Asianet Suvarna News Asianet Suvarna News

10 ವರ್ಷ, 5 ಫೈನಲ್ ಸೋಲು: ನನಸಾಗುತ್ತಾ ಟೀಂ ಇಂಡಿಯಾ ದಶಕದ ಕನಸು?

ಐಸಿಸಿ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಕಳೆದ 10 ವರ್ಷಗಳಲ್ಲಿ 5 ಬಾರಿ ಫೈನಲ್‌ನಲ್ಲಿ ಎಡವಿದೆ. ಸತತವಾಗಿ ಎದುರಾಗುತ್ತಿರುವ ಸೋಲನ್ನು ಈವರೆಗೂ ಆಟಗಾರರು, ಅಭಿಮಾನಿಗಳು ಅರಗಿಸಿಕೊಂಡಿದ್ದು, ಈ ಬಾರಿಯಾದರೂ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ.

10 years 5 ICC Tournament finals Team India eyes on ICC Trophy after a decade kvn
Author
First Published Jun 29, 2024, 5:03 PM IST

ಬಾರ್ಬಡಾಸ್: 2024ರ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಪ್ರಶಸ್ತಿಗಾಗಿಂದು ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಡಲಿವೆ. ಕಳೆದೊಂದು ದಶಕದಿಂದ ಐಸಿಸಿ ಟ್ರೋಫಿ ಬರ ಎದುರಿಸುತ್ತಿರುವ ಭಾರತ ಶತಾಯಗತಾಯ ಕಪ್ ಗೆಲ್ಲಲು ಛಲದೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.

ಐಸಿಸಿ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಕಳೆದ 10 ವರ್ಷಗಳಲ್ಲಿ 5 ಬಾರಿ ಫೈನಲ್‌ನಲ್ಲಿ ಎಡವಿದೆ. ಸತತವಾಗಿ ಎದುರಾಗುತ್ತಿರುವ ಸೋಲನ್ನು ಈವರೆಗೂ ಆಟಗಾರರು, ಅಭಿಮಾನಿಗಳು ಅರಗಿಸಿಕೊಂಡಿದ್ದು, ಈ ಬಾರಿಯಾದರೂ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ.

2013ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದಿದ್ದ ಭಾರತ, ಬಳಿಕ 2014ರಲ್ಲಿ ಟಿ20 ವಿಶ್ವಕಪ್ ಫೈನಲ್, 2017ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್, 2021 ಹಾಗೂ 2023ರಲ್ಲಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್ ಫೈನಲ್, 2023ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಪರಾಭವಗೊಂಡಿತ್ತು.

ವಿಶ್ವಕಪ್ ಟ್ರೋಫಿ ಗೆಲ್ಲಲು ಭಾರತ ರೆಡಿ; ದಕ್ಷಿಣ ಆಫ್ರಿಕಾ ಎದುರಿನ ಫೈನಲ್ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ ಪ್ರಕಟ..!

12 ತಿಂಗಳಲ್ಲಿ 3ನೇ ಐಸಿಸಿ ಫೈನಲ್ ಆಡಲಿರುವ ಭಾರತ

ಟೀಂ ಇಂಡಿಯಾ 12 ತಿಂಗಳಲ್ಲಿ 3ನೇ ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಆಡಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಬಳಿಕ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್ ಫೈನಲ್‌ನಲ್ಲೂ ಭಾರತ ತಂಡ ಆಸೀಸ್ ವಿರುದ್ಧ ಪರಾಭವಗೊಂಡು ರನ್ನರ್-ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈಗ 3ನೇ ಬಾರಿ ಅದೃಷ್ಟ ಪರೀಕ್ಷೆಗಿಳಿಯಲಿದೆ.

ವಿಶ್ವಕಪ್‌ನ 2 ಶ್ರೇಷ್ಠ ಟೀಂ ನಡುವೆ ಫೈನಲ್!

ಭಾರತ ಹಾಗೂ ದಕ್ಷಿಣ ಆಫ್ರಿಕಾ ಈ ವಿಶ್ವಕಪ್‌ನ ಶ್ರೇಷ್ಠ ತಂಡಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಎರಡೂ ತಂಡಗಳು ಅಜೇಯವಾಗಿ ಫೈನಲ್ ಗೇರಿವೆ. ಎರಡೂ ತಂಡಗಳು ಗುಂಪು, ಸೂಪರ್-8 ಹಂತದಲ್ಲಿ ತಾವಿದ್ದ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದವು. ದ.ಆಫ್ರಿಕಾ ಒಟ್ಟು 8 ಜಯದೊಂದಿಗೆ ಫೈನಲ್‌ಗೇರಿದರೆ, ಕೆನಡಾ ವಿರುದಟಛಿ ಪಂದ್ಯ ರದ್ದಾದ ಕಾರಣ 7 ಜಯದೊಂದಿಗೆ ಭಾರತ ಫೈನಲ್ ಪ್ರವೇಶಿಸಿದೆ. ಫೈನಲ್‌ನಲ್ಲಿ ಯಾರೇ ಗೆದ್ದರೂ, ಅಜೇಯವಾಗಿ ಟಿ20 ವಿಶ್ವಕಪ್ ಟ್ರೋಫಿ ಗೆದ್ದ ಮೊದಲ ತಂಡ ಎನಿಸಲಿದೆ. 

T20 World Cup 2024: ಭಾರತಕ್ಕೆ ಈ ಫೈನಲ್‌ ಅತ್ಯಂತ ಮಹತ್ವದ್ದು ಯಾಕೆ ಗೊತ್ತಾ?

ಕಠಿಣ ಎದುರಾಳಿಗಳನ್ನು ಸೋಲಿಸಿ ಭಾರತ ಫೈನಲ್‌ಗೆ!

ಎರಡೂ ತಂಡಗಳ ಫೈನಲ್‌ ಹಾದಿಯನ್ನು ಗಮನಿಸಿದಾಗ, ಭಾರತ ಕಠಿಣ ಎದುರಾಳಿಗಳನ್ನು ಸೋಲಿಸಿ ಪ್ರಶಸ್ತಿ ಸುತ್ತಿಗೇರಿರುವುದು ಸ್ಪಷ್ಟವಾಗುತ್ತದೆ. ಗುಂಪು ಹಂತದಲ್ಲಿ ಬದ್ಧವೈರಿ ಪಾಕಿಸ್ತಾನ, ಸೂಪರ್‌-8ನಲ್ಲಿ ಮಾಜಿ ಚಾಂಪಿಯನ್‌ ಆಸ್ಟ್ರೇಲಿಯಾ, ಸೆಮಿಫೈನಲ್‌ನಲ್ಲಿ ಹಾಲಿ ಚಾಂಪಿಯನ್‌ ಇಂಗ್ಲೆಂಡನ್ನು ಭಾರತ ಮಣಿಸಿತು.

ಮತ್ತೊಂದೆಡೆ ದ.ಆಫ್ರಿಕಾಕ್ಕೆ ಗುಂಪು ಹಂತದಲ್ಲಿ ಹೇಳಿಕೊಳ್ಳುವಷ್ಟು ಬಲಾಢ್ಯ ತಂಡ ಎದುರಾಗಲಿಲ್ಲ. ಅದರಲ್ಲೂ ನೇಪಾಳ ವಿರುದ್ಧ ಹರಿಣ ಪಡೆ ಸೋಲಿನ ದವಡೆಯಿಂದ ಪಾರಾಯಿತು. ಇನ್ನು, ಸೂಪರ್‌-8ನಲ್ಲಿ ಇಂಗ್ಲೆಂಡ್‌, 2 ಬಾರಿ ಚಾಂಪಿಯನ್‌ ವಿಂಡೀಸ್‌ ವಿರುದ್ಧ ಗೆದ್ದ ದ.ಆಫ್ರಿಕಾಕ್ಕೆ ಸೆಮೀಸ್‌ನಲ್ಲಿ ಅಫ್ಘಾನಿಸ್ತಾನದಿಂದ ಪ್ರಬಲ ಪೈಪೋಟಿ ಎದುರಾಗಲಿಲ್ಲ.
 

Latest Videos
Follow Us:
Download App:
  • android
  • ios