T20 World Cup 2024: ವಿಶ್ವಕಪ್ ಫೈನಲ್‌ನಲ್ಲಿ ಟಾಸ್ ಗೆದ್ದ ಭಾರತ, ಬ್ಯಾಟಿಂಗ್ ಆಯ್ಕೆ
ಅಮೆರಿಕ ಹಾಗೂ ವೆಸ್ಟ್ ಇಂಡೀಸ್ ಆತಿಥ್ಯದಲ್ಲಿ ನಡೆದ ಟಿ20 ವಿಶ್ವಕಪ್‌ನಲ್ಲಿ ಇಂದು ಫೈನಲ್ ಮ್ಯಾಚ್. 32 ವರ್ಷಗಳ ಬಳಿಕ ಐಸಿಸಿ ಟೂರ್ನಿಯ ಫೈನಲ್‌ಗೇರಿರುವ ದಕ್ಷಿಣ ಆಫ್ರಿಕಾ ಆಹಘು 2007ರ ಬಳಿಕ ಟಿ20 ವಿಶ್ವಕಪ್ ಗೆಲ್ಲುವ ಗುರಿಯಲ್ಲಿರುವ ಭಾರತ ತಂಡ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ಕಾದಾಡಲಿವೆ.
ಬಾರ್ಬಡಾಸ್ (ಜೂ.29): 2013ರ ಬಳಿಕ ಮೊದಲ ಐಸಿಸಿ ಟ್ರೋಫಿ ಹಾಗೂ 2007ರ ಬಳಿಕ ಮೊದಲ ಬಾರಿಗೆ ಟಿ20 ವಿಶ್ವಕಪ್ ಗೆಲ್ಲುವ ಇರಾದೆಯಲ್ಲಿರುವ ಟೀಮ್ ಇಂಡಿಯಾ, ಟಿ20 ವಿಶ್ವಕಪ್‌ನ ಫೈನಲ್ ಪಂದ್ಯದಲ್ಲಿ ಪ್ರಮುಖ ಟಾಸ್ ಗೆಲುವು ಕಂಡಿದೆ. ನಾಯಕ ರೋಹಿತ್ ಶರ್ಮ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದಾರೆ. ಫೈನಲ್ ಪಂದ್ಯಕ್ಕಾಗಿ ಎರಡೂ ತಂಡಗಳು ತನ್ನ ಟೀಮ್‌ನಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್. ದಕ್ಷಿಣ ಆಫ್ರಿಕಾ ಪಾಲಿಗೆ ಅನುಭವಿ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಸರಿಯಾದ ಸಮಯದಲ್ಲಿ ಫಾರ್ಮ್‌ಗೆ ಬಂದಿರುವುದು ನಿರಾಳ ಮೂಡಿಸಿದೆ. ಆರಂಭಿಕ ಪಂದ್ಯಗಳಲ್ಲಿ ಫಾರ್ಮ್‌ನಲ್ಲಿ ಹಿನ್ನಡೆ ಕಂಡಿದ್ದ ಡಿ ಕಾಕ್ ಸರಿಯಾದ ಸಮಯದಲ್ಲಿ ಲಯ ಕಂಡುಕೊಂಡಿದ್ದಾರೆ. ಟೀಮ್ ಇಂಡಿಯಾ ಪಾಲಿಗೆ ವಿರಾಟ್ ಕೊಹ್ಲಿ ಫಾರ್ಮ್ ಕಳವಳಕಾರಿಯಾಗಿದೆ. ಈ ವರೆಗೂ ಟೂರ್ನಿಯಲ್ಲಿ ಕೊಹ್ಲಿ 75 ರನ್ ಮಾತ್ರವೇ ಬಾರಿಸಿದ್ದಾರೆ.
ಪಿಚ್ ಅದ್ಭುತವಾಗಿ ಕಾಣುತ್ತಿದೆ. ಅದಕ್ಕಾಗಿ ಮೊದಲು ಬ್ಯಾಟಿಂಗ್ ಮಾಡುವ ನಿರ್ಧಾರ ಮಾಡಿದ್ದೇವೆ. ಈಗಾಗಲೇ ಈ ಸ್ಟೇಡಿಯಂನಲ್ಲಿ ಒಂದು ಪಂದ್ಯವಾಡಿದ್ದೇವೆ. ಇಲ್ಲಿ ಬಾರಿಸಿದ್ದ ಮೊತ್ತ ಕೂಡ ಉತ್ತಮವಾಗಿತ್ತು. ವೈಯಕ್ತಿಕವಾಗಿ ನೀಡಿರುವ ಜವಾಬ್ದಾರಿಯನ್ನು ನಿಭಾಯಿಸಬೇಕಿದೆ. ನನಗೆ ಗೊತ್ತು ಇದು ಬಹಳ ದೊಡ್ಡ ಸಂಭ್ರಮ. ಆದರೆ, ಆದಷ್ಟು ತಾಳ್ಮೆಯಿಂದ ಆಡಬೇಕಾಗಿರುವುದು ಅಷ್ಟೇ ಮುಖ್ಯ. ನಮ್ಮ ಪಾಲಿಗೆ ಒಂದು ಒಳ್ಳೆಯ ತಂಡದೊಂದಿಗೆ ಆಡುತ್ತಿರುವ ಮತ್ತೊಂದು ಅಂತಾರಾಷ್ಟ್ರೀಯ ಪಂದ್ಯ ಇದಷ್ಟೆ. ನಮ್ಮಂತೆ ದಕ್ಷಿಣ ಆಫ್ರಿಕಾ ತಂಡ ಕೂಡ ಉತ್ತಮ ಕ್ರಿಕೆಟ್ ಆಡಿ ಇಲ್ಲಿಯವರೆಗೂ ಬಂದಿದೆ. ಎರಡು ಉತ್ತಮ ತಂಡಗಳ ನಡುವಿನ ಮುಖಾಮುಖಿ ಇದಾಗಿರಲಿದೆ. ನಾವು ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ರೋಹಿತ್ ಶರ್ಮ ಟಾಸ್ ವೇಳೆ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾ ಪ್ಲೇಯಿಂಗ್ ಇಲೆವೆನ್: ಕ್ವಿಂಟನ್ ಡಿ ಕಾಕ್ (ವಿ.ಕೀ), ರೀಜಾ ಹೆಂಡ್ರಿಕ್ಸ್, ಐಡೆನ್ ಮಾರ್ಕ್ರಾಮ್ (ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಮಾರ್ಕೊ ಜಾನ್ಸೆನ್, ಕೇಶವ್ ಮಹಾರಾಜ್, ಕಗಿಸೊ ರಬಾಡಾ, ಅನ್ರಿಚ್ ನಾರ್ಟ್ಜೆ, ತಬ್ರೈಜ್ ಶಮ್ಸಿ
ವಿರಾಟ್ ಕೊಹ್ಲಿಯ ಅತ್ಯಂತ ಕೆಟ್ಟ ಐಸಿಸಿ ಟೂರ್ನಿ ಆಗಲಿದ್ಯಾ ಈ ಬಾರಿಯ ಟಿ20 ವಿಶ್ವಕಪ್?
ಟೀಮ್ ಇಂಡಿಯಾ ಪ್ಲೇಯಿಂಗ್ ಇಲೆವೆನ್: ರೋಹಿತ್ ಶರ್ಮಾ (ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್ (ವಿ.ಕೀ), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ, ಶಿವಂ ದುಬೆ, ಅಕ್ಷರ್ ಪಟೇಲ್, ಅರ್ಷದೀಪ್ ಸಿಂಗ್, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ.
10 ವರ್ಷ, 5 ಫೈನಲ್ ಸೋಲು: ನನಸಾಗುತ್ತಾ ಟೀಂ ಇಂಡಿಯಾ ದಶಕದ ಕನಸು?