ಕೊಹ್ಲಿಯನ್ನ ಟಾರ್ಗೆಟ್ ಮಾಡಿದ್ದಾರೆ ಬಿಗ್​ಬಾಸ್​ಗಳು? ಕೊಹ್ಲಿ ಇಮೇಜ್​ಗೆ ಡ್ಯಾಮೇಜ್ ಮಾಡ್ತಿದೆ ಬಿಸಿಸಿಐ! ಜಿಂಬಾಬ್ವೆ ಸರಣಿಯಲ್ಲಿ ಕೊಹ್ಲಿಯನ್ನ ಯಾಕೆ ಆಡಿಸ್ತಿದೆ ಗೊತ್ತಾ..?

ಬೆಂಗಳೂರು (ಜು.25) : ವಿರಾಟ್ ಕೊಹ್ಲಿ ವರ್ಲ್ಡ್ ಕ್ರಿಕೆಟ್​ನಲ್ಲಿ ಕೇವಲ ನಂಬರ್ ಒನ್ ಆಟಗಾರ ಮಾತ್ರವಲ್ಲ, ಪಾಪ್ಯುಲಾರಿಟಿಯಲ್ಲೂ ನಂಬರ್ ಒನ್ ಪ್ಲೇಯರ್​​. ಕೊಹ್ಲಿ ಆಡಿದ್ರೆ ಮ್ಯಾಚ್ ನೋಡುವವರೆ ಸಂಖ್ಯೆ ದುಪ್ಪಟ್ಟಾಗುತ್ತೆ. ಅವರು ಆಡದಿದ್ರೆ ಪಂದ್ಯಗಳನ್ನ ನೋಡುವವರೇ ಸಂಖ್ಯೆ ದಿಢೀರ್ ಕುಸಿಯುತ್ತೆ. ಇದು ಅದೆಷ್ಟೋ ಸಲ ಸಾಬೀತಾಗಿದೆ ಕೂಡ. ಕೊಹ್ಲಿ ಆಡದ ಸರಣಿಗಳನ್ನ ಟೆಲಿಕಾಸ್ಟ್ ಮಾಡಲು ಚಾನಲ್​ಗಳು ಸಹ ಹಿಂದೇಟು ಹಾಕುತ್ತವೆ. ಕೊಹ್ಲಿ ಎರಡುವರೆ ವರ್ಷದಿಂದ ಸೆಂಚುರಿ ಹೊಡೆಯದೆ ಇರಬಹುದು. ಆದ್ರೆ ಅವರ ಪಾಪ್ಯುಲಾರಿಟಿ ಕಮ್ಮಿಯಾಗಿಲ್ಲ. ಆನೆ ಇದ್ರೂ ಸಾವಿರ ಸತ್ರೂ ಸಾವಿರ ಅಂತರಲ್ಲ. ಹಾಗೆ ಕೊಹ್ಲಿ ಆಡಿದ್ರೂ ಕಿಂಗ್, ಆಡದಿದ್ದರೂ ಕಿಂಗ್.

T20 World Cup: ಎರಡು ಬಿಗ್​ ಟಾರ್ಗೆಟ್​​​ ಕನಸು ಬಿಚ್ಚಿಟ್ಟ ಕೊಹ್ಲಿ 

ಈಗ ಇದೇ ಕೊಹ್ಲಿ(Virat kohli) ಇಮೇಜ್​ಗೆ ಡ್ಯಾಮೇಜ್ ಮಾಡಲು ಹೊರಟಿದೆ BCCI. ಅದು ಹೇಗೆ ಅನ್ನೋದನ್ನ ವಿವರಿಸ್ತೀವಿ ನೋಡಿ. ಕಳಪೆ ಫಾರ್ಮ್​ನಲ್ಲಿರುವ ಕೊಹ್ಲಿ ವಿಂಡೀಸ್ ಸಿರೀಸ್​ನಿಂದ ವಿಶ್ರಾಂತಿ ಪಡೆದಿದ್ದಾರೆ. ಏಷ್ಯಾಕಪ್​ನಲ್ಲಿ ಕಣಕ್ಕಿಳಿಯೋ ಪ್ಲಾನ್ ಅವರದ್ದು. ಆದ್ರೆ ಏಷ್ಯಾಕಪ್​ಗೂ ಮುನ್ನ ಅವರನ್ನ ಜಿಂಬಾಬ್ವೆ(Zimbabwe) ಸರಣಿಗೆ ಆಯ್ಕೆ ಮಾಡಲು BCCI ನಿರ್ಧರಿಸಿದೆ. ಈ ಮೂಲ್ಕ ಕೊಹ್ಲಿಯನ್ನ ಅವಮಾನ ಮಾಡಲು ಹೊರಟಿದೆ. ಅದು ಒಂದು ಅವಮಾನವಲ್ಲ, ಎರೆಡೆರಡು ಅವಮಾನ.

2ನೇ ದರ್ಜೆ ತಂಡದಲ್ಲಿ ಕೊಹ್ಲಿ ಕೇವಲ ಆಟಗಾರ: 
ಜಿಂಬಾಬ್ವೆ(zimbabwe) ದುರ್ಬಲವಾಗಿರುವುದರಿಂದ 2ನೇ ದರ್ಜೆ ತಂಡವನ್ನ ಜಿಂಬಾಬ್ವೆಗೆ ಕಳುಹಿಸಲು ಬಿಸಿಸಿಐ ಪ್ಲಾನ್ ಮಾಡಿದೆ. ಈ 2ನೇ ದರ್ಜೆ ತಂಡದಲ್ಲಿ ಕೊಹ್ಲಿಯನ್ನ ಆಡಿಸೋ ಮೂಲ್ಕ ನೀವು ಸ್ಟಾರ್ ಪ್ಲೇಯರ್​ ಅಲ್ಲ, ನೀವು ಸಹ ಸಾಮಾನ್ಯ ಆಟಗಾರ ಅಂತ ತೋರಿಸಲು ಹೊರಟಿದೆ BCCI. ಈ ಮೂಲ್ಕ ಹೇಳದೆ ಕೇಳದೆ ಟಿ20 ಮತ್ತು ಟೆಸ್ಟ್ ಕ್ಯಾಪ್ಟನ್ಸಿ ಬಿಟ್ಟು BCCI ಮುಜುಗರಕ್ಕೆ ಒಳಗಾಗುವಂತೆ ಮಾಡಿದ್ದ ಕೊಹ್ಲಿಯನ್ನ ಅವಮಾನಿಸಲು ಸಿದ್ದತೆ ನಡೆಸಿದೆ. 

ಟಿ20 ವಿಶ್ವಕಪ್‌ ಬಳಿಕ ಟೀಂ ಇಂಡಿಯಾದ ಸ್ಟಾರ್ ಆಟಗಾರರು ಆಡಿದ್ದಕ್ಕಿಂತ ಹೊರಗುಳಿದಿದ್ದೇ ಹೆಚ್ಚು..!

ವರ್ಲ್ಡ್​​-11 ವಿರುದ್ಧ ಪಂದ್ಯ ಆಡ್ತಿಲ್ಲ ಕೊಹ್ಲಿ: 
ಆಗಸ್ಟ್​ 15ಕ್ಕೆ ಭಾರತಕ್ಕೆ ಸ್ವಾಂತಂತ್ರ್ಯ ಬಂದು 75 ವರ್ಷ. ಈ ಸಂಭ್ರಮವನ್ನ ಕೇಂದ್ರ ಸರ್ಕಾರ ದೊಡ್ಡ ಮಟ್ಟದಲ್ಲಿ ಆಚರಿಸುತ್ತಿದ್ದು, ಅಜಾದಿ ಕಾ ಅಮೃತ್​ ಮಹೋತ್ಸವ್ ಹೆಸರಿನಲ್ಲಿ ನಾನಾ ಕಾರ್ಯಕ್ರಮಗಳನ್ನ ಸಂಘಟಿಸುತ್ತಿದೆ. ಈ ಅಂಗವಾಗಿ ಆಗಸ್ಟ್​ 22ರಂದು ಭಾರತ ಮತ್ತು ರೆಸ್ಟ್​ ಆಫ್ ವರ್ಲ್ಡ್​-11 ನಡ್ವೆ ಕ್ರಿಕೆಟ್ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಭಾರತೀಯ ಸ್ಟಾರ್ ಪ್ಲೇಯರ್ಸ್​ ಆಡ್ತಿದ್ದಾರೆ. ಆದರೆ ಜಿಂಬಾಬ್ವೆ ಟೂರ್​ಗೆ ಹೋಗೋ ಕೊಹ್ಲಿ ಈ ಪಂದ್ಯ ಆಡಲ್ಲ. ಕಾರಣ ಆಗಸ್ಟ್ 22ರಂದೇ ಭಾರತ-ಜಿಂಬಾಬ್ವೆ 3ನೇ ಪಂದ್ಯ ಇದೆ.

ನೀವು ಸ್ಟಾರ್ ಪ್ಲೇಯರ್ ಅಲ್ಲವೇ ಅಲ್ಲ. ನೀವು ಸಾಮಾನ್ಯ ಪ್ಲೇಯರ್. ನಿಮ್ಮನ್ನು ಬಿಟ್ಟು ಭಾರತದಲ್ಲಿ ಇನ್ನೂ ಸ್ಟಾರ್ ಪ್ಲೇಯರ್ಸ್ ಇದ್ದಾರೆ. ನೀವಿಲ್ಲದೆ ಭಾರತೀಯ ಸ್ಟಾರ್ ಆಟಗಾರರ ತಂಡ ವರ್ಲ್ಡ್​​-11 ವಿರುದ್ಧ ಪಂದ್ಯ ಆಡಲಿದೆ. ಪಂದ್ಯ ಸಹ ಸಕ್ಸಸ್ ಆಗುತ್ತೆ ಅನ್ನೋದನ್ನ ತೋರಿಸಲು ಹೊರಟಿದೆ BCCI. ಈ ಮೂಲ್ಕ ಒನ್​ಡೇ ಕ್ಯಾಪ್ಟನ್ಸಿಯನ್ನ ಕಿತ್ತುಹಾಕುವಾಗ ನನ್ನನ್ನ BCCI ಸಂಪರ್ಕಿಸಲಿಲ್ಲ ಅನ್ನೋ ಕೊಹ್ಲಿ ಅಹಂಕಾರದ ಮಾತಿಗೆ ಈಗ ಬಿಸಿ ಮುಟ್ಟಿಸುತ್ತಿದೆ. ಒಟ್ನಲ್ಲಿ BCCI ಎದುರು ಹಾಕಿಕೊಂಡೆ ಉಳಿಗಾಲವಿಲ್ಲ ಅನ್ನೋದನ್ನ ಬಿಗ್​ ಬಾಸ್​ಗಳು ತೋರಿಸಲು ಹೊರಟಿದ್ದಾರೆ. ಈ ಎಲ್ಲಾ ಅವಮಾನಗಳನ್ನ ಕೊಹ್ಲಿ ಸಹಿಸಿಕೊಳ್ಳದೆ ವಿಧಿಯಿಲ್ಲ. ಯಾಕಂದರೆ ಕ್ಯಾಪ್ಟನ್ ಆಗಿದ್ದಾಗ ಅವರು ಸಹ ಬೇರೆಯವರಿಗೆ ಅವಮಾನ ಮಾಡಿದ್ದಾರೆ. ಅದಕ್ಕೆ ಹೇಳೋದು ಮಾಡಿದುಣ್ಣೋ ಮಾಹಾರಾಯ ಅಂತ.