ಎರಡು ಬಿಗ್ ಟಾರ್ಗೆಟ್ ಕನಸು ಬಿಚ್ಚಿಟ್ಟ ಕೊಹ್ಲಿ ಈ ಟಾರ್ಗೆಟ್ಗಾಗಿ ಏನ್ಬೇಕಾದ್ರೂ ಮಾಡಲು ಸಿದ್ಧ.. ಏನದು ಕಿಂಗ್ ಕೊಹ್ಲಿಯ ಟಾರ್ಗೆಟ್ ಪ್ರತಿಜ್ಞೆ ..?
ಮುಂಬೈ (ಜು.25): 2018ರ ಕೊಹ್ಲಿ ಈಗಿಲ್ಲ. ಆ ಖದರ್ ಮರೆಯಾಗಿದೆ. ಮೂರು ವರ್ಷದಿಂದ ರನ್ ಗಳಿಸಲು ತಿಣುಕಾಡ್ತಿದ್ದಾರೆ. ಟೀಕೆಗಳ ಮೇಲೆ ಎದುರಿಸ್ತಿದ್ದಾರೆ. ಅಂದು ವಿರಾಟ್ರನ್ನ ತಲೆ ಮೇಲೆ ಹೊತ್ತುಕೊಂಡು ಮೆರೆದವರು ಹಿಂದೂ ಹಿಗ್ಗಾಮುಗ್ಗ ಜಾಡಿಸ್ತಿದ್ದಾರೆ. ಹಾಗಂತ ಕಿಂಗ್ ಕೊಹ್ಲಿ ಎಂದೂ ಉತ್ಸಾಹ ಕಳೆದುಕೊಂಡಿಲ್ಲ. ಈಗಲೂ ಆಟದ ಬಗ್ಗೆ ಮೊದಲಿನಷ್ಟೇ ಛಲ ಇದೆ. ಗುರಿನೂ ಇದೆ. ಈಗ ಆ ಗುರಿ ಇನ್ನಷ್ಟು ದೊಡ್ಡದಾಗಿದೆ.
ಹೌದು, ಕೊಹ್ಲಿ(Virat Kohli) ಔಟ್ ಆಫ್ ಫಾರ್ಮ್ನಲ್ಲಿದ್ರೂ ಎಂದೂ ದೃತಿಗೆಟ್ಟಿಲ್ಲ. ಏನಿದ್ದರೂ ದಿಟ್ಟವಾಗಿ ಎದುರಿಸಿ ನಿಲ್ಲೋದು ಕೊಹ್ಲಿ ಪಾಲಿಸಿ. ಎಲ್ಲದಕ್ಕೂ ಬ್ಯಾಟ್ನಿಂದಲೇ ಆನ್ಸರ್ ಕೊಡೋದು ಕೊಹ್ಲಿಗೆ ಕರಗತವಾಗಿದೆ. ಸದ್ಯ ಅದಕ್ಕಾಗಿ ವಿರಾಟ್ ಎರಡು ಶಪಥ ಗೈದಿದ್ದಾರೆ. ಆ ಮೂಲಕ ತಮ್ಮ ದೊಡ್ಡ ಕನಸು ಏನು ಅನ್ನೋದನ್ನ ರಿವೀಲ್ ಮಾಡಿದ್ದಾರೆ.
ಟೀಂ ಇಂಡಿಯಾ ನಾಯಕತ್ವ ತೊರೆದ ನಂತರ ಕೊಹ್ಲಿ ವಿರಾಟ ರೂಪ ತೋರಿಸುತ್ತಿಲ್ಲ!
ಟಿ20 ವಿಶ್ವಕಪ್(T20 World Cup) ಗೆಲ್ಲಿಸಿಕೊಡಲು ಕೊಹ್ಲಿ ಶಪಥ :
ಸದ್ಯ ವೆಸ್ಟ್ಇಂಡೀಸ್(West indies) ಸರಣಿಯಿಂದ ರೆಸ್ಟ್ ಪಡೆದಿರೋ ಕೊಹ್ಲಿ ಕುಟುಂದವರ ಜೊತೆ ಫಾರಿನ್ ಟೂರ್(foreign tour)ನಲ್ಲಿದ್ದಾರೆ. ಬಳಿಕ ಜಿಂಬಾಬ್ವೆ(zimbabwe ) ಪ್ರವಾಸಕ್ಕೆ ಮರಳಿದ್ದಾರೆ. ಈ ವೇಳೆ ತಮ್ಮ ಮುಂದಿನ ಟಾರ್ಗೆಟ್ ಏನು ಅನ್ನೋದನ್ನ ಬಹಿರಂಪಡಿಸಿದ್ದು, ಮುಂಬರೋ ಏಷ್ಯಾಕಪ್(Asia Cup) ಹಾಗೂ ಟಿ20 ವಿಶ್ವಕಪ್ ಗೆಲ್ಲಿಸಿಕೊಡೋದೆ ನನ್ನ ಬಿಗ್ ಟಾರ್ಗೆಟ್ ಎಂದಿದ್ದಾರೆ.
ಏಷ್ಯಾಕಪ್ ಮತ್ತು ಟಿ20 ವಿಶ್ವಕಪ್ ಗೆಲ್ಲಲು ಭಾರತ ತಂಡಕ್ಕೆ ನೆರವಾಗುವುದು ನನ್ನ ಮುಖ್ಯ ಗುರಿ. ತಂಡಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧನಿದ್ದೇನೆ ಎಂದು ಟೀಮ್ ಇಂಡಿಯಾ ಮಾಜಿ ಕ್ಯಾಪ್ಟನ್ ವಿರಾಟ್ ಕೊಹ್ಲಿ ಹೇಳಿದ್ದಾರೆ.
ಕಳಪೆ ಆಟದ ಮಧ್ಯೆ ಕೊಹ್ಲಿ ಶಪಥ ಮಾಡಿದ್ದೇಕೆ..? :
ಸದ್ಯ ಕೊಹ್ಲಿ ಹಿಂದೆಂದೂ ಕಾಣದಷ್ಟೇ ಕಳಪೆ ಆಟವಾಡ್ತಿದ್ದಾರೆ. ಮೂರು ವರ್ಷಗಳಿಂದ ಸೆಂಚುರಿನೇ ಮೂಡಿ ಬಂದಿಲ್ಲ. ಈಗಿದ್ರೂ ಕೊಹ್ಲಿ ವಿಶ್ವಕಪ್ ಗೆಲ್ಲಿಸುವ ಪ್ರತಿಜ್ಞೆ ಮಾಡಿದ್ದಾರೆ. ಇಂತಹ ಟೈಮಲ್ಲಿ ವಿರಾಟ್ರಿಂದ ಇಂತಹ ಟಾರ್ಗೆಟ್ ಟಾಕ್ ಬೇಕಿತ್ತಾ ಅನ್ನೋ ಪ್ರಶ್ನೆ ಮೂಡಿದೆ.
ವಿರಾಟ್ ಕೋಹ್ಲಿಗೆ ಐಪಿಎಲ್'ನಿಂದ ದೊಡ್ಡ ಶಾಕ್
ಕೊಹ್ಲಿಯಿಂದ ನಿರೀಕ್ಷಿತ ಪ್ರದರ್ಶನ ಮೂಡಿ ಬರ್ತಿಲ್ಲ ನಿಜ. ಹಾಗಂತ ಎಲ್ಲವೂ ದಿನವೂ ಸಂಡೇ ಆಗಲು ಸಾಧ್ಯವಿಲ್ಲ. ಕೊಹ್ಲಿ ಸಿಡಿದೇಳಲೇಬೇಕು. ಅದಕ್ಕೆ ಬೇಕಿರೋದು ಒಂದು ಬಿಗ್ ಇನ್ನಿಂಗ್ಸ್ ಆಟವಷ್ಟೇ. ಅದು ಸಾಧ್ಯವಾದ್ರೆ ರನ್ ಮಶೀನ್ರನ್ನ ತಡೆಯೋದು ಕಷ್ಟ. ಸದ್ಯ ವಿರಾಟ್ ಮತ್ತೆ ವಿರಾಟರೂಪ ತಾಳಲು ಜಿಂಬಾಬ್ವೆ ಸರಣಿ ಉತ್ತಮ ಅವಕಾಶ. ಇಲ್ಲಿ ದಮ್ದಾರ್ ಪರ್ಫಾಮೆನ್ಸ್ ನೀಡಿದ್ರೆ, ಅವರ ಕಾನ್ಫಿಡೆನ್ಸ್ ಹೆಚ್ಚಲಿದೆ. ನಂತ್ರ ಏಷ್ಯಾಕಪ್ ಟೂರ್ನಿಯಲ್ಲೂ ಇದೇ ಅಬ್ಬರ ಮುಂದುವರಿಸಿದ್ರೆ ಎಲ್ಲಾ ವಿರೋಧಿಗಳ ಬಾಯಿ ಮುಚ್ಚಿಸಬಹುದು.
ಆ ವಿಶ್ವಾಸ ಕೊಹ್ಲಿಯಲ್ಲಿದೆ. ಅದಕ್ಕಾಗಿ ಅವರು ಏಷ್ಯಾಕಪ್ & ಟಿ20 ವಿಶ್ವಕಪ್ ಗೆಲ್ಲಿಸಿಕೊಡುವ ಶಪಥ ಗೈದಿದ್ದಾರೆ ಅನ್ನೋದನ್ನ ಮರೆಯುವಂತಿಲ್ಲ.
