Asianet Suvarna News Asianet Suvarna News

T20 World Cup IND vs PAK; ಇದು ಬದ್ಧವೈರಿಗಳ ಕದನ, ಫ್ಯಾನ್ಸ್ ಹೃದಯ ಗೆದ್ದಿತು ನಾಯಕರ ನಡೆ!

  • ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಕದನ
  • ಬದ್ಧವೈರಿಗಳ ಕದನದಲ್ಲಿ ಹೃದಯ ಗೆದ್ದ ನಾಯಕರ ನಡೆ
  • ವಿರಾಟ್ ಕೊಹ್ಲಿ, ಬಾಬರ್ ಅಜಮ್ ನಗುವಿಗೆ ಅಭಿಮಾನಿಗಳ ಮೆಚ್ಚುಗೆ
T20 World Cup IND vs PAK viat kohli and babar azam gesture pic viral win netizens hearts ckm
Author
Bengaluru, First Published Oct 24, 2021, 8:44 PM IST
  • Facebook
  • Twitter
  • Whatsapp

ದುಬೈ(ಅ.24): T20 World Cup 2021ರ ಭಾರತ ಹಾಗೂ ಪಾಕಿಸ್ತಾನ ನಡುವಿನ ರೋಚಕ ಪಂದ್ಯ ಬದ್ಧವೈರಿಗಳ ಕದನ ಎಂದೇ ಬಿಂಬಿತವಾಗಿದೆ. ಇತ್ತ ಅಭಿಮಾನಿಗಳಂತೂ ಸಾಮಾಜಿಕ ಜಾಲತಾಣದಲ್ಲಿ ಜಟಾಪಟಿ ನಡೆಸುತ್ತಲೇ ಇದ್ದಾರೆ. ಆದರೆ ಪಂದ್ಯದ ಟಾಸ್ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಮ್ ನಡೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.

T20 World Cup IND vs PAK; ಆರಂಭದಲ್ಲೇ 4 ವಿಕೆಟ್ ಪತನ, ಸಂಕಷ್ಟದಲ್ಲಿ ಭಾರತ!

ಇಂಡೋ ಪಾಕ್ ಪಂದ್ಯದ ಟಾಸ್ ವೇಳೆ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಬರ್ ಅಜಮ್ ಮಾತುಕತೆ ನಡೆಸಿದ್ದಾರೆ. ಹಾಸ್ಯದ ಜೊತೆಗೆ ನಗುವಿನ ಈ ಮಾತು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನಾಯಕರ ಉಭಯ ಕುಶಲೋಪರಿ ಹೈವೋಲ್ಟೇಜ್ ಪಂದ್ಯ ಕಾವನ್ನು ತಣಿಸಿತು.

T20 World Cup IND vs PAK; ಭಾರತ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ!

ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಹಾಗೂ ಬಾಬರ್ ಫೋಟೋ ವೈರಲ್ ಆಗಿದೆ. ಉಭಯ ತಂಡದ ನಾಯಕರು ನೀಡುತ್ತಿರುವ ಗೌರವ ಹಾಗೂ ನಾಯಕರ ನಡುವಿನ ಉತ್ತಮ ಬಾಂಧವ್ಯವನ್ನು ನಾವು ಗೌರವಿಸಬೇಕು. ಬದಲಾಗಿ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳ ನಡುವೆ ಹೋರಾಟ ಉತ್ತಮವಲ್ಲ ಎಂದು ಹಲವರು ಅಭಿಪ್ರಾಯಪಟ್ಟಿದ್ದಾರೆ.

 

ಈ ಕ್ಷಣಕ್ಕಾಗಿ ನಾವು ಕಾಯುತ್ತಿದ್ದೇವು. ಇದು ಭಾರತ ಪಾಕಿಸ್ತಾನ ನಡುವಿ ಪಂದ್ಯದಲ್ಲಿ ಈ ರೀತಿ ದೃಶ್ಯದಿಂದ ಮನ ತಣಿಯಿತು ಎಂದು ಅಭಿಮಾನಿಗಳು ಅಭಿಪ್ರಾಯಪಟ್ಟಿದ್ದಾರೆ. 

 

 

ರೋಚಕ ಕದನ:
ಪಾಕಿಸ್ತಾನ ವಿರುದ್ಧ ಟಾಸ್ ಸೋತು ಬ್ಯಾಟಿಂಗ್ ಇಳಿದಿರುವ ಟೀಂ ಇಂಡಿಯಾ ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡು ಆತಂಕಕ್ಕೆ ಒಳಗಾಗಿದೆ. ರೋಹಿತ್ ಶರ್ಮಾ, ಕೆಎಲ್ ರಾಹುಲ್,  ಸೂರ್ಯಕುಮಾರ್ ಯಾದವ್ ಹಾಗೂ ರಿಷಬ್ ಪಂತ್ ವಿಕೆಟ್ ಪತನಗೊಂಡಿದೆ. ಪಾಕಿಸ್ತಾನ ಮಾರಕ ದಾಳಿಗೆ ಟೀಂ ಇಂಡಿಯಾ ಇದೀಗ ದಿಟ್ಟ ಹೋರಾಟ ನೀಡುತ್ತಿದೆ.

ಭಾರತ ಹಾಗೂ ಪಾಕಿಸ್ತಾನ ತಂಡ: 
ಪಾಕಿಸ್ತಾನ ವಿರುದ್ಧದ ಪಂದ್ಯಕ್ಕೆ ಕೊಹ್ಲಿ ಸೈನ್ಯದಲ್ಲಿ  ರೋಹಿತ್ ಶರ್ಮಾ, ಕೆಎಲ್ ರಾಹುಲ್, ಸೂರ್ಯಕುಮಾರ್ ಯಾದವ್, ರಿಷಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಮೊಹಮ್ಮದ್ ಶಮಿ, ವರುಣ್ ಚಕ್ರವರ್ತಿ, ಜಸ್ಪ್ರೀತ್ ಬುಮ್ರಾ ಸ್ಥಾನ ಪಡೆದಿದ್ದಾರೆ. 

ಇತ್ತ ಪಾಕಿಸ್ತಾನ  ತಂಡದಲ್ಲಿ ಹಿರಿಯ ಕ್ರಿಕೆಟಿಗ ಶೋಯೆಬ್ ಮಲಿಕ್ ಸ್ಥಾನ ಪಡೆದುಕೊಂಡಿದ್ದಾರೆ. ಬಾಬರ್ ಅಜಮ್ ತಂಡದಲ್ಲಿ  ಮೊಹಮ್ಮದ್ ರಿಜ್ವಾನ್, ಫಕರ್ ಜಮನ್, ಮೊಹಮ್ಮದ್ ಹಫೀಜ್, ಶೋಯೆಬ್ ಮಲಿಕ್, ಆಸಿಫ್ ಆಲಿ, ಇಮಾದ್ ವಾಸಿಮ್, ಶದಬ್ ಖಾನ್, ಹಸನ್ ಆಲಿ, ಹ್ಯಾರಿಸ್ ರೌಫ್, ಶಾಹೀನ್ ಆಫ್ರಿದಿ ಸ್ಥಾನ ಪಡೆದಿದ್ದಾರೆ
 

Follow Us:
Download App:
  • android
  • ios