ಮೊದಲು ಬ್ಯಾಟ್ ಮಾಡಿದ ಪಪುವಾ 8 ವಿಕೆಟ್‌ಗೆ 136 ರನ್‌ ಕಲೆಹಾಕಿತು. ಸೆಸೆ ಬವು 50 ರನ್‌ ಗಳಿಸಿದರೆ, ಕಿಪ್ಲಿನ್ ಡೊರಿಗಾ 27 ರನ್‌ ಕೊಡುಗೆ ನೀಡಿದರು. ಸುಲಭ ಗುರಿ ಸಿಕ್ಕರೂ ಪರದಾಡಿದ ವಿಂಡೀಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

ಗಯಾನಾ: ಟಿ20 ವಿಶ್ವಕಪ್‌ನ ಮೊದಲ ದಿನದ ಲೋ ಸ್ಕೋರ್‌ ಪಂದ್ಯದಲ್ಲಿ ಆತಿಥೇಯ ವೆಸ್ಟ್‌ಇಂಡೀಸ್‌ ತಂಡ ಪಪುವಾ ನ್ಯೂ ಗಿನಿ ವಿರುದ್ಧ 5 ವಿಕೆಟ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಮೊದಲ ದಿನವೇ ಬಲಿಷ್ಠ ತಂಡಕ್ಕೆ ಪಪುವಾ ನ್ಯೂ ಗಿನಿ ಸೋಲಿನ ಆಘಾತ ನೀಡುವ ನಿರೀಕ್ಷೆಯಲ್ಲಿದ್ದರೂ ವಿಂಡೀಸ್‌ ಅಲ್ಪದರಲ್ಲೇ ಪಾರಾಯಿತು.

ಮೊದಲು ಬ್ಯಾಟ್ ಮಾಡಿದ ಪಪುವಾ 8 ವಿಕೆಟ್‌ಗೆ 136 ರನ್‌ ಕಲೆಹಾಕಿತು. ಸೆಸೆ ಬವು 50 ರನ್‌ ಗಳಿಸಿದರೆ, ಕಿಪ್ಲಿನ್ ಡೊರಿಗಾ 27 ರನ್‌ ಕೊಡುಗೆ ನೀಡಿದರು. ಸುಲಭ ಗುರಿ ಸಿಕ್ಕರೂ ಪರದಾಡಿದ ವಿಂಡೀಸ್‌ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಗೆಲುವಿನ ದಡ ಸೇರಿತು.

T20 World Cup: ಈ ಚುಟುಕು ವಿಶ್ವಕಪ್‌ನಲ್ಲಿ 5 ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ..!

ಜಾನ್ಸನ್‌ ಚಾರ್ಲ್ಸ್‌ ಖಾತೆ ತೆರೆಯುವ ಮೊದಲೇ ಪೆವಿಲಿಯನ್‌ ಸೇರಿದರು. ಬಳಿಕ ಬ್ರೆಂಡಾನ್‌ ಕಿಂಗ್‌ 34, ನಿಕೋಲಸ್‌ ಪೂರನ್‌ 27 ರನ್‌ ಗಳಿಸಿ ತಂಡಕ್ಕೆ ಆಸರೆಯಾದರು. ಒಂದು ಹಂತದಲ್ಲಿ ತಂಡ ಸೋಲಿನ ಭೀತಿಗೆ ಒಳಗಾದರೂ, ಕೊನೆವರೆಗೂ ಕ್ರೀಸ್‌ನಲ್ಲಿ ನಿಂತ ರಾಸ್ಟನ್‌ ಚೇಸ್‌(27 ಎಸೆತಗಳಲ್ಲಿ ಔಟಾಗದೆ 42) ತಂಡವನ್ನು ಗೆಲ್ಲಿಸಿದರು.

ಸ್ಕೋರ್‌: 
ಪಪುವಾ 136/8 (ಸೆಸೆ 50, ರಸೆಲ್‌ 2-19, ಅಲ್ಜಾರಿ 2-34), 
ವಿಂಡೀಸ್‌ 19 ಓವರಲ್ಲಿ 137/5 (ಚೇಸ್‌ 42, ಕಿಂಗ್ 34, ಅಸ್ಸಾದ್‌ 2-28) 
ಪಂದ್ಯಶ್ರೇಷ್ಠ: ರಾಸ್ಟನ್‌ ಚೇಸ್‌

ವಿಶ್ವಕಪ್‌ಗೂ ಮುನ್ನ 15 ಕೆ.ಜಿ. ತೂಕ ಇಳಿಸಿದ ಸೂರ್ಯಕುಮಾರ್‌!

ನ್ಯೂಯಾರ್ಕ್‌: ಕಳೆದ ಡಿಸೆಂಬರ್‌ ಅರ್ನಿಯಾ ಶಸ್ತ್ರಚಿಕಿತ್ಸೆಯಿಂದಾಗಿ ಬಳಿಕ 4 ತಿಂಗಳು ಸ್ಪರ್ಧಾತ್ಮಕ ಕ್ರಿಕೆಟ್‌ನಿಂದ ದೂರ ಉಳಿದಿದ್ದ ತಾರಾ ಬ್ಯಾಟರ್‌ ಸೂರ್ಯಕುಮಾರ್ ಯಾದವ್‌, ಟಿ20 ವಿಶ್ವಕಪ್‌ಗೂ ಮುನ್ನ 15 ಕೆ.ಜಿ. ತೂಕ ಇಳಿಸಿಕೊಂಡಿದ್ದಾರೆ. ಶಸ್ತ್ರಚಿಕಿತ್ಸೆ ಬಳಿಕ ಸೂರ್ಯಕುಮಾರ್‌ ತೂಕದಲ್ಲಿ ಹೆಚ್ಚಳವಾಗಿತ್ತು. ಆದರೆ ಬೆಂಗಳೂರಿನಲ್ಲಿ ಎನ್‌ಸಿಎಯಲ್ಲಿ ಡಯಟ್‌ ಮೂಲಕ ಭಾರಿ ಪ್ರಮಾಣದಲ್ಲಿ ತೂಕ ಇಳಿಸಿಕೊಂಡಿದ್ದಾರೆ.