ಬಲಿಷ್ಠರಿಗೆ ದುರ್ಬಲರು ಕೊಟ್ಟಿದ್ದಾರೆ ಬಿಗ್ ಶಾಕ್..! 4 ಸ್ಟ್ರಾಂಗ್ ಟೀಮ್‌ಗಳು ಗ್ರೂಪ್ ಹಂತದಲ್ಲೇ ಔಟ್?
ಈ ಸಲದ ಟಿ20 ವಿಶ್ವಕಪ್‌ನಲ್ಲಿ ಆಡಲು 20 ತಂಡಗಳಿಗೆ ಅವಕಾಶ ಮಾಡಿಕೊಟ್ಟಿದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಡಮ್ಮಿ ಟೀಮ್‌ಗಳನ್ನ ಆಡಿಸುತ್ತಿರುವುದೇಕೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದರಲ್ಲಿ ಬಹುತೇಕ ತಂಡಗಳು ಮೊದಲ ಸುತ್ತಿನಿಂದಲೇ ನಿರ್ಗಮಿಸಲಿವೆ. ಈ ತಂಡಗಳಿಗೆ ಆಡಲು ಅವಕಾಶ ಕೊಟ್ಟು ಐಸಿಸಿ ತನ್ನ ಸಮಯ ವ್ಯರ್ಥ ಮಾಡುತ್ತಿದೆ ಎಂದು ಮಾಜಿ ಕ್ರಿಕೆಟರ್ಸ್ ಹೇಳಿದ್ದರು.
ಬೆಂಗಳೂರು: ಟಿ20 ವಿಶ್ವಕಪ್‌ನಲ್ಲಿ ಇನ್ನು 24 ಪಂದ್ಯಗಳಷ್ಟೇ ನಡೆದಿರೋದು. ಬಹುತೇಕ ತಂಡಗಳು ಇನ್ನು ಎರಡು ಮ್ಯಾಚ್ ಆಡಿವೆ ಅಷ್ಟೆ. ಆಗ್ಲೇ ನಾಲ್ಕು ಬಲಿಷ್ಠ ತಂಡಗಳು ಮೊದಲ ಸುತ್ತಿನಿಂದಲೇ ಹೊರಬೀಳುವ ಭೀತಿಯಲ್ಲಿವೆ. ಸ್ಟ್ರಾಂಗ್ ಟೀಮ್‌ಗೆ ಟಕ್ಕರ್ ಕೊಟ್ಟಿರೋದು ಮಾತ್ರ ವೀಕ್ ಟೀಮ್ಸ್.
ಬಲಿಷ್ಠರಿಗೆ ದುರ್ಬಲರು ಕೊಟ್ಟಿದ್ದಾರೆ ಬಿಗ್ ಶಾಕ್..!
ಈ ಸಲದ ಟಿ20 ವಿಶ್ವಕಪ್‌ನಲ್ಲಿ ಆಡಲು 20 ತಂಡಗಳಿಗೆ ಅವಕಾಶ ಮಾಡಿಕೊಟ್ಟಿದಕ್ಕೆ ಭಾರಿ ಟೀಕೆಗಳು ವ್ಯಕ್ತವಾಗಿದ್ದವು. ಡಮ್ಮಿ ಟೀಮ್‌ಗಳನ್ನ ಆಡಿಸುತ್ತಿರುವುದೇಕೆ ಅನ್ನೋ ಮಾತುಗಳು ಕೇಳಿ ಬಂದಿದ್ದವು. ಇದರಲ್ಲಿ ಬಹುತೇಕ ತಂಡಗಳು ಮೊದಲ ಸುತ್ತಿನಿಂದಲೇ ನಿರ್ಗಮಿಸಲಿವೆ. ಈ ತಂಡಗಳಿಗೆ ಆಡಲು ಅವಕಾಶ ಕೊಟ್ಟು ಐಸಿಸಿ ತನ್ನ ಸಮಯ ವ್ಯರ್ಥ ಮಾಡುತ್ತಿದೆ ಎಂದು ಮಾಜಿ ಕ್ರಿಕೆಟರ್ಸ್ ಹೇಳಿದ್ದರು. ಆದ್ರೆ ಈಗ ಅದೇ ಕ್ರಿಕೆಟ್ ಶಿಶುಗಳು, ಭರ್ಜರಿ ಪ್ರದರ್ಶನ ನೀಡಿ ದಿಗ್ಗಜ ತಂಡಗಳಿಗೆ ಶಾಕ್ ನೀಡಿವೆ. ಈಗ ಐಸಿಸಿ ಟಿ20 ಶ್ರೇಯಾಂಕದಲ್ಲಿ ಟಾಪ್-10ನಲ್ಲಿರುವ ತಂಡಗಳೇ ಲೀಗ್ನಿಂದ ಹೊರಬೀಳುವ ಭೀತಿಯಲ್ಲಿವೆ. ಆ ಬಲಿಷ್ಠ ತಂಡಗಳಿಗೆ ಶಾಕ್ ಕೊಟ್ಟಿದ್ದು ಮಾತ್ರ ಮಾಜಿ ಕ್ರಿಕೆಟರ್ಸ್ ಹೇಳುತ್ತಿದ್ದ ದುರ್ಬಲ ತಂಡಗಳು.
T20 World Cup 2024: ಭಾರತದ ಆಟಗಾರ ಟೀಂ ಇಂಡಿಯಾ ಎದುರು ಅಬ್ಬರಿಸಲು ರೆಡಿ..!
ಪಾಕ್ ಸೂಪರ್-8 ಎಂಟ್ರಿಗೆ ಅಮೆರಿಕ ಅಡ್ಡಗಾಲು
A ಗ್ರೂಪ್ನಲ್ಲಿ ಸ್ಥಾನ ಪಡೆದಿರುವ ಪಾಕಿಸ್ತಾನ ತಂಡ ಲೀಗ್ನಿಂದಲೇ ಹೊರಬೀಳುವ ಭೀತಿಯಲ್ಲಿದೆ. ಇದಕ್ಕೆ ಕಾರಣ ದುರ್ಬಲ ಅಮೆರಿಕ ತಂಡ. ಆತಿಥೇಯ ತಂಡ ಅನ್ನೋ ಕಾರಣಕ್ಕೆ ಟಿ20 ವಿಶ್ವಕಪ್ ಆಡಲು ಅಮೆರಿಕಗೆ ಚಾನ್ಸ್ ಕೊಡಲಾಗಿದೆ ಅಂತ ಮಾಜಿ ಕ್ರಿಕೆಟರ್ಸ್ ಹೇಳಿದ್ದರು. ಆದ್ರೆ ಪಾಕಿಸ್ತಾನವನ್ನ ಸೋಲಿಸಿ, ನಾವು ಟಿ20 ವರ್ಲ್ಡ್‌ಕಪ್ ಆಡಲು ಅರ್ಹರು ಅನ್ನೋದನ್ನ ಅಮೆರಿಕನ್ನರು ಪ್ರೂವ್ ಮಾಡಿದ್ದಾರೆ. ಅಮೆರಿಕ ಹಾಗೂ ಭಾರತ ವಿರುದ್ಧ ಸೋತಿರುವ ಮಾಜಿ ಚಾಂಪಿಯನ್ಸ್ ಪಾಕಿಸ್ತಾನ ಸೂಪರ್-8ಗೆ ಎಂಟ್ರಿ ಪಡೆಯೋದೇ ಅನುಮಾನ. ಪಾಕ್‌ಗೆ ಶಾಕ್ ನೀಡಿದ್ದು ದುರ್ಬಲ ಅಮೆರಿಕ.
ಕಿವೀಸ್ ಕಿವಿ ಕಚ್ಚಿದ ಅಫ್ಘನ್ ಸ್ಪಿನ್ನರ್ಸ್
C ಗ್ರೂಪ್ನಲ್ಲಿರುವ ನ್ಯೂಜಿಲೆಂಡ್ ತಂಡ ಲೀಗ್ನಿಂದಲೇ ಹೊರಬೀಳುವ ಆತಂಕಕ್ಕೆ ಸಿಲುಕಿರುವುದಕ್ಕೆ ಕಾರಣ ಅಫ್ಘಾನಿಸ್ತಾನ. ಅಫ್ಘನ್ ತಂಡದಿಂದ 159 ರನ್ ಹೊಡೆಸಿಕೊಂಡ ನ್ಯೂಜಿಲೆಂಡ್, ಜಸ್ಟ್ 75 ರನ್ಗೆ ಆಲೌಟ್ ಆಗಿ, 84 ರನ್‌ಗಳಿಂದ ಹೀನಾಯವಾಗಿ ಸೋತಿದೆ. ಸ್ಪಿನ್ನರ್‌ಗಳ ಬಲೆಗೆ ಬಿದ್ದು ಕಿವೀಸರು ಒದ್ದಾಡಿದ್ರು. ಈಗ ನ್ಯೂಜಿಲೆಂಡ್ ರನ್‌ರೇಟ್ ಪಾತಾಳಕ್ಕೆ ಕುಸಿದಿದ್ದು, ಉಳಿದ ಮೂರು ಮ್ಯಾಚ್ ಗೆದ್ದರಷ್ಟೇ ಸೂಪರ್-8ಗೆ ಪ್ರವೇಶ ಪಡೆಯಲಿದೆ.
ಯುಎಸ್‌ಎ ಎದುರಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕೊನೆಗೂ ಒಂದು ಬದಲಾವಣೆಗೆ ಮುಂದಾದ ರೋಹಿತ್ ಪಡೆ
ಲಂಕಾ ಕೋಟೆ ಬಂದ್..!
D ಗ್ರೂಪ್ನಲ್ಲಿರುವ ಮಾಜಿ ಚಾಂಪಿಯನ್ ಶ್ರೀಲಂಕಾ ತಂಡ ಸೌತ್ ಆಫ್ರಿಕಾ ಮತ್ತು ಬಾಂಗ್ಲಾದೇಶ ವಿರುದ್ಧ ಸೋಲು ಅನುಭವಿಸಿದೆ. ಉಳಿದ ಎರಡು ಪಂದ್ಯ ಗೆದ್ದರೂ ಸೂಪರ್-8ಗೆ ಪ್ರವೇಶ ಪಡೆಯೋದಿಲ್ಲ. ಯಾಕಂದ್ರೆ ರನ್ ರೇಟ್ ಸಹ ಇಲ್ಲ. ಸದ್ಯದ ಮಟ್ಟಿಗೆ ಸೂಪರ್-8ಗೆ ಎಂಟ್ರಿ ಪಡೆಯೋ ಲಂಕೆಯ ಕೋಟೆ ಬಂದ್ ಆಗಿದೆ.
ಇಂಗ್ಲೆಂಡ್ ಸೂಪರ್-8ಗೆ ಅಡ್ಡಿಯಾದ ವರುಣ
ಹಾಲಿ ಚಾಂಪಿಯನ್ ಇಂಗ್ಲೆಂಡ್. ಆದ್ರೆ ಈ ಬಾರಿ ಮೊದಲ ಸುತ್ತಿನಲ್ಲೇ ಹೊರಬೀಳುವ ಭೀತಿಯಲ್ಲಿದೆ. B ಗ್ರೂಪ್ನಲ್ಲಿರುವ ಇಂಗ್ಲೆಂಡ್, ಆಸ್ಟ್ರೇಲಿಯಾ ವಿರುದ್ಧ ಸೋತಿದೆ. ಇನ್ನು ಇಂಗ್ಲೆಂಡ್-ಸ್ಕಾಟ್ಲೆಂಡ್ ಪಂದ್ಯ ಮಳೆಯಿಂದ ರದ್ದಾಗಿದೆ. ಪಾಯಿಂಟ್ ಟೇಬಲ್ನಲ್ಲಿ 4ನೇ ಸ್ಥಾನದಲ್ಲಿರುವ ಆಂಗ್ಲರು, ಒಮಾನ್ ಮತ್ತು ನಮಿಬಿಯಾ ವಿರುದ್ಧ ಆಡಲಿದ್ದಾರೆ. ಉಳಿದ ಎರಡು ಪಂದ್ಯ ಗೆದ್ದರೂ 5 ಅಂಕ ಗಳಿಸಲಿದೆ. ಆದ್ರೆ ಸ್ಕಾಟ್ಲೆಂಡ್ ಆಗಲೇ 5 ಅಂಕ ಗಳಿಸಿದ್ದು, ರನ್ ರೇಟ್ ಸಹ ಉತ್ತಮವಾಗಿದೆ. ಹಾಗಾಗಿ ಇಂಗ್ಲೆಂಡ್ ಸೂಪರ್-8 ಕನಸು ಬಹುತೇಕ ಭಗ್ನಗೊಂಡಂತೆಯೇ.
ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್