* ಐಸಿಸಿ ಟಿ20 ವಿಶ್ವಕಪ್ ಟೂರ್ನಿ ಆರಂಭಕ್ಕೆ ಕ್ಷಣಗಣನೆ* ಯುಎಇ & ಓಮನ್‌ನಲ್ಲಿ ಅಕ್ಟೋಬರ್ 17ರಿಂದ ಟಿ20 ವಿಶ್ವಕಪ್ ಆರಂಭ* ಇಂದು ಟೀಂ ಇಂಡಿಯಾಗೆ ನೂತನ ಜೆರ್ಸಿ ಅನಾವರಣ
ನವದೆಹಲಿ(ಅ.13): ಇನ್ನೇನು ಕೆಲವೇ ದಿನಗಳಲ್ಲಿ ಆರಂಭಗೊಳ್ಳಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ (T20 World Cup) ಬುಧವಾರ ಭಾರತ ತಂಡದ ಜೆರ್ಸಿಯನ್ನು ಬಿಸಿಸಿಐ (BCCI) ಅನಾವರಣಗೊಳಿಸಲಿದೆ. ತಂಡದ ಅಧಿಕೃತ ಕಿಟ್ ಪ್ರಾಯೋಜಕತ್ವ ಹೊಂದಿರುವ ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆ ವಿಭಿನ್ನ ವಿನ್ಯಾಸದ ಜೆರ್ಸಿಗಳನ್ನು ಸಿದ್ಧಪಡಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.
ಬಹುನಿರೀಕ್ಷಿತ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯು ಅಕ್ಟೋಬರ್ 17ರಿಂದ ಆರಂಭವಾಗಲಿದೆ. ಮೊದಲಿಗೆ ಅರ್ಹತಾ ಸುತ್ತಿನ ಪಂದ್ಯಗಳು ಆರಂಭವಾಗಲಿದ್ದು, ಅಕ್ಟೋಬರ್ 23ರಿಂದ ಸೂಪರ್ 12 ಹಂತದ ಪಂದ್ಯಗಳು ಆರಂಭವಾಗಲಿವೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ (Team India) ಅಕ್ಟೋಬರ್ 24ರಂದು ತನ್ನ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಎದುರಿಸಲಿದೆ.
ಎಂಪಿಎಲ್ ಸ್ಪೋರ್ಟ್ಸ್ ಸಂಸ್ಥೆಯು 2023ರವರೆಗೂ ಟೀಂ ಇಂಡಿಯಾ ಕಿಟ್ ಸ್ಪಾನ್ಸರ್‌ಶಿಪ್ ಹಕ್ಕನ್ನು ಪಡೆದುಕೊಂಡಿದೆ. ಬ್ಲೂ ಜೆರ್ಸಿ ಬದಲಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ಟೀಂ ಇಂಡಿಯಾ, ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದಾಗ 1992ರ ವಿಶ್ವಕಪ್ ವೇಳೆ ಟೀಂ ಇಂಡಿಯಾ ಧರಿಸಿದ್ದ ರೆಟ್ರೊ ಜೆರ್ಸಿ ರೀತಿಯ ಜೆರ್ಸಿಯಲ್ಲಿ ಸೀಮಿತ ಓವರ್‌ಗಳ ಸರಣಿಯನ್ನಾಡಿತ್ತು.
T20 World Cup: ಟೀಂ ಇಂಡಿಯಾ ಮೆಂಟರಿಂಗ್‌ಗೆ 1 ರೂಪಾಯಿ ಚಾರ್ಜ್ ಮಾಡಿಲ್ಲ ಧೋನಿ!
ಇದೀಗ ಅಕ್ಟೋಬರ್ 18ಕ್ಕೆ ಆಸ್ಟ್ರೇಲಿಯಾ ವಿರುದ್ದ ನಡೆದ ಮೊದಲ ಅಭ್ಯಾಸ ಪಂದ್ಯದಲ್ಲಿ ಹೊಸ ಜೆರ್ಸಿ ತೊಟ್ಟು ಟೀಂ ಇಂಡಿಯಾ ಕಣಕ್ಕಿಳಿಯಲಿದೆ. ಚೊಚ್ಚಲ ಆವೃತ್ತಿಯ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದ ಟೀಂ ಇಂಡಿಯಾ, ಇದಾದ ಬಳಿಕ ಕಪ್ ಎತ್ತಿ ಹಿಡಿದಿಲ್ಲ. ಇದೀಗ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಹೊಸ ಹುರುಪಿನಲ್ಲಿ ಟ್ರೋಫಿ ಜಯಿಸಲು ಎದುರು ನೋಡುತ್ತಿವೆ.
ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯಲ್ಲಿ ಕೊಂಚ ಬದಲಾವಣೆ'
ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯ: ಟೀಂ ಇಂಡಿಯಾ ಅಭ್ಯಾಸ ಪಂದ್ಯಗಳ ವೇಳಾಪಟ್ಟಿಯಲ್ಲಿ ಬದಲಾವಣೆ ಆಗಿದೆ. ಅಕ್ಟೋಬರ್ 20ರಂದು ಇಂಗ್ಲೆಂಡ್ ಬದಲಿಗೆ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ಅಕ್ಟೋಬರ್ 18ಕ್ಕೆ ಆಸ್ಪ್ರೇಲಿಯಾ ವಿರುದ್ಧ ಪಂದ್ಯ ನಡೆಯಲಿದೆ. ಭಾರತ ಸೂಪರ್-12 ಹಂತದ ತನ್ನ ಮೊದಲ ಪಂದ್ಯವನ್ನು ಅ.24ರಂದು ಪಾಕಿಸ್ತಾನ ವಿರುದ್ಧ ಆಡಲಿದೆ.
T20 World Cup: ಅಭ್ಯಾಸ ಪಂದ್ಯಗಳ ವೇಳಾಪಟ್ಟಿ ಪ್ರಕಟ; ಭಾರತಕ್ಕೆ ಅಗ್ನಿ ಪರೀಕ್ಷೆ
ಆವೇಶ್ ನೆಟ್ ಬೌಲರ್: ಐಪಿಎಲ್‌ನಲ್ಲಿ ಮಿಂಚುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ವೇಳೆ ಆವೇಶ್ ಖಾನ್(Avesh Khan)ರನ್ನು ಟಿ20 ವಿಶ್ವಕಪ್‌ಗೆ ಭಾರತ ತಂಡದ ನೆಟ್ ಬೌಲರ್ ಆಗಿ ಆಯ್ಕೆ ಮಾಡಲಾಗಿದೆ. ಆವೇಶ್ ಐಪಿಎಲ್ ಮುಕ್ತಾಯಗೊಂಡ ಬಳಿಕವೂ ಯುಎಇನಲ್ಲೇ ಉಳಿಯಲಿದ್ದು, ಭಾರತ ತಂಡದ ಬಯೋಬಬಲ್ ಪ್ರವೇಶಿಸಲಿದ್ದಾರೆ. ಉಮ್ರಾನ್ ಮಲಿಕ್ ಹಾಗೂ ಕೆಕೆಆರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರನ್ನೂ ಸಹ ಯುಎಇನಲ್ಲಿಯೇ ಉಳಿದುಕೊಳ್ಳಲು ಬಿಸಿಸಿಐ ಸೂಚಿಸಿದೆ ಎನ್ನಲಾಗಿದೆ
ಬೆಂಗಳೂರಲ್ಲಿ ಧೋನಿ ಕ್ರಿಕೆಟ್ ಅಕಾಡೆಮಿ
ಬೆಂಗಳೂರು: ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ (MS Dhoni) ಅವರ ಕ್ರಿಕೆಟ್ ಅಕಾಡೆಮಿ ಬೆಂಗಳೂರಿನಲ್ಲಿ (Bengaluru) ಸದ್ಯದಲ್ಲೇ ಶುರುವಾಗಲಿದೆ. ಖಾಸಗಿ ಸಂಸ್ಥೆಗಳ ಸಹಯೋಗದಲ್ಲಿ ಬೆಂಗಳೂರಿನ ಸರ್ಜಾಪುರ ಬಳಿಯ ಕಾಡ ಅಗ್ರಹಾರದ ಬಿದರಹಳ್ಳಿಯಲ್ಲಿರುವ ಅಕಾಡೆಮಿಗೆ ನ.7ರಂದು ಚಾಲನೆ ಸಿಗಲಿದೆ.
ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಡರೆಲ್ ಕಲಿನನ್ ಅಕಾಡೆಮಿಯ ಮುಖ್ಯ ಕೋಚ್‌ಗಳಲ್ಲಿ ಒಬ್ಬರಾಗಿದ್ದಾರೆ. ಈಗಾಗಲೇ ಅಕಾಡೆಮಿಗೆ ಪ್ರವೇಶಾತಿ ಆರಂಭಗೊಂಡಿದ್ದು, ಆಸಕ್ತರು info@msdcaindia.com ಇಮೇಲ್ ಮಾಡಿ ಮಾಹಿತಿ ಪಡೆಯಬಹುದಾಗಿದೆ.
