Asianet Suvarna News Asianet Suvarna News

ಬಾಂಗ್ಲಾ ಎದುರು ಗೆದ್ದು ಸೆಮೀಸ್‌ಗೇರಿದ ಆಫ್ಘಾನ್‌..! ಆಸೀಸ್ ಸೆಮೀಸ್ ಕನಸು ನುಚ್ಚುನೂರು

ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 114 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 105 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನೊಂದಿಗೆ ಗ್ರೂಪ್ 1ರಿಂದ ಎರಡನೇ ತಂಡವಾಗಿ ರಶೀದ್ ಖಾನ್ ಪಡೆ ಸೆಮೀಸ್‌ಗೇರಿದರೆ, ಆಸ್ಟ್ರೇಲಿಯಾ ತಂಡದ ಸೆಮೀಸ್ ಕನಸು ನುಚ್ಚುನೂರಾಯಿತು.

T20 World Cup 2024 Afghanistan thrash Bangladesh and enters semifinal kvn
Author
First Published Jun 25, 2024, 10:40 AM IST

ಕಿಂಗ್ಸ್‌ಟೌನ್: ಕ್ರಿಕೆಟ್ ಅಭಿಮಾನಿಗಳನ್ನು ಅಕ್ಷರಶಃ ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದ ಆಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ಸೂಪರ್ 8 ಹಂತದ ಕೊನೆಯ ಪಂದ್ಯದಲ್ಲಿ ಕೊನೆಗೂ 8 ರನ್‌ ರೋಚಕ ಗೆಲುವು ಸಾಧಿಸುವ ಮೂಲಕ ರೋಚಕವಾಗಿ ಸೆಮಿಫೈನಲ್‌ಗೆ ಲಗ್ಗೆಯಿಡುವಲ್ಲಿ ಯಶಸ್ವಿಯಾಗಿದೆ.

ಮಳೆ ಬಾಧಿತ ಪಂದ್ಯದಲ್ಲಿ 19 ಓವರ್‌ಗಳಲ್ಲಿ 114 ರನ್ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡವು 105 ರನ್‌ಗಳಿಗೆ ಸರ್ವಪತನ ಕಂಡಿದೆ. ಈ ಗೆಲುವಿನೊಂದಿಗೆ ಗ್ರೂಪ್ 1ರಿಂದ ಎರಡನೇ ತಂಡವಾಗಿ ರಶೀದ್ ಖಾನ್ ಪಡೆ ಸೆಮೀಸ್‌ಗೇರಿದರೆ, ಆಸ್ಟ್ರೇಲಿಯಾ ತಂಡದ ಸೆಮೀಸ್ ಕನಸು ನುಚ್ಚುನೂರಾಯಿತು.

ಒಂದು ವೇಳೆ ಇಂದಿನ ಪಂದ್ಯದಲ್ಲಿ ಬಾಂಗ್ಲಾದೇಶ ತಂಡವು ಗೆಲುವು ಸಾಧಿಸಿದ್ದರೇ, ಆಸ್ಟ್ರೇಲಿಯಾ ತಂಡವು ಸೆಮೀಸ್‌ಗೇರುತ್ತಿತ್ತು. ಆದರೆ ರಶೀದ್ ಖಾನ್, ನವೀನ್ ಉಲ್‌ ಹಕ್ ಅವರ ಮಾರಕ ದಾಳಿಯ ನೆರವಿನಿಂದ ಅಲ್ಪ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ಆಫ್ಘಾನಿಸ್ತಾನ ತಂಡವು ಯಶಸ್ವಿಯಾಗಿದೆ.

Latest Videos
Follow Us:
Download App:
  • android
  • ios