಈ ಮಾದರಿಯಲ್ಲಿ ದಾಖಲಾಗಿರುವ 36 ದ್ವಿಶತಕಗಳಲ್ಲಿ ಯಾರೊಬ್ಬರ ಸ್ಟ್ರೈಕ್‌ ರೇಟ್‌ ಕುಡ 175 ದಾಟಿರಲಿಲ್ಲ.

    Vijay Hazare Trophy ಕರ್ನಾಟಕದ ದಾಳಿಗೆ ತತ್ತರಿಸಿದ ಡೆಲ್ಲಿ
     
  • ಅರುಣಾಚಲ ಪ್ರದೇಶದ ವಿರುದ್ಧ ದ್ವಿಶತಕ ಬಾರಿಸಲು ಎನ್‌.ಜಗದೀಶನ್‌ 114 ಎಸೆತಗಳನ್ನು ತೆಗೆದುಕೊಂಡರು. ಇದು ಪುರುಷರ ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಲು ತೆಗೆದುಕೊಂಡ ಜಂಟಿ ಗರಿಷ್ಠ ಎಸೆತ ಎನಿಸಿದೆ. ಆಸ್ಟ್ರೇಲಿಯಾದ ಟ್ರಾವಿಸ್‌ ಹೆಡ್‌ ಕಳೆದ ವರ್ಷದ ಮಾರ್ಷ್‌ ಒಂಡೇ ಕಪ್‌ ಟೂರ್ನಿಯಲ್ಲಿ ಕ್ವೀನ್ಸ್‌ಲ್ಯಾಂಡ್‌ ವಿರುದ್ಧ ದ್ವಿಶತಕಕ್ಕಾಗಿ 114 ಎಸೆತ ಆಡಿದ್ದರು.

    Vijay Hazare Trophy: ಕರ್ನಾಟಕಕ್ಕೆ ಹ್ಯಾಟ್ರಿಕ್‌ ಜಯ!
  • 141 ಎಸೆತಗಳ 277 ರನ್‌ ಇನ್ನಿಂಗ್ಸ್‌ ವೇಳೆ ಜಗದೀಶನವ್‌ ಅವರ ಸ್ಟ್ರೈಕ್‌ ರೇಟ್‌ 196.45 ಆಗಿತ್ತು. ಇದು ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ್ದ ವೇಳೆ ಆಟಗಾರನೊಬ್ಬನ ಗರಿಷ್ಠ ಸ್ಟ್ರೈಕ್‌ ರೇಟ್‌ ಎನಿಸಿದೆ. ಇದಕ್ಕೂ ಮುನ್ನ ಟ್ರಾವಿಸ್‌ ಹೆಡ್‌ ಹೆಸರಲ್ಲಿ ಈ ದಾಖಲೆ ಇತ್ತು. 2021ರಲ್ಲಿ ಕ್ವೀನ್ಸ್‌ ಲ್ಯಾಂಡ್‌ ವಿರುದ್ಧದ ಪಂದ್ಯದಲ್ಲಿ 127 ಎಸೆತಗಳಲ್ಲಿ 230 ರನ್‌ ಸಿಡಿಸುವ ವೇಳೆ 181.1  ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟಿಂಗ್‌ ಮಾಡಿದ್ದರು. ಉಳಿದಂತೆ ಈ ಮಾದರಿಯಲ್ಲಿ ದಾಖಲಾಗಿರುವ 36 ದ್ವಿಶತಕಗಳಲ್ಲಿ ಯಾರೊಬ್ಬರ ಸ್ಟ್ರೈಕ್‌ ರೇಟ್‌ ಕುಡ 175 ದಾಟಿರಲಿಲ್ಲ.
     
  • ಜಗದೀಶನ್‌ ಹಾಗೂ ಬಿ ಸಾಯಿ ಸುದರ್ಶನ್‌ ಮೊದಲ ವಿಕೆಟ್‌ಗೆ ಅರುಣಾಚಲ ಪ್ರದೇಶದ ವಿರುದ್ಧ 416 ರನ್‌ ಜೊತೆಯಾಟವಾಡಿದರು. ಲಿಸ್ಟ್‌ ಎ ಕ್ರಿಕೆಟ್‌ನಲ್ಲಿ ಯಾವುದೇ ವಿಕೆಟ್‌ಗೆ 400 ಕ್ಕಿಂತ ಅಧಿಕ ರನ್‌ ಜೊತೆಯಾಟವಾಡಿದ ಮೊದಲ ಜೋಡಿ ಎನಿಸಿದೆ. ಇದಕ್ಕೂ ಮುನ್ನ ಕ್ರಿಸ್‌ ಗೇಲ್‌ ಹಾಗೂ ಮರ್ಲಾನ್‌ ಸ್ಯಾಮ್ಯುಯೆಲ್ಸ್‌ 2015ರಲ್ಲಿ ಜಿಂಬಾಬ್ವೆ ವಿರುದ್ಧ 2ನೇ ವಿಕೆಟ್‌ಗೆ 372 ರನ್‌ ಜೊತೆಯಾಟವಾಡಿದ್ದು ದಾಖಲೆ ಆಗಿತ್ತು.
     
  • ವಿಜಯ್‌ ಹಜಾರೆ ಟ್ರೋಫಿಯಲ್ಲಿ ಜಗದೀಶನ್‌ ಈವರೆಗೂ 5 ಶತಕ ಬಾರಿಸಿದ್ದಾರೆ. ಯಾವುದೇ ಅವೃತ್ತಿಯಲ್ಲಿ ಬ್ಯಾಟ್ಸ್‌ಮನ್‌ವೊಬ್ಬನ ಗರಿಷ್ಠ ಶತಕ ಎನಿಸಿದೆ. ವಿರಾಟ್‌ ಕೊಹ್ಲಿ (2008-09), ದೇವದತ್‌ ಪಡಿಕ್ಕಲ್‌ (2020-21), ಪೃಥ್ವಿ ಶಾ (2020-21) ಹಾಗೂ ರುತುರಾಜ್‌ ಗಾಯಕ್ವಾಡ್‌ (2021-22) ಈ ಟೂರ್ನಿಯಲ್ಲಿ ತಲಾ ನಾಲ್ಕು ಶತಕ ಬಾರಿಸಿದ್ದರು.
     
  • ತಮ್ಮ 277 ರನ್‌ ಇನ್ನಿಂಗ್ಸ್‌ನಲ್ಲಿ ಜಗದೀಶನ್‌ 15 ಸಿಕ್ಸರ್‌ ಸಿಡಿಸಿದರು. ಇದು ವಿಜಯ್‌ ಹಜಾರೆ ಟ್ರೋಫಿಯಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಒಂದೇ ಇನ್ನಿಂಗ್ಸ್‌ನಲ್ಲಿ ಬಾರಿಸಿದ ಗರಿಷ್ಠ ಸಿಕ್ಸರ್‌ ಎನಿಸಿದೆ. ಇದಕ್ಕೂ ಮುನ್ನ 2019-20ರ ಆವೃತ್ತಿಯಲ್ಲಿ ಯಶಸ್ವಿ ಜೈಸ್ವಾಲ್‌ ಜಾರ್ಖಂಡ್‌ ವಿರುದ್ಧ 203 ರನ್‌ ಬಾರಿಸಿದ್ದ ವೇಳೆ 12 ಸಿಕ್ಸರ್‌ ಸಿಡಿಸಿದ್ದು ದಾಖಲೆ ಎನಿಸಿತ್ತು.
     
  • ಈವರೆಗೂ ಜಗದೀಶನ್‌ ಟೂರ್ನಿಯಲ್ಲಿ 799 ರನ್‌ ಬಾರಿಸಿದ್ದಾರೆ. ಒಂದೇ ಅವೃತ್ತಿಯ ಟೂರ್ನಿಯಲ್ಲಿ ಬ್ಯಾಟ್ಸ್‌ಮನ್‌ವೊಬ್ಬ ಬಾರಿಸಿದ 2ನೇ ಗರಿಷ್ಠ ಮೊತ್ತ ಎನಿಸಿದೆ. 2020-21ರಲ್ಲಿ ಪೃಥ್ವಿ ಶಾ 827 ರನ್‌ ಬಾರಿಸಿದ್ದು ದಾಖಲೆಯಾಗಿದೆ.
Follow Us:
Download App:
  • android
  • ios