Asianet Suvarna News Asianet Suvarna News

T20 World Cup 2021: ಗೆಲುವಿನೊಂದಿಗೆ ಟೂರ್ನಿಗೆ ವಿದಾಯ ಹೇಳಿದ ಟೀಂ ಇಂಡಿಯಾ!

  • ನಮಿಬಿಯಾ ವಿರುದ್ಧ ಭಾರತಕ್ಕೆ 9 ವಿಕೆಟ್ ಗೆಲುವು
  • ಭರ್ಜರಿ ಗೆಲುವಿನೊಂದಿಗೆ ಟೂರ್ನಿಗೆ ವಿದಾಯ
  • ಕೊಹ್ಲಿ ನಾಯಕತ್ವದ ಕೊನೆಯ ಪಂದ್ಯದಲ್ಲಿ ಗೆಲುವು
T20 World Cup 2021 Team India beat namibia by 9 wickets exit icc toruney with winning note ckm
Author
Bengaluru, First Published Nov 8, 2021, 10:29 PM IST
  • Facebook
  • Twitter
  • Whatsapp

ದುಬೈ(ನ.08): ಗೆಲುವಿನೊಂದಿಗೆ  T20 World Cup 2021 ಟೂರ್ನಿಗೆ ಟೀಂ ಇಂಡಿಯಾ ವಿದಾಯ ಹೇಳಿದೆ. ಇತ್ತ ವಿರಾಟ್ ಕೊಹ್ಲಿ ಕೂಡ ಗೆಲವಿನೊಂದಿಗೆ ಟಿ20 ನಾಯಕತ್ವಕ್ಕೆ ಗುಡ್ ಬೈ ಹೇಳಿದ್ದಾರೆ. ನಮಿಬಿಯಾ ವಿರುದ್ಧದ ಅಂತಿಮ ಪಂದ್ಯದಲ್ಲಿ ಟೀಂ ಇಂಡಿಯಾ(Team india) 9 ವಿಕೆಟ್ ಗೆಲುವು ಸಾಧಿಸಿದೆ. ಈಗಾಗಲೇ ಟೂರ್ನಿಯಿಂದ ಹೊರಬಿದ್ದ ಕೊಹ್ಲಿ ಸೈನ್ಯ(Virat Kohli) ಭಾರವಾದ ಹೆಜ್ಜೆ ಇಟ್ಟಿದೆ.ಟಿ20 ನಾಯಕನಾಗಿ ಕೊನೆಯ ಪಂದ್ಯದಲ್ಲಿ ಟಾಸ್ ಗೆದ್ದ ವಿರಾಟ್ ಕೊಹ್ಲಿ ನಮಿಬಿಯಾ(Namibia) ತಂಡವನ್ನು ಬ್ಯಾಟಿಂಗ್ ಆಹ್ವಾನಿಸಿದರು. ಆರ್ ಅಶ್ವಿನ್, ರವೀಂದ್ರ ಜಡೇಜಾ ಹಾಗೂ ಜಸ್ಪ್ರೀತ್ ಬುಮ್ರಾ ದಾಳಿಗೆ ನಲುಗಿದ ನಮಿಬಿಯಾ ದಿಟ್ಟ ಹೋರಾಟ ನೀಡಲು ಸಾಧ್ಯವಾಗಿಲ್ಲ. ಸ್ಟೀಫನ್ ಬಾರ್ಡ್ 21 ರನ್, ಡೇವಿಡ್ ವೀಸ್ 26 ರನ್ ಕಾಣಿಕೆ ನೀಡಿದರು. ಇದರೊಂದಿಗೆ ನಮಿಬಿಯಾ 8 ವಿಕೆಟ್ ನಷ್ಟಕ್ಕೆ 132 ರನ್ ಸಿಡಿಸಿತು. ಜಡೇಜಾ ಹಾಗೂ ಅಶ್ವಿನ್ ತಲಾ 3, ಬುಮ್ರಾ 2 ವಿಕೆಟ್ ಕಬಳಿಸಿ ಮಿಂಚಿದರು.

133 ರನ್ ಸುಲಭ ಟಾರ್ಗೆಟ್ ಪಡೆದ ಟೀಂ ಇಂಡಿಯಾಗೆ ಕೆಎಲ್ ರಾಹುಲ್(KL Rahul) ಹಾಗೂ ರೋಹಿತ್ ಶರ್ಮಾ(Rohit Sharma) ಉತ್ತಮ ಆರಂಭ ನೀಡಿದರು. ಮೊದಲ ವಿಕೆಟ್‌ಗೆ ಈ ಜೋಡಿ 86 ರನ್ ಸಿಡಿಸಿತು.  ರೋಹಿತ್ ಶರ್ಮಾ 20 ರನ್ ಸಿಡಿಸುತ್ತಿದ್ದಂತೆ ಟಿ20 ಕ್ರಿಕೆಟ್‌ನಲ್ಲಿ ರೋಹಿತ್ ಶರ್ಮಾ 3,000 ರನ್ ಗಡಿ ದಾಟಿದರು. ಅಬ್ಬರಿಸಿದ ರೋಹಿತ್ ಆಕರ್ಷಕ ಹಾಫ್ ಸೆಂಚುರಿ ಸಿಡಿಸಿ ಅಬ್ಬರಿಸಿದರು.

Rahul Dravid ಶ್ರೇಷ್ಠ ತಂಡವೊಂದನ್ನು ಮುನ್ನಡೆಸಲಿದ್ದಾರೆ : ರವಿ ಶಾಸ್ತ್ರಿ!

ರೋಹಿತ್ ಶರ್ಮಾ 37 ಎಸೆತದಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್ ಸಿಡಿಸಿದ ರೋಹಿತ್ 56 ರನ್ ಸಿಡಿಸಿ ಔಟಾದರು. ಇತ್ತ ಕೆಎಎಲ್ ರಾಹುಲ್ ಹೋರಾಟ ಮುಂದುವರಿಸಿದರು.  ರಾಹುಲ್ ಆಕರ್ಷಕ ಅರ್ಧಶತಕ ಸಿಡಿಸಿದರು. ಸೂರ್ಯಕುಮಾರ್ ಯಾದವ್ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ನೀಡಿದರು. 

ರಾಹುಲ್ ಅಜೇಯ 54 ರನ್ ಸಿಡಿಸಿದರೆ, ಸೂರ್ಯಕುಮಾರ್ ಯಾದವ್ 25 ಅಜೇಯ ರನ್ ಸಿಡಿಸಿದರು. ಈ ಮೂಲಕ ಟೀಂ ಇಂಡಿಯಾ 15.2 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ ಗುರಿ ತಲುಪಿತು. 9 ವಿಕೆಟ್ ಗೆಲುವು ಕಂಡ ಟೀಂ ಇಂಡಿಯಾ ಟಿ20 ವಿಶ್ವಕಪ್ ಟೂರ್ನಿಗೆ ವಿದಾಯ ಹೇಳಿತು. ಇತ್ತ ನಾಯಕ ವಿರಾಟ್ ಕೊಹ್ಲಿ ಕೂಡ ನಾಯಕತ್ವದ ಕೊನೆಯ ಪಂದ್ಯದಲ್ಲಿ ಗೆಲುವಿನ ನಗೆ ಬೀರಿದರು. 

T20 World Cup 2021: ನಾಯಕನಾಗಿ ಕೊನೆಯ ಟಿ20 ಪಂದ್ಯದಲ್ಲಿ ಟಾಸ್ ಗೆದ್ದ ಕೊಹ್ಲಿ!

ಗೆಲುವಿನ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ, ದೊಡ್ಡ ಭಾರ ಕೆಳಗಿಳಿಸಿದ ಅನುಭವವಾಗುತ್ತಿದೆ. ಟೀಂ ಇಂಡಿಯಾವನ್ನು ಮುನ್ನಡೆಸಲು ಸಿಕ್ಕಿದ ಅವಕಾಶ ನನಗೆ ಹೆಮ್ಮೆಯ ವಿಚಾರವಾಗಿದೆ. ಮೂರು ಮಾದಿರಯಲ್ಲಿನ ಕೆಲಸದ ಒತ್ತಡದಿಂದ ಟಿ20 ನಾಯಕತ್ವವನ್ನು ತ್ಯಜಿಸಿದ್ದೇನೆ. ಕಳೆದ 6, 7 ವರ್ಷ ಕೆಲಸದ ಒತ್ತಡ ಹೆಚ್ಚಾಗಿತ್ತು. ಈ ಒತ್ತಡ ಕಡಿಮೆ ಮಾಡಲು ನಾಯಕತ್ವಕ್ಕೆ ತ್ಯಜಿಸಿದ್ದೇನೆ. ನಾವು ನಿರೀಕ್ಷಿತ ಫಲಿತಾಂಶ ಸಿಗಲಿಲ್ಲ. ಆದರೆ ಟೂರ್ನಿಯಲ್ಲಿ ಉತ್ತಮ ಹೋರಾಟ ನೀಡಿದ್ದೇವೆ. ತಂಡದ ಸಹ ಆಟಗಾರರಿಂದ ನನ್ನ ಕೆಲಸದ ಒತ್ತಡ ಕಡಿಮೆಯಾಗಿದೆ. ಆರಂಭಿಕ 2 ಪಂದ್ಯದಲ್ಲಿ ನಾವು ಆಕ್ರಮಣಕಾರಿ ಆಟ ಪ್ರದರ್ಶಿಸಲು ಸಾಧ್ಯವಾಗಿಲ್ಲ. ಅದು ಟೂರ್ನಿಯ ಫಲಿತಾಂಶದ ಮೇಲೆ ಪರಿಣಾಮ ಬೀರಿತು. ಕೋಚ್ ರವಿ ಶಾಸ್ತ್ರಿ ಹಾಗೂ ಸಹಾಯಕ ಸಿಬ್ಬಂದಿಗಳಿಗೆ ಧನ್ಯವಾದ. ನಾನು ಆಕ್ರಣಕಾರಿ ಆಟವನ್ನು ಬದಲಾಯಿಸುವುದಿಲ್ಲ. ಯಾವತ್ತು ಬದಲಾಯಿಸುತ್ತೇನೆ ಅಂದು ಕ್ರಿಕೆಟ್ ಆಡುವುದನ್ನು ನಿಲ್ಲಿಸುತ್ತೇನೆ. ಟೂರ್ನಿ ಉತ್ತಮ ನೆನಪುಗಳನ್ನು ಕಟ್ಟಿಕೊಟ್ಟಿದೆ ಎಂದು ಕೊಹ್ಲಿ ಹೇಳಿದ್ದಾರೆ.
 

Follow Us:
Download App:
  • android
  • ios