Asianet Suvarna News Asianet Suvarna News

T20 World Cup IND vs PAK; ಕೊಹ್ಲಿ ಹಾಫ್ ಸೆಂಚುರಿ, ಪಾಕಿಸ್ತಾನಕ್ಕೆ 152 ರನ್ ಗುರಿ!

  • ಭಾರತ ಹಾಗೂ ಪಾಕಿಸ್ತಾನ ನಡುವಿನ ಟಿ20 ವಿಶ್ವಕಪ್ ಪಂದ್ಯ
  • ಆರಂಭಿಕ ಆಘಾತ ನಡುವೆ ನಾಯಕ ವಿರಾಟ್ ಕೊಹ್ಲಿ ದಿಟ್ಟ ಹೋರಾಟ
  • ಪಾಕಿಸ್ತಾನಕ್ಕೆ 152 ರನ್ ಟಾರ್ಗೆಟ್ ನೀಡಿದ ಟೀಂ ಇಂಡಿಯಾ
T20 World Cup IND vs PAK virat kohli help team india to set run target to Pakistan ckm
Author
Bengaluru, First Published Oct 24, 2021, 9:22 PM IST

ದುಬೈ(ಅ.24):  ಆರಂಭದಲ್ಲೇ 3 ವಿಕೆಟ್ ಪತನ, ಪಾಕಿಸ್ತಾನ ತಂಡದ ಸಂಭ್ರಮಾಚರಣೆ, ಸಂಕಷ್ಟದಲ್ಲಿ ಟೀಂ ಇಂಡಿಯಾ...ಹೀಗೆ ಒತ್ತಡದ ನಡುವೆ ನಾಯಕ ವಿರಾಟ್ ಕೊಹ್ಲಿ ಹೋರಾಟದಿಂದ ಟೀಂ ಇಂಡಿಯಾ ಅಷ್ಟೇ ಉತ್ತಮವಾಗಿ ಪಂದ್ಯದಲ್ಲಿ ಕಮ್‌ಬ್ಯಾಕ್ ಮಾಡಿತು. ನಾಯಕ ಕೊಹ್ಲಿ ಹಾಫ್ ಸೆಂಚುರಿ, ರಿಷಬ್ ಪಂತ್ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 151 ರನ್ ಸಿಡಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ 152 ರನ್ ಟಾರ್ಗೆಟ್ ನೀಡಿದೆ.

T20 World Cup IND vs PAK; ಇದು ಬದ್ಧವೈರಿಗಳ ಕದನ, ಫ್ಯಾನ್ಸ್ ಹೃದಯ ಗೆದ್ದಿತು ನಾಯಕರ ನಡೆ!

ಟಾಸ್ ಸೋತು ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಆರಂಭದಲ್ಲೇ ಆಘಾತ ಎದುರಾಗಿತ್ತು. ಪಾಕಿಸ್ತಾನ ವೇಗಿ ಶಾಹೀನ್ ಆಫ್ರಿದಿ ದಾಳಿಗೆ ಟೀಂ ಇಂಡಿಯಾ ತತ್ತರಿಸಿತು. ಟೀಂ ಇಂಡಿಯಾ 1 ರನ್ ಗಳಿಸುವಷ್ಟರಲ್ಲೇ ರೋಹಿತ್ ಶರ್ಮಾ ವಿಕೆಟ್ ಪತನಗೊಂಡಿತು. ರೋಹಿತ್ ಡಕೌಟ್ ಆದರು. ಈ ಶಾಕ್‌ನಿಂದ ಹೊರಬರುವ ಮುನ್ನವೇ ಟೀಂ ಇಂಡಿಯಾ 2ನೇ ವಿಕೆಟ್ ಪತನಗೊಂಡಿತು. ಕೆಎಲ್ ರಾಹುಲ್ 3 ರನ್ ಸಿಡಿಸಿ ಔಟಾದರು.

ಆರಂಭಿಕರ ವಿಕೆಟ್ ಪತನದಿಂದ ಕುಸಿದಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಸೂರ್ಯಕುಮಾರ್ ಜೊತೆಯಾಟ ಕೊಂಚ ಸಮಾಧಾನ ತಂದಿತು. ಅಷ್ಟರಲ್ಲೇ ಸೂರ್ಯಕುಮಾರ್ ಯಾದವ್ ಪೆವಿಲಿಯನ್ ಸೇರಿಕೊಂಡರು. ಸೂರ್ಯಕುಮಾರ್ 11 ರನ್ ಸಿಡಿಸಿ ಔಟಾದರು. 31 ರನ್‌ಗೆ ಟೀಂ ಇಂಡಿಯಾ 3 ವಿಕೆಟ್ ಕಳೆದುಕೊಂಡಿತು.

T20 World Cup IND vs PAK; ಈ ಪಂದ್ಯ ನಮಗೆ ಬಿಟ್ಟು ಬಿಡಿ, ಧೋನಿಗೆ ಪಾಕ್ ಯುವತಿಯ ಮನವಿ!

ವಿರಾಟ್ ಕೊಹ್ಲಿ ಹಾಗೂ ರಿಷಬ್ ಪಂತ್ ದಿಟ್ಟ ಹೋರಾಟ ನೀಡಿದರು. 2 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಅಬ್ಬರಿಸಿದ ರಿಷಬ್ ಪಂತ್ 30 ಎಸೆತದಲ್ಲಿ 39 ರನ್ ಸಿಡಿಸಿ ಔಟಾದರು. 84 ರನ್‌ಗೆ ಟೀಂ ಇಂಡಿಯಾದ ನಾಲ್ಕನೇ ವಿಕೆಟ್ ಪತನಗೊಂಡಿತು. ತಂಡದ ಜವಾಬ್ದಾರಿ ಹೊತ್ತುಕೊಂಡ ನಾಯಕ ಕೊಹ್ಲಿ ಎಚ್ಚರಿಕೆಯಿಂದ ಬ್ಯಾಟ್ ಬೀಸಿದರು

ರವೀಂದ್ರ ಜಡೇಜಾ ಜೊತೆ ಸೇರಿದ ಕೊಹ್ಲಿ ಟೀಂ ಇಂಡಿಯಾದ ಆತಂಕ ದೂರ ಮಾಡಿದರು. ಅಲ್ಪ ಮೊತ್ತಕ್ಕೆ ಕುಸಿಯುವ ಭೀತಿಯಲ್ಲಿದ್ದ ತಂಡಕ್ಕೆ ವಿರಾಟ್ ಕೊಹ್ಲಿ ಹೊಸ ಚೈತನ್ಯ ನೀಡಿದರು. ಕೊಹ್ಲಿ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಆದರೆ ರವೀಂದ್ರ ಜಡೇಜಾ 13 ರನ್ ಸಿಡಿಸಿ ಔಟಾದರು.

ಕೊಹ್ಲಿ 57 ರನ್ ಸಿಡಿಸಿ ಔಟಾದರು. ಈ ಮೂಲಕ ಇದೇ ಮೊದಲ ಬಾರಿಗೆ ಪಾಕಿಸ್ತಾನ ವಿರುದ್ದದ ಟಿ20 ವಿಶ್ವಕಪ್ ಟೂರ್ನಿ ಪಂದ್ಯದಲ್ಲಿ ವಿಕೆಟ್ ಕೈಚೆಲ್ಲಿದರು.  ಬಿರುಸಿನ ಹೊಡೆತಕ್ಕೆ ಮುಂದಾದ ಹಾರ್ದಿಕ್ ಪಾಂಡ್ಯ 11 ರನ್ ಸಿಡಿಸಿ ಔಟಾದರು. ಅಂತಿಮ ಓವರ್‌ನಲ್ಲಿ ಹೆಚ್ಚು ರನ್ ಕಬಳಿಸಲು ಟೀಂ ಇಂಡಿಯಾ ವಿಫಲವಾಯಿತು. 

T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

ಭುವನೇಶ್ವರ್ ಕುಮಾರ್ ಅಜೇಯ 5 ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 7 ವಿಕೆಟ್ ನಷ್ಟಕ್ಕೆ 151  ರನ್ ಸಿಡಿಸಿತು. ಪಾಕಿಸ್ತಾನ ಗೆಲುವಿಗೆ 152 ರನ್ ಸಿಡಿಸಬೇಕಿದೆ. ಪಾಕಿಸ್ತಾನ ಪರ ಶಾಹೀನ್ ಆಫ್ರಿದಿ 3, ಹಸನ್ ಆಲಿ 2, ಶದಬ್ ಖಾನ್ 1 ಹಾಗೂ ಹ್ಯಾರಿಸ್ ರೌಫ್ 1 ವಿಕೆಟ್ ಪಡೆದು ಮಿಂಚಿದರು. 

Follow Us:
Download App:
  • android
  • ios