Asianet Suvarna News Asianet Suvarna News

T20 World Cup 2024: ಭಾರತದ ಆಟಗಾರ ಟೀಂ ಇಂಡಿಯಾ ಎದುರು ಅಬ್ಬರಿಸಲು ರೆಡಿ..!

1991 ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ್ದ ಸೌರಭ್ ನೇತ್ರವಾಲ್ಕರ್, ಮುಂಬೈ ಪರ ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ದಾರೆ. ಅಷ್ಟೇಕೆ ಭಾರತ ಪರ ಅಂಡರ್-19 ಕ್ರಿಕೆಟ್ ಸಹ ಆಡಿದ್ದಾರೆ.  2010ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಸಂದೀಪ್ ಶರ್ಮಾ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್ ಅವರ ಜೊತೆ ಅಂಡರ್-19 ವರ್ಲ್ಡ್‌ಕಪ್‌ನಲ್ಲಿ ಕಣಕ್ಕಿಳಿದಿದ್ದರು.

T20 World Cup 2024 Ind vs USA Saurabh Netravalkar eager to bowl against India kvn
Author
First Published Jun 12, 2024, 2:03 PM IST

ನ್ಯೂಯಾರ್ಕ್‌: ಇಂದಿನ ಪಂದ್ಯ ಕುತೂಹಲ ಕೆರಳಿಸಿರೋದು ಅಮೆರಿಕ ತಂಡದಲ್ಲಿ ಭಾರತೀಯರು ಇದ್ದಾರೆ ಅನ್ನೋದಕ್ಕೆ. ಭಾರತೀಯರು ಇದ್ದಿದ್ದರೆ ಪರವಾಗಿಲ್ಲ. ಭಾರತ ಪರ ಆಡಿದ್ದ ಆಟಗಾರನೊಬ್ಬ ಇಂದು ಭಾರತ ವಿರುದ್ಧವೇ ಆಡ್ತಿದ್ದಾನೆ. ಆತನೇ ಇಂದು ಭಾರತಕ್ಕೆ ಕಂಟಕವಾದ್ರೂ ಆಶ್ಚರ್ಯವಿಲ್ಲ. ಯಾಕಂದ್ರೆ ಆತ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್. 

ಅಂದು ಭಾರತ ಪರ ಅಂಡರ್-19 ವಿಶ್ವಕಪ್ ಆಡಿದ್ದ..!

ಇದೇ ರೀಸನ್‌ಗೆ ನಾವು ಹೇಳಿದ್ದು. ಇಂದು ನ್ಯೂಯಾರ್ಕ್ನಲ್ಲಿ ಇಂಡಿಯನ್ಸ್ ವರ್ಸಸ್ ಇಂಡಿಯನ್ಸ್ ಅಂತ. ಅಮೆರಿಕ ಟೀಮ್‌ನಲ್ಲಿ ಅರ್ಧ ಡಜನ್ ಆಟಗಾರರು ಭಾರತೀಯ ಮೂಲದವರಿದ್ದಾರೆ. ಆದ್ರೆ ಸ್ಪೆಷಲ್ ಆಟಗಾರ ಅಂದ್ರೆ ಅದು ಸೌರಭ್ ನೇತ್ರವಾಲ್ಕರ್. ಮೂಲತಃ ಮುಂಬೈನವರಾದ ಸೌರಭ್, ಎಡಗೈ ವೇಗದ ಬೌಲರ್. ಈತ ಅಮೆರಿಕ ಪರ ಆಡುವುದಕ್ಕೂ ಮುನ್ನ ಮುಂಬೈ ಮತ್ತು ಭಾರತ ಪರ ಆಡಿದ್ದಾರೆ ಅನ್ನೋದೇ ವಿಶೇಷ.

T20 World Cup 2024 ಇಂದು ಇಂಡಿಯಾ vs ಮಿನಿ ಇಂಡಿಯಾ ಕದನ!

ರಾಹುಲ್-ಮಯಾಂಕ್ ಜೊತೆ ಅಂಡರ್-19 ವಿಶ್ವಕಪ್ ಆಡಿದ್ದ!

1991 ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ್ದ ಸೌರಭ್ ನೇತ್ರವಾಲ್ಕರ್, ಮುಂಬೈ ಪರ ಡೊಮೆಸ್ಟಿಕ್ ಕ್ರಿಕೆಟ್ ಆಡಿದ್ದಾರೆ. ಅಷ್ಟೇಕೆ ಭಾರತ ಪರ ಅಂಡರ್-19 ಕ್ರಿಕೆಟ್ ಸಹ ಆಡಿದ್ದಾರೆ.  2010ರಲ್ಲಿ ಅಂಡರ್-19 ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಪರ ಆಡಿದ್ದರು. ಕೆ ಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಸಂದೀಪ್ ಶರ್ಮಾ, ಹರ್ಷಲ್ ಪಟೇಲ್, ಜಯದೇವ್ ಉನಾದ್ಕತ್ ಅವರ ಜೊತೆ ಅಂಡರ್-19 ವರ್ಲ್ಡ್‌ಕಪ್‌ನಲ್ಲಿ ಕಣಕ್ಕಿಳಿದಿದ್ದರು. ಇವರ ಜೊತೆ ಅಂಡರ್-19 ವಿಶ್ವಕಪ್ ಆಡಿದ್ದ ಆಟಗಾರರು ಈ ಸಲದ ಟಿ20 ವಿಶ್ವಕಪ್ನಲ್ಲಿ ಆಡ್ತಿಲ್ಲ. ಆದ್ರೆ ಸೌರಭ್ ಮಾತ್ರ 32ನೇ ವಯಸ್ಸಿನಲ್ಲಿ ಭಾರತ ಬಿಟ್ಟು ಅಮೆರಿಕ ಪರ ಆಡ್ತಿದ್ದಾರೆ.

ಅಂದಿನ ಪಾಕ್ ವಿರುದ್ಧದ ಸೋಲಿನ ಸೇಡನ್ನು ಇಂದು ತೀರಿಸಿಕೊಂಡ..!

ಅಂಡರ್-19 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಸೌರಭ್ ವಿಕೆಟ್ ಪಡೆದರು ಭಾರತ ಸೋತಿತ್ತು. ಆದ್ರೆ ಈಗ ಇದೇ ಸೌರಭ್, ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ವಿರುದ್ಧ ಅಮೆರಿಕ ಪರ ಆಡಿ, ಗೆಲುವಿನ ರೂವಾರಿಯಾಗಿದ್ದಾರೆ. 2 ವಿಕೆಟ್ ಪಡೆಯೋದ್ರ ಜೊತೆ ಪಂದ್ಯವನ್ನ ಟೈ ಮಾಡಿಸಿದ್ರು. ಸೂಪರ್ ಓವರ್ನಲ್ಲಿ ಸೂಪರ್ ಬೌಲಿಂಗ್ ಮಾಡಿ ಪಂದ್ಯ ಗೆಲ್ಲಿಸಿದ್ರು. ಪಾಕ್ ವಿರುದ್ಧ ಅಮೆರಿಕ ಗೆಲ್ಲಲು ಸೌರಭ್ ನೇತ್ರವಾಲ್ಕರ್ ಕಾರಣರಾದ್ರು.

ಯುಎಸ್‌ಎ ಎದುರಿನ ಪಂದ್ಯಕ್ಕೆ ಭಾರತ ಕ್ರಿಕೆಟ್ ತಂಡ ಪ್ರಕಟ; ಕೊನೆಗೂ ಒಂದು ಬದಲಾವಣೆಗೆ ಮುಂದಾದ ರೋಹಿತ್ ಪಡೆ

2015ರಲ್ಲಿ ಅಮೆರಿಕಗೆ ಶಿಫ್ಟ್, ಅಮೆರಿಕ ನಾಯಕನೂ ಆಗಿದ್ದ..!

ಸಾಪ್ಟ್‌ ವೇರ್ ಇಂಜಿನಿಯರ್ ಆಗಿರುವ ಸೌರಭ್ ನೇತ್ರವಾಲ್ಕರ್, 2015ರಲ್ಲಿ ಅಮೆರಿಕಗೆ ಶಿಫ್ಟ್ ಆಗಿ ಯುಎಸ್ ಪೌರತ್ವ ಪಡೆದುಕೊಂಡರು. ಕೆಲ ಸಮಯ ಅಮೆರಿಕ ಕ್ರಿಕೆಟ್ ತಂಡದ ನಾಯಕರೂ ಆಗಿದ್ದರು. ಸದ್ಯ ಟಿ20 ವಿಶ್ವಕಪ್ ತಂಡದಲ್ಲಿ ಅಮೆರಿಕ ಪರ ಟ್ರಂಪ್ ಕಾರ್ಡ್ ಬೌಲರ್ ಆಗಿದ್ದಾರೆ.

ಭಾರತವನ್ನೇ ಸೋಲಿಸಲು ಪಣ ತೊಟ್ಟ ಸೌರಭ್

ಸೌರಭ್ ನೇತ್ರವಾಲ್ಕರ್ ಲೆಫ್ಟ್ ಆರ್ಮ್ ಫಾಸ್ಟ್ ಬೌಲರ್. ಮೊದಲೇ ಭಾರತೀಯರು ಎಡಗೈ ವೇಗಿಗಳು ಎದುರು ಆಡಲು ಪರದಾಡುತ್ತಾರೆ. ಇಂದು ಇದೇ ಭಾರತದ ಸೌರಭ್, ಭಾರತೀಯ ಬ್ಯಾಟರ್ಗಳಿಗೆ ಕಂಟಕವಾದ್ರೂ ಆಶ್ಚರ್ಯವಿಲ್ಲ. ಯಾಕಂದರೆ ಈ ಮುಂಬೈ ಆಟಗಾರ ಅದ್ಭುತ ಫಾರ್ಮ್ನಲ್ಲಿದ್ದಾನೆ. 29 ಟಿ20 ಪಂದ್ಯಗಳಿಂದ 29 ವಿಕೆಟ್ ಪಡೆದಿದ್ದಾರೆ. 6.62ರ ಎಕಾನಮಿಯಲ್ಲಿ ರನ್ ನೀಡಿದ್ದಾರೆ ಅಂದ್ರೆ ಕರಾರುವಕ್ ಬೌಲಿಂಗ್‌ಗೆ ಹೆಸರುವಾಸಿ. ಒಟ್ನಲ್ಲಿ ಅಂದು ಬ್ಲ್ಯೂ ಜರ್ಸಿ ತೊಟ್ಟು ಭಾರತ ಗೆಲ್ಲಲಿ ಎಂದು ಹೋರಾಡಿದ್ದ ಆಟಗಾರನೊಬ್ಬ.. ಇಂದು ಅದೇ ಬ್ಲ್ಯೂ ಜೆರ್ಸಿ ವಿರುದ್ಧ ಭಾರತ ಸೋಲಲಿ ಅಂತ ಇಂದು ಹೋರಾಡುತ್ತಾನೆ. ಕ್ರಿಕೆಟ್ ದುನಿಯಾದಲ್ಲಿ ಏನ್ ಬೇಕಾದ್ರೂ ಆಗಬಹುದು. ಯಾರು ಬೇಕಾದ್ರೂ ಎದುರಾಳಿ ಆಗಬಹುದು ಅನ್ನೋದನ್ನ ಇನ್ನೊಂದು ಎಕ್ಸಾಂಪಲ್ ಅಂದ್ರೆ ಇದೇ ನೋಡಿ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣ ನ್ಯೂಸ್

Latest Videos
Follow Us:
Download App:
  • android
  • ios