T20 World Cup 2024 Final: ಟಿ20 ವಿಶ್ವಕಪ್‌ಗೆ ಮಾಲೀಕ ಯಾರು..?

ಟ್ರೋಫಿ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿರಿಸಿದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್‌ನಲ್ಲಿ 3ನೇ ಬಾರಿ ಫೈನಲ್‌ಗೇರಲು ಯಶಸ್ವಿಯಾಗಿದೆ. 2007ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿದೆ.

T20 World Cup 2024 Final Rohit Sharma led Team India ready to take on South Africa Challenge kvn

ಬ್ರಿಡ್ಜ್‌ಟೌನ್(ಬಾರ್ಬಡೊಸ್): ಒಂದು ತಿಂಗಳ ಕಾಲ ಕ್ರಿಕೆಟ್ ಅಭಿಮಾನಿಗಳಿಗೆ ರೋಚಕ ಕ್ಷಣಗಳನ್ನು ಉಣಬಡಿಸಿ, ಥ್ರಿಲ್ಲರ್‌ಗಳ ಮೂಲಕ ತುದಿಗಾಲಲ್ಲಿ ನಿಲ್ಲಿಸಿದ್ದ 9ನೇ ಆವೃತ್ತಿ ಐಸಿಸಿ ಟಿ20 ವಿಶ್ವಕಪ್ ನಿರ್ಣಾಯಕ ಘಟ್ಟ ತಲುಪಿದೆ. ಶನಿವಾರ ಬಾರ್ಬಡೊಸ್‌ನಲ್ಲಿ ಫೈನಲ್ ಪಂದ್ಯ ನಡೆಯಲಿದ್ದು, ಬಹುನಿರೀಕ್ಷಿತ ಟ್ರೋಫಿಗಾಗಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಪರಸ್ಪರ ಸೆಣಸಾಡಲಿವೆ.

ಟ್ರೋಫಿ ಗೆಲ್ಲುವ ಫೇವರಿಟ್ ಎಂದೇ ಕರೆಸಿಕೊಂಡು ಟೂರ್ನಿಗೆ ಕಾಲಿರಿಸಿದ್ದ ಟೀಂ ಇಂಡಿಯಾ, ಟಿ20 ವಿಶ್ವಕಪ್‌ನಲ್ಲಿ 3ನೇ ಬಾರಿ ಫೈನಲ್‌ಗೇರಲು ಯಶಸ್ವಿಯಾಗಿದೆ. 2007ರ ಚೊಚ್ಚಲ ಆವೃತ್ತಿಯಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ್ದ ಟೀಂ ಇಂಡಿಯಾ, ಬರೋಬ್ಬರಿ 17 ವರ್ಷಗಳ ಬಳಿಕ ಮತ್ತೊಮ್ಮೆ ಟ್ರೋಫಿ ಎತ್ತಿಹಿಡಿಯಲು ಕಾಯುತ್ತಿದೆ. ಅತ್ತ ‘ಚೋಕರ್ಸ್’ ಅಪಖ್ಯಾತಿಯ ಹರಿಣ ಪಡೆ ಐಸಿಸಿ ವಿಶ್ವಕಪ್(ಏಕದಿನ, ಟಿ20)ಗಳಲ್ಲಿ ಇದೇ ಮೊದಲ ಬಾರಿ ಫೈನಲ್ ಪ್ರವೇಶಿಸಿದ್ದು, ಟ್ರೋಫಿ ಗೆಲ್ಲಲು ತನ್ನೆಲ್ಲಾ ಅಸ್ತ್ರ ಪ್ರಯೋಗಿಸಲಿದೆ.

 'ನಾವು ಸೆಮೀಸ್‌ ಸೋತಿದ್ದೇ ಹೀಗಾಗಿ': ಭಾರತ ಎದುರಿನ ಸೋಲಿಗೆ ಕಾರಣ ಬಿಚ್ಚಿಟ್ಟ ಇಂಗ್ಲೆಂಡ್ ನಾಯಕ ಜೋಸ್ ಬಟ್ಲರ್..!

ಭಾರತವೇ ಫೇವರಿಟ್: ಟೂರ್ನಿಯಲ್ಲಿನ ಪ್ರದರ್ಶನ ನೋಡಿದರೆ ಭಾರತವೇ ಟ್ರೋಫಿ ಗೆಲ್ಲುವ ನೆಚ್ಚಿನ ತಂಡ. ಕಳೆದ ಬಾರಿ ಏಕದಿನ ವಿಶ್ವಕಪ್‌ನಲ್ಲಿ ಅಜೇಯವಾಗಿ ಫೈನಲ್‌ಗೇರಿದ್ದ ತಂಡ, ಈ ಸಲವೂ ಒಂದೂ ಪಂದ್ಯ ಸೋಲದೆ ಪ್ರಶಸ್ತಿ ಸುತ್ತಿಗೇರಿದೆ. ಒಂದಿಬ್ಬರ ಆಟಕ್ಕೆ ಜೋತು ಬೀಳದೆ ತಂಡವಾಗಿ ಆಡುತ್ತಿರುವ ಭಾರತ, ಫೈನಲ್‌ನಲ್ಲಿ ಎಡವದಂತೆ ನೋಡಬೇಕಿದೆ. ಟೂರ್ನಿಯುದ್ದಕ್ಕೂ ವಿಫಲವಾಗಿರುವ
ವಿರಾಟ್ ಕೊಹ್ಲಿ ತಮ್ಮೆಲ್ಲಾ ಆಟವನ್ನು ಫೈನಲ್‌ಗೇ ಮೀಸಲಿರಿಸಿರುವಂತೆ ತೋರುತ್ತಿದ್ದು, ನಿರ್ಣಾಯಕ ಪಂದ್ಯದಲ್ಲಿ ತಂಡದ ಕೈ ಹಿಡಿಯಬೇಕಿದೆ. ರೋಹಿತ್ ಶರ್ಮಾ ಅಮೋಘ ಆಟ ತಂಡದ ಪ್ಲಸ್ ಪಾಯಿಂಟ್. ಸೂರ್ಯಕುಮಾರ್, ರಿಷಭ್ ಪಂತ್ ಮಹತ್ವದ ಪಂದ್ಯದಲ್ಲಿ ಜವಾಬ್ದಾರಿ ಅರಿತು ಆಡಬೇಕಿದೆ. ಪಾಂಡ್ಯ ಹಾಗೂ ಅಕ್ಷರ್ ಆಲ್ರೌಂಡ್ ಪ್ರದರ್ಶನ ತಂಡದ ಸೋಲು-ಗೆಲುವು ನಿರ್ಧರಿಸುವಂತದ್ದು. ಕುಲ್ದೀಪ್ ಯಾದವ್ ಸ್ಪಿನ್ ಕೈಚಳಕ, ಬುಮ್ರಾ ಹಾಗೂ ಅರ್ಶ್‌ದೀಪ್ ಸಿಂಗ್‌ರ ವೇಗದ ದಾಳಿ ಎದುರಿಸುವುದು ದಕ್ಷಿಣ ಆಫ್ರಿಕಾಕ್ಕೆ ಸವಾಲಾಗುವುದಂತೂ ನಿಶ್ಚಿತ.

ಕೊನೆಯ ಬಾರಿಗೆ ಟಿ20 ವಿಶ್ವಕಪ್ ಫೈನಲ್‌ನಲ್ಲಾದ್ರೂ ಅಬ್ಬರಿಸುತ್ತಾರಾ ವಿರಾಟ್ ಕೊಹ್ಲಿ..?

ಕೈ ಹಿಡಿಯುತ್ತಾ ಅದೃಷ್ಟ: ಮೊದಲ ಬಾರಿ ಫೈನಲ್‌ಗೇರಿರುವ ಆಫ್ರಿಕಾಕ್ಕೆ ಈಗ ಅದೃಷ್ಟ ಕೈ ಹಿಡಿಯಬೇಕಿದೆ. ತಂಡದ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನ ತೋರಿದ್ದು, ಅಜೇಯವಾಗಿ ಉಳಿದಿದೆ. ಬೌಲಿಂಗ್ ವಿಭಾಗ ಈ ಬಾರಿ ತಂಡದ ಯಶಸ್ಸಿನ ಹಿಂದಿರುವ ಪ್ರಮುಖ ಶಕ್ತಿ. ರಬಾಡ, ನೋಕಿಯಾ, ಯಾನ್ಸನ್, ಶಮ್ಸಿ, ಕೇಶವ್ ಯಾವುದೇ ಎದುರಾಳಿಗಳನ್ನು ಉರುಳಿಸಬಲ್ಲರು. ಡಿ ಕಾಕ್, ಮಾರ್ಕರಮ್, ಮಿಲ್ಲರ್, ಕ್ಲಾಸೆನ್, ಸ್ಟಬ್ಸ್‌ರಂಥ ಅಪಾಯಕಾರಿ ಬ್ಯಾಟಿಂಗ್ ಪಡೆಯನ್ನು ನೋಡಿದರೆ ಎದುರಾಳಿಗಳ ಮನದಲ್ಲಿ ಅಳುಕು ಮೂಡಿದರೆ ಅಚ್ಚರಿಯಿಲ್ಲ.

ಈ ವಿಶ್ವಕಪ್‌ನ ಎರಡು ಶ್ರೇಷ್ಠ ತಂಡಗಳ ನಡುವೆ ಫೈನಲ್‌!

ಭಾರತ ಹಾಗೂ ದಕ್ಷಿಣ ಆಫ್ರಿಕಾ ಈ ವಿಶ್ವಕಪ್‌ನ ಶ್ರೇಷ್ಠ ತಂಡಗಳು ಎನ್ನುವುದರಲ್ಲಿ ಅನುಮಾನವಿಲ್ಲ. ಎರಡೂ ತಂಡಗಳು ಅಜೇಯವಾಗಿ ಫೈನಲ್‌ಗೇರಿವೆ. ಎರಡೂ ತಂಡಗಳು ಗುಂಪು, ಸೂಪರ್‌-8 ಹಂತದಲ್ಲಿ ತಾವಿದ್ದ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದವು. ದ.ಆಫ್ರಿಕಾ ಒಟ್ಟು 8 ಜಯದೊಂದಿಗೆ ಫೈನಲ್‌ಗೇರಿದರೆ, ಕೆನಡಾ ವಿರುದ್ಧ ಪಂದ್ಯ ರದ್ದಾದ ಕಾರಣ 7 ಜಯದೊಂದಿಗೆ ಭಾರತ ಫೈನಲ್‌ ಪ್ರವೇಶಿಸಿದೆ. ಫೈನಲ್‌ನಲ್ಲಿ ಯಾರೇ ಗೆದ್ದರೂ, ಅಜೇಯವಾಗಿ ಟಿ20 ವಿಶ್ವಕಪ್‌ ಟ್ರೋಫಿ ಗೆದ್ದ ಮೊದಲ ತಂಡ ಎನಿಸಲಿದೆ.

ಮೊದಲ ಫೈನಲ್‌ ಮುಖಾಮುಖಿ!

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವೆ ಐಸಿಸಿ ಟೂರ್ನಿಗಳಲ್ಲಿ ಇದು ಮೊದಲ ಫೈನಲ್‌ ಮುಖಾಮುಖಿ. ಉಭಯ ತಂಡಗಳು 2014ರ ಟಿ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಸೆಣಸಿದ್ದವು. ಆ ಪಂದ್ಯವನ್ನು ಭಾರತ ಗೆದ್ದಿತ್ತು.

ಉಭಯ ತಂಡಗಳ ಆಟಗಾರರ ಪಟ್ಟಿ

ಭಾರತ:

ರೋಹಿತ್ ಶರ್ಮಾ(ನಾಯಕ), ವಿರಾಟ್ ಕೊಹ್ಲಿ, ರಿಷಭ್ ಪಂತ್, ಸೂರ್ಯಕುಮಾರ್ ಯಾದವ್ , ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಅರ್ಶ್‌ದೀಪ್ ಸಿಂಗ್.

ದಕ್ಷಿಣ ಆಫ್ರಿಕಾ:

ಕ್ವಿಂಟನ್ ಡಿ ಕಾಕ್, ರೀಜಾ ಹೆಂಡ್ರಿಕ್ಸ್, ಏಯ್ಡನ್ ಮಾರ್ಕ್‌ರಮ್(ನಾಯಕ), ಹೆನ್ರಿಚ್ ಕ್ಲಾಸೆನ್, ಡೇವಿಡ್ ಮಿಲ್ಲರ್, ಟ್ರಿಸ್ಟಿನ್ ಸ್ಟಬ್ಸ್, ಮಾರ್ಕೊ ಯಾನ್ಸನ್, ಕೇಶವ್ ಮಹಾರಾಜ್, ಕಗಿಸೋ ರಬಾಡ, ಏನ್ರಿಚ್ ನೋಕಿಯಾ, ತಜ್ರೇಜ್ ಶಮ್ಸಿ

ಪಿಚ್ ರಿಪೋರ್ಟ್

ಬಾರ್ಬಡೊಸ್ ಕ್ರೀಡಾಂಗಣದಲ್ಲಿ ಈ ಬಾರಿ 8 ಪಂದ್ಯಗಳು ನಡೆದಿವೆ. ಮೊದಲ ಪಂದ್ಯ(ಒಮಾನ್-ನಮೀಬಿಯಾ) ಸೂಪರ್ ಓವರ್‌ಗೆ ಹೋಗಿದ್ದರೆ, ಆ ನಂತರ ಇಲ್ಲಿ ಯಾವುದೇ ಪಂದ್ಯದಲ್ಲೂ ನಿಕಟ ಸ್ಪರ್ಧೆ ಕಂಡುಬಂದಿಲ್ಲ. 2ನೇ ಪಂದ್ಯ ಮಳೆಗೆ ಬಲಿಯಾಗಿದ್ದರೆ, ನಂತರದ 4 ಪಂದ್ಯಗಳ ಪೈಕಿ 3ರಲ್ಲಿ ಮೊದಲು ಬ್ಯಾಟ್ ಮಾಡಿದ ತಂಡ ಗೆದ್ದಿವೆ. ಕಳೆದೆರಡು ಪಂದ್ಯಗಳಲ್ಲಿ ಚೇಸ್ ಮಾಡಿದ ತಂಡಕ್ಕೆ ಸುಲಭ ಗೆಲುವು ಲಭಿಸಿದೆ. ಈ ಕ್ರೀಡಾಂಗಣದಲ್ಲಿ ಈ ಬಾರಿ ಭಾರತ ತಂಡ ಅಫ್ಘಾನಿಸ್ತಾನ
ವಿರುದ್ಧ ಆಡಿ ಗೆದ್ದಿದ್ದರೆ, ದಕ್ಷಿಣ ಆಫ್ರಿಕಾ ಮೊದಲ ಬಾರಿ ಆಡಲಿದೆ.

ಪಂದ್ಯ ಆರಂಭ:
ರಾತ್ರಿ: 8 ಗಂಟೆಗೆ
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್.
 

Latest Videos
Follow Us:
Download App:
  • android
  • ios