Asianet Suvarna News Asianet Suvarna News

ಆಸಿಸ್ ವಿರುದ್ಧದ ಸೋಲಿನ ಬೆನ್ನಲ್ಲೇ ಫ್ಯಾನ್ಸ್‌ಗೆ ಶಾಕ್, ನಾಯಕತ್ವಕ್ಕೆ ಮೊಹಮ್ಮದ್ ನಬಿ ರಾಜೀನಾಮೆ!

ಆಸ್ಟ್ರೇಲಿಯಾ ವಿರುದ್ಧದ ರೋಚಕ ಪಂದ್ಯದಲ್ಲಿ ಆಫ್ಘಾನಿಸ್ತಾನ ಕೇವಲ 4 ರನ್‌ಗಳ ವಿರೋಚಿತ ಸೋಲು ಕಂಡಿದೆ. ಈ ಮೂಲಕ ಟಿ20 ವಿಶ್ವಕಪ್ ಟೂರ್ನಿಯ ಹೋರಾಟ ಅಂತ್ಯಗೊಳಿಸಿದೆ. ಈ ಸೋಲಿನ ನೋವಿನ ನಡುವೆ  ಮೊಹಮ್ಮದ್ ನಬಿ ಆಫ್ಘಾನಿಸ್ತಾನ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದಾರೆ.

T20 World cup 2022 Mohammad Nabi steps down as Afghanistan captain after loss against Australia ckm
Author
First Published Nov 4, 2022, 8:46 PM IST

ಸಿಡ್ನಿ(ನ.04):  ಆಸ್ಟ್ರೇಲಿಯಾ ವಿರುದ್ದದ ಟಿ20 ವಿಶ್ವಕಪ್ ಲೀಗ್ ಪಂದ್ಯದಲ್ಲಿ ಆಫ್ಘಾನಿಸ್ತಾನ ಕೇವಲ 4 ರನ್‌ಗಳಿಂದ ಸೋಲು ಕಂಡಿದೆ. ಆದರೆ ಆಫ್ಘಾನಿಸ್ತಾನ ಹೋರಾಟಕ್ಕೆ ಬಾರಿ ಮೆಚ್ಚುಗೆ ವ್ಯಕ್ತವಾಗಿದೆ. ಆಸ್ಟ್ರೇಲಿಯಾ ವಿರುದ್ಧದ ಸೋಲಿನೊಂದಿಗೆ ಆಫ್ಘಾನಿಸ್ತಾನದ ಟಿ20 ವಿಶ್ವಕಪ್ ಪಯಣ ಅಂತ್ಯಗೊಂಡಿದೆ. ಈ ಸೋಲು ಆಫ್ಘಾನ್ ಅಭಿಮಾನಿಗಳಿಗೆ ಶಾಕ್ ನೀಡಿದೆ. ಇದರ ಬೆನ್ನಲ್ಲೇ ಮತ್ತೊಂದು ಆಘಾತ ಎದುರಾಗಿದೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೋಲಿನ ನಿರ್ಗಮನದೊಂದಿಗೆ ನಾಯಕತ್ವಕ್ಕೆ ಮೊಹಮ್ಮದ್ ನಬಿ ರಾಜೀನಾಮೆ ನೀಡಿದ್ದಾರೆ. ಟ್ವಿಟರ್ ಮೂಲಕ ಘೋಷಿಸಿದ್ದಾರೆ. ನಾಯಕತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಆದರೆ ಆಫ್ಘಾನಿಸ್ತಾನ ತಂಡದ ಪರ ಆಡುತ್ತೇನೆ. ತಂಡಕ್ಕೆ ತನ್ನನ್ನು ಆಯ್ಕೆ ಮಾಡಿದರೆ ಆಫ್ಘಾನಿಸ್ತಾನ ಪ್ರತಿನಿಧಿಸಲು ಸಿದ್ದ ಎಂದು ನಬಿ ಹೇಳಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ಒಂದೇ ಒಂದು ಗೆಲುವಿಲ್ಲದೆ ಟೂರ್ನಿಯಿಂದ ನಿರ್ಗಮಿಸಿದೆ. ಪ್ರದರ್ಶನ ಕುರಿತು ತೀವ್ರ ನಿರಾಸೆ ವ್ಯಕ್ತಪಡಿಸಿರುವ ಮೊಹಮ್ಮದ್ ನಬಿ ಅಭಿಮಾನಿಗಳ ನಿರೀಕ್ಷೆಗೆ ತಕ್ಕಂತೆ ಪ್ರದರ್ಶನ ನೀಡಿಲ್ಲ ಎಂದು ನಬಿ ಹೇಳಿದ್ದಾರೆ. 

ರಶೀದ್ ಖಾನ್ ಕೆಚ್ಚೆದೆಯ ಹೋರಾಟ ವ್ಯರ್ಥ; ಆಸ್ಟ್ರೇಲಿಯಾ ಎದುರು ಆಫ್ಘಾನ್‌ಗೆ ರೋಚಕ ಸೋಲು..!

ಪಂದ್ಯದ ಫಲಿತಾಂಶದಿಂದ ಅಭಿಮಾನಿಗಳಂತೆ ನಾವು ಹತಾಶರಾಗಿದ್ದೇವೆ. ಕಳೆದ ಒಂದು ವರ್ಷದಿಂದ ನಮ್ಮ ತಯಾರಿ ಅತೀ ದೊಡ್ಡ ಟೂರ್ನಿಗೆ ಬೇಕಾದ ರೀತಿ ಇರಲಿಲ್ಲ. ನಿರ್ವಹಣೆ, ತಯಾರಿ ಇಲ್ಲದಿದ್ದಾಗ ಪ್ರದರ್ಶನ ನಿರೀಕ್ಷಿತವಾಗಿರಲಿಲ್ಲ. ನಾಯಕನಿಗೆ ಬೇಕಾದ ತಂಡದ ಆಯ್ಕೆಯೂ ನಡೆಯಲಿಲ್ಲ. ಇದರಿಂದ ತಂಡದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಸಾಧ್ಯವಾಗಲಿಲ್ಲ.  ಹೀಗಾಗಿ ಗೌರವದೊಂದಿಗೆ ನಾನು ನಾಯಕಸ್ಥಾನದಿಂದ ಕೆಳಗಿಳಿಯುತ್ತಿರುವುದಾಗಿ ಘೋಷಿಸುತ್ತಿದ್ದೇನೆ. ಆದರೆ ತಂಡದಲ್ಲಿ ಆಟಗಾರನಾಗಿ ಮುಂದುವರಿಯುತ್ತೇನೆ. ತಂಡಕ್ಕೆ ಅಗತ್ಯವಿರುವಾಗ, ನನ್ನನ್ನು ಆಯ್ಕೆ ಮಾಡಿದರೆ ದೇಶಕ್ಕಾಗಿ ಆಡಲು ಹೆಮ್ಮೆಯಿದೆ.   ಮಳೆಯಿಂದ ಕೆಲ ಪಂದ್ಯಗಳು ರದ್ದಾಗಿದೆ. ಆದರೆ ನಮ್ಮನ್ನು ಬೆಂಬಲಿಸಲು ಕ್ರೀಡಾಂಗಣದಲ್ಲಿ ಆಗಮಿಸಿದ ಪ್ರತಿಯೊಬ್ಬರಿಗೂ ಹೃಯಾಂತರಾಳದಿಂದ ಧನ್ಯವಾದ. ವಿಶ್ವಾದ್ಯಂತ ನಮ್ಮನ್ನು ಬೆಂಬಲಿಸುವವರಿಗೆ ಧನ್ಯವಾದ. ನಿಮ್ಮ ಪ್ರೀತಿ, ಕಾಳಜಿಗೆ ಕೃತಜ್ಞ ಎಂದು ನಬಿ ರಾಜೀನಾಮೆ ಪತ್ರದಲ್ಲಿ ಹೇಳಿದ್ದಾರೆ. 

ವರ್ಷಗಳ ಬಳಿಕ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿಗೆ ವಿರಾಟ್‌ ಕೊಹ್ಲಿ ನಾಮಿನೇಷನ್‌

 ಶ್ರೀಲಂಕಾ ವಿರುದ್ದಧ ಸೋಲಿನ ಬೆನ್ನಲ್ಲೇ ಆಫ್ಘಾನಿಸ್ತಾನದ ಸೆಮಿಫೈಲ್ ಆಸೆ ಅಂತ್ಯಗೊಂಡಿತ್ತು. ಈ ಪಂದ್ಯದಲ್ಲಿ ಅಷ್ಘಾನಿಸ್ತಾನ ವಿರುದ್ಧ 6 ವಿಕೆಟ್‌ ಗೆಲುವು ಸಾಧಿಸುವ ಮೂಲಕ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪ್ರವೇಶಿಸುವ ಆಸೆಯನ್ನು ಶ್ರೀಲಂಕಾ ಜೀವಂತವಾಗಿರಿಸಿಕೊಂಡಿತ್ತು. ಈ ಸೋಲಿನಿಂದಾಗಿ ಆಫ್ಘನ್‌ಗೆ ಸೆಮೀಸ್‌ ಬಾಗಿಲು ಮುಚ್ಚಿದೆ. ಆಫ್ಘನ್ನರ ಮೇಲೆ ಪಂದ್ಯದುದ್ದಕ್ಕೂ ಮೇಲುಗೈ ಸಾಧಿಸಿದ ಶ್ರೀಲಂಕಾ ತನ್ನ ನೆಟ್‌ ರನ್‌ರೇಟ್‌ ಉತ್ತಮಗೊಳಿಸಿಕೊಳ್ಳುವುದರ ಕಡೆಗೂ ಗಮನ ಹರಿಸಿತು. ವನಿಂಡು ಹಸರಂಗ ಜವಾಬ್ದಾರಿಯುತ ಬೌಲಿಂಗ್‌ನ ನೆರವಿನಿಂದ ಆಫ್ಘನ್‌ ಪಡೆಯನ್ನು 8 ವಿಕೆಟ್‌ಗೆ 144 ರನ್‌ಗಳ ಸಾಧಾರಣ ಮೊತ್ತಕ್ಕೆ ಲಂಕಾ ನಿಯಂತ್ರಿಸಿತು. ಪಥುಂ ನಿಸ್ಸಾಂಕ(12) ಬೇಗನೆ ಔಟಾದರು. ಮುಜೀಬ್‌ರ ಸ್ಪಿನ್‌ ದಾಳಿ ಎದುರು ಲಂಕಾ ತಿಣುಕಾಡಿತು. ಪವರ್‌-ಪ್ಲೇನಲ್ಲಿ ಕೇವಲ 28 ರನ್‌ ಗಳಿಸಿತು.

ಧನಂಜಯ ಡಿ ಸಿಲ್ವಾ ತಾಳ್ಮೆಯಿಂದ ತಮ್ಮ ಅವಕಾಶಗಳಿಗೆ ಕಾಯ್ದರು. ಮೊದಲು ನಿಧಾನವಾಗಿ ಕುಸಾಲ್‌ ಮೆಂಡಿಸ್‌ ಜೊತೆ ಇನ್ನಿಂಗ್‌್ಸ ಕಟ್ಟಿದರು. ಅಗ್ರ ಕ್ರಮಾಂಕ ದಿಢೀರ್‌ ಕುಸಿಯದಂತೆ ಎಚ್ಚರ ವಹಿಸಿದರು. ಆ ಬಳಿಕ ಅಸಲಂಕ ಹಾಗೂ ರಾಜಪಕ್ಸೆ ಜೊತೆ ಸೇರಿ ತಂಡವನ್ನು ಜಯದತ್ತ ಕೊಂಡೊಯ್ದರು. 44 ಎಸೆತಗಳಲ್ಲಿ 66 ರನ್‌ ಗಳಿಸಿ ಔಟಾಗದೆ ಉಳಿದರು.

ಇದಕ್ಕೂ ಮುನ್ನ ಅಷ್ಘಾನಿಸ್ತಾನ ವಿಕೆಟ್‌ ನಷ್ಟವಿಲ್ಲದೆ 42 ರನ್‌ ಗಳಿಸಿ ಉತ್ತಮ ಆರಂಭ ಪಡೆಯಿತು. ಆದರೆ ಆ ಬಳಿಕ ಸತತವಾಗಿ ವಿಕೆಟ್‌ಗಳನ್ನು ಕಳೆದುಕೊಂಡಿತು. ಹಸರಂಗ ಇನ್ನಿಂಗ್‌್ಸನ 7, 11, 14 ಹಾಗೂ 20ನೇ ಓವರ್‌ ಬೌಲ್‌ ಮಾಡಿದರು. ಅವರು ಒಂದೂ ಬೌಂಡರಿ ಬಿಟ್ಟುಕೊಡಲಿಲ್ಲ. ಕೇವಲ 13 ರನ್‌ ನೀಡಿ 3 ವಿಕೆಟ್‌ ಕಿತ್ತರು.
 

Follow Us:
Download App:
  • android
  • ios