Asianet Suvarna News Asianet Suvarna News

T20 World Cup: ಈ ಚುಟುಕು ವಿಶ್ವಕಪ್‌ನಲ್ಲಿ 5 ದಾಖಲೆ ಮೇಲೆ ಕಣ್ಣಿಟ್ಟ ರೋಹಿತ್ ಶರ್ಮಾ..!

ಟಿ20 ವಿಶ್ವಕಪ್‌ಗೆ ಚಾಲನೆ ಸಿಕ್ಕಿದೆ. ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನೂ ಆಡಿದೆ. 2007ರ ಬಳಿಕ ಭಾರತ ಟಿ20 ವರ್ಲ್ಡ್‌ಕಪ್ ಗೆದ್ದಿಲ್ಲ. 17 ವರ್ಷಗಳ ಹಿಂದೆ ಆಟಗಾರನಾಗಿ ವರ್ಲ್ಡ್‌ಕಪ್ ಗೆದ್ದಿದ್ದ ರೋಹಿತ್ ಶರ್ಮಾ, ಈ ಸಲ ನಾಯಕನಾಗಿ ವಿಶ್ವಕಪ್ ಗೆಲ್ಲಲು ಪಣ ತೊಟ್ಟಿದ್ದಾರೆ. ಇದರ ಜೊತೆ ಹಲವು ದಾಖಲೆ ನಿರ್ಮಿಸಲು ಕಾಯ್ತಿದ್ದಾರೆ.

T20 World Cup 2024 Rohit Sharma eyes on 5 unique records in this tournament kvn
Author
First Published Jun 2, 2024, 4:25 PM IST | Last Updated Jun 2, 2024, 4:25 PM IST

ಬೆಂಗಳೂರು: ರೋಹಿತ್ ಶರ್ಮಾ ಪಾಲಿಗೆ ಇದು ಕೊನೆಯ ಈ ಸಲದ ಟಿ20 ವಿಶ್ವಕಪ್.  ಇನ್ಮುಂದೆ ಅವರು ಟಿ20 ಮಾದರಿಯಲ್ಲಿ ಕಾಣಿಸಿಕೊಳ್ಳುವುದಿಲ್ಲ. ಹಾಗಾಗಿ ವರ್ಲ್ಡ್‌ಕಪ್‌ ಗೆಲುವಿನೊಂದಿಗೆ ಟಿ20ಗೆ ವಿದಾಯ ಹೇಳಲು ಎದುರು ನೋಡ್ತಿದೆ. ಇದರ ಜೊತೆ ಹಲವು ದಾಖಲೆಗಳ ಮೇಲೂ ಹಿಟ್ ಮ್ಯಾನ್ ಕಣ್ಣಿಟ್ಟಿದ್ದಾರೆ. 

ದಾಖಲೆ ಬರೆಯಲು ರೋಹಿತ್ ರೆಡಿ..!

ಟಿ20 ವಿಶ್ವಕಪ್‌ಗೆ ಚಾಲನೆ ಸಿಕ್ಕಿದೆ. ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನೂ ಆಡಿದೆ. 2007ರ ಬಳಿಕ ಭಾರತ ಟಿ20 ವರ್ಲ್ಡ್‌ಕಪ್ ಗೆದ್ದಿಲ್ಲ. 17 ವರ್ಷಗಳ ಹಿಂದೆ ಆಟಗಾರನಾಗಿ ವರ್ಲ್ಡ್‌ಕಪ್ ಗೆದ್ದಿದ್ದ ರೋಹಿತ್ ಶರ್ಮಾ, ಈ ಸಲ ನಾಯಕನಾಗಿ ವಿಶ್ವಕಪ್ ಗೆಲ್ಲಲು ಪಣ ತೊಟ್ಟಿದ್ದಾರೆ. ಇದರ ಜೊತೆ ಹಲವು ದಾಖಲೆ ನಿರ್ಮಿಸಲು ಕಾಯ್ತಿದ್ದಾರೆ.

ಎರಡು ಟಿ20 ವಿಶ್ವಕಪ್ ಗೆದ್ದ ಮೊದಲ ಭಾರತದ ಆಟಗಾರ

9ನೇ ಟಿ20 ವಿಶ್ವಕಪ್ ಟೂರ್ನಿ ಆಡುತ್ತಿರುವ ರೋಹಿತ್, ತಮ್ಮ ನಾಯಕತ್ವದಲ್ಲಿ ಟ್ರೋಫಿ ಗೆದ್ದರೆ, ಆಗ ಎರಡು ಸಲ ಟಿ20 ವರ್ಲ್ಡ್‌ಕಪ್ ಗೆದ್ದ ಭಾರತದ ಮೊದಲ ಆಟಗಾರ ಎನಿಸಿಕೊಳ್ಳಲಿದ್ದಾರೆ. 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಆಡಿದ್ದರು. ಸೌತ್ ಆಫ್ರಿಕಾ ವಿರುದ್ಧ ಹಾಫ್ ಸೆಂಚುರಿ ಸಿಡಿಸಿದ್ದ ರೋಹಿತ್, ಫೈನಲ್ನಲ್ಲಿ 16 ಬಾಲ್ನಲ್ಲಿ 30 ರನ್ ಸಿಡಿಸಿ ತಂಡಕ್ಕೆ ಪ್ರಶಸ್ತಿ ಗೆದ್ದುಕೊಡಲು ಕೈಜೋಡಿಸಿದ್ದರು. ಈಗ 17 ವರ್ಷಗಳ ನಂತರ ಭಾರತ ತಂಡಕ್ಕೆ ಟ್ರೋಫಿ ಗೆದ್ದುಕೊಡಲು ಹೊರಟಿದ್ದಾರೆ.

ಟಿ20 ಕ್ರಿಕೆಟ್‌ನಲ್ಲಿ 200 ಸಿಕ್ಸರ್

ತಮ್ಮ ಸಿಡಿಲಬ್ಬರದ ಬ್ಯಾಟಿಂಗ್‌ನಿಂದಾಗಿಯೇ ಹಿಟ್‌ಮ್ಯಾನ್ ಎಂದು ಗುರುತಿಸಿಕೊಂಡಿರುವ ರೋಹಿತ್, 151 ಟಿ20 ಪಂದ್ಯಗಳಿಂದ 190 ಸಿಕ್ಸರ್ ಸಿಡಿಸಿದ್ದಾರೆ. ಈ ವಿಶ್ವಕಪ್ನಲ್ಲಿ 10 ಸಿಕ್ಸರ್ ಹೊಡೆದ್ರೆ, ಟಿ20 ಕ್ರಿಕೆಟ್ನಲ್ಲಿ 200 ಸಿಕ್ಸರ್ ಸಿಡಿಸಿದ ಮೊದಲ ಬ್ಯಾಟರ್ ಎಂಬ ದಾಖಲೆ ಬರೆಯಲಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್

ಎಲ್ಲಾ ಮಾದರಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರೋಹಿತ್ 472 ಪಂದ್ಯಗಳನ್ನಾಡಿದ್ದು, 597 ಸಿಕ್ಸರ್ ಸಿಡಿಸಿದ್ದಾರೆ. ಟಿ20 ವಿಶ್ವಕಪ್ನಲ್ಲಿ ಮೂರು ಸಿಕ್ಸರ್ ಬಾರಿಸಿದರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 600 ಸಿಕ್ಸರ್ ಸಿಡಿಸಿದ ಮೊದಲ ಆಟಗಾರರಾಗಲಿದ್ದಾರೆ.

ನಾಯಕನಾಗಿ ಅತಿ ಹೆಚ್ಚು ಗೆಲುವು

ಟಿ20 ಕ್ರಿಕೆಟ್‌ನಲ್ಲಿ 54 ಪಂದ್ಯಗಳಲ್ಲಿ ಟೀಂ ಇಂಡಿಯಾವನ್ನು ಮುನ್ನಡೆಸಿರುವ ರೋಹಿತ್,  41ರಲ್ಲಿ ಗೆಲುವು ಸಾಧಿಸಿ, ಧೋನಿ ಜೊತೆಗೆ ಅತಿ ಹೆಚ್ಚು ಪಂದ್ಯ ಗೆದ್ದ ನಾಯಕ ಎಂಬ ಜಂಟಿ ದಾಖಲೆ ಹೊಂದಿದ್ದಾರೆ. ವಿಶ್ವಕಪ್ನಲ್ಲಿ ಒಂದು ಪಂದ್ಯದಲ್ಲಿ ಗೆಲುವು ಸಾಧಿಸುತ್ತಿದ್ದಂತೆಯೇ ಭಾರತ ಪರ ಅತಿ ಹೆಚ್ಚು ಟಿ20 ಪಂದ್ಯ ಗೆದ್ದ ನಾಯಕ ಎಂಬ ದಾಖಲೆಯನ್ನು ಬರೆಯಲಿದ್ದಾರೆ. 

ಪಾಕ್‌ ನಾಯಕ ಬಾಬರ್ ಅಜಂ 46 ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದು, ಒಂದು ವೇಳೆ ಪಾಕಿಸ್ತಾನ ಸೂಪರ್-8ಗೆ ಅರ್ಹತೆ ಪಡೆಯದಿದ್ದರೆ ಆಗ ಈ ದಾಖಲೆ ಮುರಿಯುವ ಅವಕಾಶವನ್ನು ರೋಹಿತ್  ಪಡೆಯಲಿದ್ದಾರೆ.

ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ

ಟಿ20 ಮಾದರಿ ಕ್ರಿಕೆಟ್‌ನಲ್ಲಿ ರೋಹಿತ್ 5 ಶತಕ ಸಿಡಿಸಿ, ಆಸ್ಟ್ರೇಲಿಯಾದ ಗ್ಲೆನ್ ಮ್ಯಾಕ್ಸ್‌ವೆಲ್ ಜೊತೆಗೆ ಜಂಟಿ ಅಗ್ರಸ್ಥಾನ ಅಲಂಕರಿಸಲಿದ್ದಾರೆ. ವಿಶ್ವಕಪ್ನಲ್ಲಿ ಶತಕ ಸಿಡಿಸಿ, ಮ್ಯಾಕ್ಸ್‌ವೆಲ್‌ಗೆ ಮೂರಂಕಿ ತಲುಪಲು ಸಾಧ್ಯವಾಗದಿದ್ದರೆ, ಆಗ ರೋಹಿತ್ ಚುಟುಕು ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ದಾಖಲೆ ಬರೆಯಲಿದ್ದಾರೆ. ಈ ಐದು ದಾಖಲೆಗಳಲ್ಲದೆ ರೋಹಿತ್ಗೆ ಇನ್ನೂ ಹಲವು ದಾಖಲೆ ಬರೆಯುವ ಅವಕಾಶವಿದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios