Asianet Suvarna News Asianet Suvarna News

T20 World Cup: ಲಂಕಾಗೆ ಭರ್ಜರಿ ಗೆಲುವು ತಂದಿತ್ತ ಅಸಲಂಕಾ, ರಾಜಪಕ್ಸಾ

* ಬಾಂಗ್ಲಾದೇಶ ವಿರುದ್ದ ಲಂಕಾಗೆ 5 ವಿಕೆಟ್‌ಗಳ ಜಯ

* ಆಕರ್ಷಕ ಅರ್ಧಶತಕ ಚಚ್ಚಿದ ರಾಜಪಕ್ಸಾ, ಅಸಲಂಕಾ

* ಟಿ20 ವಿಶ್ವಕಪ್‌ನಲ್ಲಿ ಹೊಸ ದಾಖಲೆ ಬರೆದ ಶಕೀಬ್ ಅಲ್ ಹಸನ್

ICC T20 World Cup Charith Asalanka Bhanuka Rajapaksa  Fifty helps Sri Lanka Thrash Bangladesh by 5 Wickets in Sharjah kvn
Author
Sharjah - United Arab Emirates, First Published Oct 24, 2021, 7:24 PM IST

ಶಾರ್ಜಾ(ಆ.24): ಚರಿತ್ ಅಸಲಂಕಾ(80) ಹಾಗೂ ಭಾನುಕ ರಾಜಪಕ್ಸಾ(53) ಬಾರಿಸಿದ ಸಿಡಿಲಬ್ಬರದ ಅರ್ಧಶತಕದ ನೆರವಿನಿಂದ ಬಾಂಗ್ಲಾದೇಶ ವಿರುದ್ದ ಶ್ರೀಲಂಕಾ ತಂಡವು 5 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಕಳಫೆ ಕ್ಷೇತ್ರರಕ್ಷಣೆಗೆ ಬಾಂಗ್ಲಾದೇಶ ಬೆಲೆ ತೆತ್ತಿದೆ.

ಬಾಂಗ್ಲಾದೇಶ ಕ್ರಿಕೆಟ್ ತಂಡ (Bangladesh Cricket Team) ನೀಡಿದ್ದ 172 ರನ್‌ಗಳ ಕಠಿಣ ಗುರಿ ಬೆನ್ನತ್ತಿದ ಶ್ರೀಲಂಕಾ ಉತ್ತಮ ಆರಂಭ ಪಡೆಯಲು ವಿಫಲವಾಯಿತು. ಮೊದಲ ಓವರ್‌ನಲ್ಲೇ ಆರಂಭಿಕ ಬ್ಯಾಟ್ಸ್‌ಮನ್‌ ಕುಸಾಲ್ ಪೆರೆರಾ ಕೇವಲ ಒಂದು ರನ್ ಬಾರಿಸಿ ನಸುಮ್ ಅಹಮ್ಮದ್ ಬೌಲಿಂಗ್‌ನಲ್ಲಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಪತುಮ್‌ ನಿಸ್ಸಾಂಕ ಹಾಗೂ ಚರಿತ್ ಅಸಲಂಕಾ ಜೋಡಿ ಎಚ್ಚರಿಕೆ ಬ್ಯಾಟಿಂಗ್ ನಡೆಸುವ ಮೂಲಕ ತಂಡಕ್ಕೆ ಆಸರೆಯಾದರು. ಎರಡನೇ ವಿಕೆಟ್‌ಗೆ ಈ ಜೋಡಿ 69 ರನ್‌ಗಳ ಜತೆಯಾಟವಾಡುವ ಮೂಲಕ ತಂಡಕ್ಕೆ ಆಸರೆಯಾದರು.

ಒಂದೇ ಓವರ್‌ನಲ್ಲಿ 2 ವಿಕೆಟ್ ಕಬಳಿಸಿದ ಶಕೀಬ್‌ : ಎರಡನೇ ವಿಕೆಟ್‌ಗೆ ಉತ್ತಮ ಜತೆಯಾಟ ನಿಭಾಯಿಸುತ್ತಿದ್ದ ಈ ಜೋಡಿಯನ್ನು ಬೇರ್ಪಡಿಸುವಲ್ಲಿ ಅನುಭವಿ ಸ್ಪಿನ್ನರ್ ಶಕೀಬ್ ಅಲ್ ಹಸನ್ ಯಶಸ್ವಿಯಾದರು. 21 ಎಸೆತಗಳಲ್ಲಿ 24 ರನ್‌ ಬಾರಿಸಿದ್ದ ಪತುಮ್ ಕ್ಲೀನ್‌ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದೇ ಓವರ್‌ನಲ್ಲೇ ಆವಿಷ್ಕಾ ಫರ್ನಾಂಡೋ ಕೂಡಾ ಕ್ಲೀನ್ ಬೌಲ್ಡ್ ಆಗಿ ಪೆವಿಲಿಯನ್ ಸೇರಿದರು. ಇದರೊಂದಿಗೆ ಶಕೀಬ್ ಅಲ್ ಹಸನ್‌ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಗರಿಷ್ಠ ವಿಕೆಟ್(41) ಕಬಳಿಸಿದ ಬೌಲರ್‌ ಆಹಿ ಹೊರಹೊಮ್ಮಿದ್ದರು.

T20 World Cup: Ban vs SL ಬೌಲಿಂಗ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಶಕೀಬ್ ಅಲ್ ಹಸನ್‌..!

ಪಂದ್ಯದ ಗತಿಯನ್ನೇ ಬದಲಿಸಿದ ಬರ್ತ್‌ ಡೇ ಬಾಯ್ ರಾಜಪಕ್ಸಾ: ಹೌದು, ಒಂದೇ ಓವರ್‌ನಲ್ಲಿ 2 ವಿಕೆಟ್ ಪತನದ ಬಳಿಕ ಬಾಂಗ್ಲಾದೇಶ ಪಂದ್ಯದಲ್ಲಿ ಹಿಡಿತ ಸಾಧಿಸುವತ್ತ ದಿಟ್ಟ ಹೆಜ್ಜೆಯಿಟ್ಟಿತು. ವನಿಂದು ಹಸರಂಗ ಕೂಡಾ ಕೇವಲ 6 ರನ್ ಬಾರಿಸಿ ವಿಕೆಟ್‌ ಒಪ್ಪಿಸಿದರು. ಆದರೆ 5ನೇ ವಿಕೆಟ್‌ಗೆ ಅಸಲಂಕಾ ಹಾಗೂ ಬರ್ತ್‌ ಡೇ ಬಾಯ್ ಭಾನುಕ ರಾಜಪಕ್ಸಾ ಜೋಡಿ 86 ರನ್‌ಗಳ ಜತೆಯಾಟವಾಡುವ ಮೂಲಕ ಪಂದ್ಯದ ದಿಕ್ಕನ್ನೇ ಬದಲಿಸಿದರು. ಅಸಲಂಕಾ 49 ಎಸೆತಗಳನ್ನು ಎದುರಿಸಿ 5 ಬೌಂಡರಿ ಹಾಗೂ 5 ಸಿಕ್ಸರ್ ನೆರವಿನಿಂದ ಅಜೇಯ 80 ರನ್‌ ಬಾರಿಸಿದರು. ಮತ್ತೊಂದು ತುದಿಯಲ್ಲಿ ರಾಜಪಕ್ಸಾ ಕೇವಲ 31 ಎಸೆತಗಳನ್ನು ಎದುರಿಸಿ 3 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 53 ರನ್‌ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಅದರಲ್ಲೂ 16ನೇ ಓವರ್‌ನಲ್ಲಿ ರಾಜಪಕ್ಸಾ 22 ರನ್‌ ಕಲೆಹಾಕುವ ಮೂಲಕ ಪಂದ್ಯ ಲಂಕಾದತ್ತ ವಾಲುವಂತೆ ಮಾಡುವಲ್ಲಿ ಯಶಸ್ವಿಯಾದರು.

ಇದಕ್ಕೂ ಮೊದಲು ಟಾಸ್ ಸೋತು ಬ್ಯಾಟಿಂಗ್ ಮಾಡಿದ ಬಾಂಗ್ಲಾದೇಶಕ್ಕೆ ಆರಂಭಿಕ ಬ್ಯಾಟ್ಸ್‌ಮನ್ ಮೊಹಮ್ಮದ್ ನಯೀಮ್(62) ಹಾಗೂ ಮುಷ್ಫಿಕುರ್ ರಹೀಮ್(57*) ಬಾರಿಸಿದ ಆಕರ್ಷಕ ಅರ್ಧಶತಕದ ನೆರವಿನಿಂದ 4 ವಿಕೆಟ್ ಕಳೆದುಕೊಂಡು 171 ರನ್ ಗಳಿಸಿತ್ತು.

Follow Us:
Download App:
  • android
  • ios