Asianet Suvarna News Asianet Suvarna News

T20 World Cup IND vs PAK; ಅಜೇಯ ಓಟಕ್ಕೆ ಬ್ರೇಕ್, ಪಾಕ್ ವಿರುದ್ಧ ಭಾರತಕ್ಕೆ ಸೋಲು!

  • ಟಿ20 ವಿಶ್ವಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿದ ಪಾಕ್
  • ಪಾಕ್ ವಿರುದ್ದ ಭಾರತದ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್
  • ಪಾಕಿಸ್ತಾನ ತಂಡಕ್ಕೆ 10 ವಿಕೆಟ್ ಭರ್ಜರಿ ಗೆಲುವು
  • ಪಾಕಿಸ್ತಾನ ವಿರುದ್ಧ ಮುಗ್ಗರಿಸಿ ಮುಖಂಭಗ ಅನುಭವಿಸಿದ ಕೊಹ್ಲಿ ಪಡೆ
T20 World Cup IND vs PAK Babar Azam  Rizwan helps pakistan to beat Team India by 10 wickets ckm
Author
Bengaluru, First Published Oct 24, 2021, 11:01 PM IST

ದುಬೈ(ಅ.24): ಐಸಿಸಿ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ(Team India) ಬದ್ಧವೈರಿ ಪಾಕಿಸ್ತಾನ(Pakistan) ವಿರುದ್ಧ ಸೋಲು ಅನುಭವಿಸಿದೆ. ಈ ಮೂಲಕ  T20 World Cup 2021ರ ಟೂರ್ನಿಯನ್ನು ಸೋಲಿನೊಂದಿಗೆ ಆರಂಭಿಸಿದೆ.  ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಅಬ್ಬರದ ಬ್ಯಾಟಿಂಗ್‌ನಿಂದ ಪಾಕಿಸ್ತಾನ 10 ವಿಕೆಟ್ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ ICC ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಅಜೇಯ ಗೆಲುವಿನ ಓಟದ ದಾಖಲೆಗಳನ್ನು ಪಾಕಿಸ್ತಾನ ಮುರಿದಿದೆ. 

T20 World Cup IND vs PAK; ಕೊಹ್ಲಿ ಹಾಫ್ ಸೆಂಚುರಿ, ಪಾಕಿಸ್ತಾನಕ್ಕೆ 152 ರನ್ ಗುರಿ!

ಪಾಕ್ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟಿಂಗ್ ಹಾಗೂ ಬೌಲಿಂಗ್ ವಿಫಲಗೊಂಡಿತು. ಪರಿಣಾಮ ಪಂದ್ಯ ಕೈಜಾರಿತು. ಬದ್ಧವೈರಿಗಳ ವಿರುದ್ದದ ಹಿನ್ನಡೆ ಇದೀಗ ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗದ ಸೋಲಾಗಿ ಪರಿಣಮಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಬಳಿಕ ಮತ್ತೆ ಪಾಕಿಸ್ತಾನ ವಿರುದ್ಧ ಬಾರತ ಮುಗ್ಗರಿಸಿದೆ.

ಪಾಕಿಸ್ತಾನದ ಮಾರಕ ದಾಳಿಗೆ ಟೀಂ ಇಂಡಿಯಾ ಆರಂಭದಲ್ಲೇ ತತ್ತರಿಸಿತ್ತು. ಆದರೆ ನಾಯಕ ವಿರಾಟ್ ಕೊಹ್ಲಿ, ರಿಷಬ್ ಪಂತ್ ಹೋರಾಟದಿಂದ ಚೇತರಿಸಿಕೊಂಡ ಭಾರತ 7 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿತು. ಕೊಹ್ಲಿ 57 ರನ್ ಕಾಣಿಕೆ ನೀಡಿದರೆ, ಪಂತ್ 39 ರನ್ ಸಿಡಿಸಿದರು. ಈ ಮೂಲಕ 152 ರನ್ ಟಾರ್ಗೆಟ್ ಪಡೆದ ಪಾಕಿಸ್ತಾನ ಉತ್ತಮ ಆರಂಭ ಪಡೆಯಿತು.

T20 World Cup IND vs PAK; ಇದು ಬದ್ಧವೈರಿಗಳ ಕದನ, ಫ್ಯಾನ್ಸ್ ಹೃದಯ ಗೆದ್ದಿತು ನಾಯಕರ ನಡೆ!

ಸ್ಪರ್ಧಾತ್ಮಕ ಗುರಿ ಪಡದ ಪಾಕಿಸ್ತಾನ ಆರಂಭಿಕ ಹಂತದಲ್ಲೇ ದಿಟ್ಟ ಬ್ಯಾಟಿಂಗ್ ಪ್ರದರ್ಶನ ನೀಡಿತು. ವಿಕೆಟ್ ಕಬಳಿಸುವ ಟೀಂ ಇಂಡಿಯಾ ಪ್ರಯತ್ನ ಕೈಗೊಡಲಿಲ್ಲ. ಆರಂಭಿಕ 5 ಓವರ್‌ಗಲ್ಲಿ ಪಾಕಿಸ್ತಾ 7.2 ರ ರನ್‌ರೇಟ್‌ನಲ್ಲಿ 35 ರನ್ ಸಿಡಿಸಿತು. ನಾಯಕ ಬಾಬರ್ ಅಜಮ್ ಹಾಗೂ ಮೊಹಮ್ಮದ್ ರಿಜ್ವಾನ್ ಜೊತೆಯಾಟ ಪಾಕಿಸ್ತಾನ ತಂಡಕ್ಕೆ ಸಂಪೂರ್ಣ ಮೇಲುಗೈ ನೀಡಿತು. ಆದರೆ ಟೀಂ ಇಂಡಿಯಾ ಮತ್ತೆ ಒತ್ತಡದಲ್ಲಿ ಸಿಲುಕಿತು.

ವೇಗಿಗಳ ನಡುವೆ ಸ್ಪಿನ್ ಅಸ್ತ್ರವನ್ನು ಪ್ರಯೋಗಿಸಿ ಆರಂಭಿಕರ ಜೊತೆಯಾಟಕ್ಕೆ ಬ್ರೇಕ್ ಹಾಕುವ ಪ್ರಯತ್ನ ಮಾಡಲಾಯಿತು.  ಆದರೆ ಬಾಬರ್ ಹಾಗೂ ರಿಜ್ವಾನ್ ಹೋರಾಟ ಪಾಕಿಸ್ತಾನ ತಂಡಕ್ಕೆ ನೆರವಾಯಿತು. ಟೀಂ ಇಂಡಿಯಾ ಬೌಲಿಂಗ್ ದಾಳಿಗೆ ದಿಟ್ಟ ಉತ್ತರ ನೀಡಿದ ಬಾಬರ್ ಅಜಮ್ ಅರ್ಧಶತಕ ಸಿಡಿಸಿದರು.

T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ! 

ಒಂದು ವಿಕೆಟ್ ಕಬಳಿಸಲು ಭಾರತ ಹರಸಾಹಸ ಪಟ್ಟರೂ ಸಾಧ್ಯವಾಗಲಿಲ್ಲ. ಐವರು ಬೌಲರ್‌ಗಳ ಪ್ರಯತ್ನ ಕೈಗೂಡಲಿಲ್ಲ. ಇತ್ತ ಪಾಕಿಸ್ತಾನ ನಿರಾಯಾಸವಾಗಿ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ಬ್ಯಾಟಿಂಗ್ ಹಾಗೂ ಬೌಲಿಂಗ್ ವೇಳೆ ಒತ್ತಡ ಸಂಪೂರ್ಣ ಟೀಂ ಇಂಡಿಯಾ ಮೇಲೆ ಬಿದ್ದಿತು. 

T20 World Cup: ಲಂಕಾಗೆ ಭರ್ಜರಿ ಗೆಲುವು ತಂದಿತ್ತ ಅಸಲಂಕಾ, ರಾಜಪಕ್ಸಾ

ಬಾಬರ್ ಅಜೇಯ 68 ರನ್ ಹಾಗೂ ರಿಜ್ವಾನ್ ಅಜೇಯ 79 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ 17.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗೆಲುವು ಸಾಧಿಸಿತು. 10 ವಿಕೆಟ್ ಭರ್ಜರಿ ಗೆಲುವು ಕಂಡ ಪಾಕಿಸ್ತಾನ ಟೂರ್ನಿಯಲ್ಲಿ ಶುಭಾರಂಭ ಮಾಡಿತು. 

Follow Us:
Download App:
  • android
  • ios