T20 World Cup ಟೂರ್ನಿಗೆ ಟೀಂ ಇಂಡಿಯಾ ತಯಾರಿ ಆರಂಭ ತಂಡಕ್ಕೆ ಮೆಂಟರ್ ಆಗಿ ಎಂ.ಎಸ್.ಧೋನಿ ನೇಮಕ ಮಾಡಿರುವ ಬಿಸಿಸಿಐ ತಂಡಕ್ಕೆ ಮೆಂಟರಿಂಗ್ ಮಾಡಲು ಧೋನಿ 1 ರೂಪಾಯಿ ಚಾರ್ಜ್ ಮಾಡಿಲ್ಲ  

ಮುಂಬೈ(ಅ.12): ಟೀಂ ಇಂಡಿಯಾವನ್ನು ಎಂ.ಎಸ್.ಧೋನಿ(MS Dhoni) ಅದೆಷ್ಟು ಪ್ರೀತಿಸುತ್ತಾರೆ ಅನ್ನೋದು ಬಿಡಿಸಿ ಹೇಳಬೇಕಾಗಿಲ್ಲ. ಇದೀಗ ಧೋನಿಗೆ ತಂಡದ ಮೇಲಿರುವ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ. ಟಿ20 ವಿಶ್ವಕಪ್ ಟೂರ್ನಿಗೆ(T20 World Cup) ತಯಾರಿ ನಡೆಸುತ್ತಿರುವ ಟೀಂ ಇಂಡಿಯಾಗೆ(Team India) ಎಂ.ಎಸ್.ಧೋನಿಯನ್ನು ಮೆಂಟರ್(Mentor) ಆಗಿ ಬಿಸಿಸಿಐ ನೇಮಕ ಮಾಡಿದೆ. ಆದರೆ ಧೋನಿ ತನ್ನ ಜವಾಬ್ದಾರಿ ನಿರ್ವಹಿಸಲು ಒಂದು ರೂಪಾಯಿ ಹಣ ಚಾರ್ಜ್ ಮಾಡಿಲ್ಲ.

IPL 2021: ಡೆಲ್ಲಿ ವಿರುದ್ಧ ಧೋನಿ ಸ್ಫೋಟ ಕಂಡ ಕೊಹ್ಲಿ ಹೇಳಿದ್ದು ಒಂದೇ ಮಾತು!

ಟಿ20 ವಿಶ್ವಕಪ್ ಟೂರ್ನಿಗಾಗಿ ಧೋನಿ ಉಚಿತವಾಗಿ ಟೀಂ ಇಂಡಿಯಾಗೆ ಮೆಂಟರಿಂಗ್ ಮಾಡಲಿದ್ದಾರೆ. ಇದಕ್ಕಾಗಿ ಧೋನಿ ಯಾವುದೇ ಚಾರ್ಜ್ ಮಾಡುತ್ತಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ(Sourav Ganguly) ಹೇಳಿದ್ದಾರೆ. ಯುಎಇನಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಕೊಹ್ಲಿ ಸೈನ್ಯಕ್ಕೆ ಧೋನಿ ಮೆಂಟರ್ ಮಾಡಲಿದ್ದಾರೆ. 

MS ಧೋನಿ ಸೀಮಿತ ಓವರ್‌ಗಳ ಕ್ರಿಕೆಟ್‌ನ ಶ್ರೇಷ್ಠ ನಾಯಕ: ರವಿಶಾಸ್ತ್ರಿ

ಗಂಗೂಲಿಗೂ ಮೊದಲು ಬಿಸಿಸಿಐ(BCCI) ಕಾರ್ಯದರ್ಶಿ ಜಯ್ ಶಾ ಕೂಡ ಸ್ಪಷ್ಟಪಡಿಸಿದ್ದರು. ಧೋನಿ ಯಾವುದೇ ಫೀಸ್ ತೆಗೆದುಕೊಳ್ಳದೆ ಟೀಂ ಇಂಡಿಯಾಗೆ ಮೆಂಟರಿಂಗ್ ಮಾಡಲಿದ್ದಾರೆ. ದೇಶ ಹಾಗೂ ಟೀಂ ಇಂಡಿಯಾದಲ್ಲಿನ ಪ್ರೀತಿಯಿಂದ ಧೋನಿ ಉಚಿತವಾಗಿ ಮೆಂಟರಿಂಗ್ ಮಾಡುತ್ತಿದ್ದಾರೆ ಎಂದು ಜಯ್ ಶಾ ಹೇಳಿದ್ದಾರೆ.

Scroll to load tweet…

T20 World Cup ಧೋನಿಯನ್ನು ಮೆಂಟರ್ ಮಾಡಿದ್ದೇಕೆ; ಗುಟ್ಟು ಬಿಚ್ಚಿಟ್ಟ ದಾದಾ

ಟಿ20 ವಿಶ್ವಕಪ್, ಏಕದಿನ ವಿಶ್ವಪೃಕಪ್ ಹಾಗೂ ಚಾಂಪಿಯನ್ಸ್ ಟ್ರೋಫಿ ಗೆದ್ದು ಇತಿಹಾಸ ರಚಿಸಿರುವ ಧೋನಿ ಇದೀಗ ಮೆಂಟರ್ ಆಗಿ ಟೀಂ ಇಂಡಿಯಾಗೆ ಪ್ರಶಸ್ತಿ ಗೆಲ್ಲಿಸಿಕೊಡುವ ಮಹತ್ತರ ಜವಾಬ್ದಾರಿ ಹೊತ್ತಿದ್ದಾರೆ. 2013ರ ಚಾಂಪಿಯನ್ಸ್ ಟ್ರೋಫಿ ಬಳಿಕ ಟೀಂ ಇಂಡಿಯಾ ಯಾವುದೇ ಐಸಿಸಿ ಪ್ರಶಸ್ತಿ ಗೆದ್ದಿಲ್ಲ. ನಿರಾಸೆ ಅನುಭವಿಸಿದ್ದೇ ಹೆಚ್ಚು.

ಸದ್ಯ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮುನ್ನಡೆಸುತ್ತಿರುವ ಧೋನಿ, 4ನೇ ಚಾಂಪಿಯನ್ ಪಟ್ಟ ಕಿರೀಟ ಗೆಲ್ಲುವ ನಿರೀಕ್ಷೆಯಲ್ಲಿದ್ದಾರೆ. ಈಗಾಗಲೇ ಫೈನಲ್ ತಲುಪಿರುವ ಚೆನ್ನೈ ತಂಡ ಪ್ರಶಸ್ತಿ ಮೇಲೆ ಕಣ್ಣಿಟ್ಟಿದೆ

Scroll to load tweet…