Asianet Suvarna News Asianet Suvarna News

T20 World Cup 2021: ನಾಯಕನಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ!

T20 ನಾಯಕನಾಗಿ ಕೊನೆಯ ಪಂದ್ಯ ಆಡಲಿರುವ ವಿರಾಟ್ ಕೊಹ್ಲಿ
ನಮಿಬಿಯಾ ವಿರುದ್ಧ ಟಾಸ್ ಗೆದ್ದ ಟೀಂ ಇಂಡಿಯಾ
ನಮಿಬಿಯಾ ಪಂದ್ಯದೊಂದಿಗೆ ನಿರ್ಗಮಿಸಲಿದೆ ಟೀಂ ಇಂಡಿಯಾ

T20 World Cup 2021 Virat Kohli wins toss against Namibia in hist last game as T20 captain ckm
Author
Bengaluru, First Published Nov 8, 2021, 7:04 PM IST
  • Facebook
  • Twitter
  • Whatsapp

ದುಬೈ(ನ.08):  ಟಿ20 ನಾಯಕನಾಗಿ ವಿರಾಟ್ ಕೊಹ್ಲಿಗೆ(Virat Kohli) ಇಂದು ಕೊನೆಯ ಪಂದ್ಯ. T20 World Cup 2021 ಟೂರ್ನಿಯಲ್ಲಿ ಟೀಂ ಇಂಡಿಯಾಗೆ ಅಂತಿಮ ಪಂದ್ಯ. ಈಗಾಗಲೇ ಟೂರ್ನಿಯಿಂದ ಹೊರಬಿದ್ದಿರುವ ಭಾರತ, ಇಂದು ನಮಿಬಿಯಾ ವಿರುದ್ಧ ಹೋರಾಟ ನಡೆಸುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದಿರುವ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಟೀಂ ಇಂಡಿಯಾದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ವರುಣ್ ಚಕ್ರವರ್ತಿ ಬದಲು ರಾಹುಲ್ ಚಹಾರ್ ತಂಡ ಸೇರಿಕೊಂಡಿದ್ದಾರೆ.

ಟೀಂ ಇಂಡಿಯಾ :
ಕೆಎಲ್ ರಾಹುಲ್, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಶಬ್ ಪಂತ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾಾ, ಆರ್ ಅಶ್ವಿನ್, ರಾಹುಲ್ ಚಹಾರ್, ಮೊಹಮ್ಮದ್ ಶಮಿ, ಜಸ್ಪ್ರೀತ್ ಬುಮ್ರಾ

T20 World Cup 2021 ಟೂರ್ನಿ ಬಳಿಕ ಟಿ20 ನಾಯಕತ್ವಕ್ಕೆ ವಿದಾಯ ಹೇಳುವುದಾಗಿ ವಿರಾಟ್ ಕೊಹ್ಲಿ ಘೋಷಿಸಿದ್ದರು. ನಾಯಕನಾಗಿ ಕೊನೆಯ ಟಿ20 ವಿಶ್ವಕಪ್ ಟೂರ್ನಿ ಆಡುತ್ತಿರುವ ಕೊಹ್ಲಿ ನಿರಾಸೆಯೊಂದಿಗೆ ಹೆಜ್ಜೆಹಾಕಬೇಕಿದೆ. ಇದೀಗ ಟೀಂ ಇಂಡಿಯಾ(Team India) ಕೊನೆಯ ಪಂದ್ಯದಲ್ಲಿ ಭರ್ಜರಿ ಗೆಲುವಿನ ಮೂಲಕ ಕೊಹ್ಲಿ ನಾಯಕತ್ವ ವಿದಾಯಕ್ಕೆ ಸಜ್ಜಾಗಿದೆ. ಮೂರು ಮಾದರಿಯಲ್ಲಿ ಟೀಂ ಇಂಡಿಯಾವನ್ನು ಸಮರ್ಥವಾಗಿ ಮುನ್ನಡೆಸಿದ ನಾಯಕ ವಿರಾಟ್ ಕೊಹ್ಲಿ. ಇದೀಗ ಹೆಚ್ಚುವರಿ ಒತ್ತಡದಿಂದ ಮುಕ್ತರಾಗಲು ಟಿ20 ನಾಯಕತ್ವ ಹಾಗೂ ಈಗಾಗಲೇ ಐಪಿಎಲ್ ಟೂರ್ನಿಯಲ್ಲಿ ಆರ್‌ಸಿಬಿ(RCB) ನಾಯಕತ್ವದಿಂದಲೂ ಕೊಹ್ಲಿ ಗುಡ್ ಬೈ ಹೇಳಿದ್ದಾರೆ.  ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಇಂದಿನ ಪಂದ್ಯ ಭಾವುಕ ಪಂದ್ಯವಾಗಿದೆ.

T20 World Cup; 2012ರ ಬಳಿಕ ಮೊದಲ ಬಾರಿಗೆ ICC ಟೂರ್ನಿಯಲ್ಲಿ ಲೀಗ್ ಹಂತದಿಂದ ಭಾರತ ಔಟ್!

ಕೊಹ್ಲಿಗೆ ನಾಯಕನಾಗಿ ಕೊನೆಯ ಪಂದ್ಯವಾಗಿದ್ದರೆ, ಕೋಚ್ ಆಗಿರುವ ರವಿ ಶಾಸ್ತ್ರಿಗೆ(Ravi Shastri) ಇದು ಕೊನೆಯ ಪಂದ್ಯ. ಟಿ20 ವಿಶ್ವಕಪ್ ಟೂರ್ನಿ ಬಳಿಕ ಶಾಸ್ತ್ರಿ ಕೋಚ್ ಅವಧಿ ಮುಕ್ತಾಯವಾಗಲಿದೆ. ಈಗಾಗಲೇ ಟೀಂ ಇಂಡಿಯಾ ನೂತನ ಕೋಚ್ ಆಗಿ ಮಾಜಿ ನಾಯಕ , ಎನ್‌ಸಿಎ ಮುಖ್ಯಸ್ಥ ರಾಹುಲ್ ದ್ರಾವಿಡ್(Rahul Dravid) ಆಯ್ಕೆಯಾಗಿದ್ದಾರೆ. 

T20 World Cup 2021 ಟೂರ್ನಿ ಟೀಂ ಇಂಡಿಯಾಗೆ ತೃಪ್ತಿದಾಯಕವಲ್ಲ. ಟೀಂ ಇಂಡಿಯಾ ನಿರ್ಗಮನಕ್ಕಿಂತ ಪಾಕಿಸ್ತಾನ ವಿರದ್ಧದ ಸೋಲಿನ ನೋವು ಇನ್ನು ಮಾಸಿಲ್ಲ. ಮೊದಲ ಪಂದ್ಯದಲ್ಲಿ ಪಾಕ್ ವಿರುದ್ಧ 10 ವಿಕೆಟ್ ಸೋಲು, 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಮುಗ್ಗರಿಸಿತ್ತು. ಇನ್ನು ಆಫ್ಘಾನಿಸ್ತಾನ, ಸ್ಕಾಟ್‌ಲೆಂಡ್ ವಿರುದ್ಧ ಅಬ್ಬರಿಸಿದರೂ ಭಾರತದ ಭವಿಷ್ಯ ಬದಲಾಗಲಿಲ್ಲ. ಇತ್ತ ಆಫ್ಘಾನಿಸ್ತಾನ ವಿರುದ್ಧ ನ್ಯೂಜಿಲೆಂಡ್ ಗೆಲುವು ದಾಖಲಿಸುವ ಮೂಲಕ ಭಾರತದ ಸೆಮಿಫೈನಲ್ ಪ್ರವೇಶಕ್ಕಿದ್ದ ಕೊನೆಯ ದಾರಿ ಕೂಡ ಮುಚ್ಚಿ ಹೋಯಿತು. 

2012ರ ಬಳಿಕ ಇದೇ ಮೊದಲ ಬಾರಿಗೆ ಟೀಂ ಇಂಡಿಯಾ ಐಸಿಸಿ ಟೂರ್ನಿಯಲ್ಲಿ(ICC tournment) ನಾಕೌಟ್ ಹಂತ ಪ್ರವೇಶಿಸಿದೆ ಹೊರಬೀಳುತ್ತಿದೆ. 2013ರಿಂದ ಇದುವರೆಗೆ ಭಾರತ ಯಾವುದೇ ಐಸಿಸಿ ಟ್ರೋಫಿ ಗೆದ್ದುಕೊಂಡಿಲ್ಲ. ಧೋನಿ ನಾಯಕತ್ವದ ಟೀಂ ಇಂಡಿಯಾ 2013ರಲ್ಲಿ ಗೆದ್ದ ಚಾಂಪಿಯನ್ಸ್ ಟ್ರೋಫಿ ಕೊನೆಯ ಚಾಂಪಿಯನ್ ಪಟ್ಟವಾಗಿದೆ.  ಪ್ರಶಸ್ತಿ ಬರ ನೀಗಿಸುವ ವಿಶ್ವಾಸದೊಂದಿಗೆ ಟಿ20 ವಿಶ್ವಕಪ್ ಟೂರ್ನಿಗೆ ಎಂಟ್ರಿಕೊಟ್ಟ ಟೀಂ ಇಂಡಿಯಾ ಇದೀಗ ಬರೀಗೈಯಲ್ಲಿ ವಾಪಾಸ್ಸಾಗುತ್ತಿದೆ.

T20 World cup 2021: ಆಫ್ಘಾನ್ ವಿರುದ್ಧ ನ್ಯೂಜಿಲೆಂಡ್‌ಗೆ ಗೆಲುವು, ಸೆಮೀಸ್ ರೇಸ್‌ನಿಂದ ಭಾರತ ಔಟ್!

ಭಾರತ ಹಾಗೂ ನಮಿಬಿಯಾ ಇದೇ ಮೊದಲ ಬಾರಿಗೆ ಟಿ20 ಮಾದರಿಯಲ್ಲಿ ಮುಖಾಮುಖಿಯಾಗುತ್ತಿದೆ. 2003ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಮುಖಾಮುಖಿಯಾಗಿತ್ತು.  ನಮಿಬಿಯಾ ತಂಡ ತನ್ನ ವೇಗಿಗಳ ಮೇಲೆ ಹೆಚ್ಚು ಅವಲಂಬಿತವಾಗಿದೆ. ನಮಿಬಿಯಾದಲ್ಲಿ ಶೇಕಡಾ 74 ರಷ್ಟು ಓವರ್‌ಗಳನ್ನು ವೇಗಿಗಳೇ ಹಾಕಿದ್ದಾರೆ.

Follow Us:
Download App:
  • android
  • ios