Asianet Suvarna News Asianet Suvarna News

T20 World Cup 2021: ಇಂಗ್ಲೆಂಡ್ ದಾಳಿಗೆ ವಿಂಡೀಸ್ ಧೂಳೀಪಟ, 55 ರನ್‌ಗೆ ಆಲೌಟ್!

  • ಇಂಗ್ಲೆಂಡ್ ವಿರುದ್ಧ ತತ್ತರಿಸಿದ ವೆಸ್ಟ್ ಇಂಡೀಸ್
  • ವಿಂಡೀಸ್ ಬ್ಯಾಟರ್‌ಗಳ ಪೆವಿಲಿಯನ್ ಪರೇಡ್
  • ರನ್‌ಗೆ ವೆಸ್ಟ್ ಇಂಡೀಸ್ ಆಲೌಟ್, ಇಂಗ್ಲೆಂಡ್‌ಗೆ ಸುಲಭ ಟಾರ್ಗೆಟ್
T20 World Cup 2021 Super 12 Group 1 England restrict West Indies by 55 runs in Dubai Ckm
Author
Bengaluru, First Published Oct 23, 2021, 8:48 PM IST

ದುಬೈ(ಅ.23):  T20 World Cup ವಿಶ್ವಕಪ್ ಇತಿಹಾಸದಲ್ಲಿ ಇಂಗ್ಲೆಂಡ್ ವಿರುದ್ಧ ವೆಸ್ಟ್ ಇಂಡೀಸ್ ಸೋಲು ಕಂಡಿಲ್ಲ. ಆದರೆ ಇಂದು ಈ ಅಜೇಯ ದಾಖಲೆ ಮುರಿಯುವ ಎಲ್ಲಾ ಲಕ್ಷಣಗಳು ಗೋಚರಿಸಿದೆ. ಇಂಗ್ಲೆಂಡ್ ದಾಳಿಗೆ ತ್ತತ್ತರಿಸಿದ ವೆಸ್ಟ್ ಇಂಡೀಸ್ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್ ನಡೆಸಿದ್ದಾರೆ. ಇದರ ಪರಿಣಾಣ ವಿಂಡೀಸ್ 14.2 ಓವರ್‌ಗಳಲ್ಲಿ55  ರನ್‌ಗೆ ಆಲೌಟ್ ಆಗಿದೆ.

55 ರನ್ ಸಿಡಿಸಿ ಆಲೌಟ್ ಆಗುವ ಮೂಲಕ ಟಿ20 ವಿಶ್ವಕಪ್ ಇತಿಹಾಸದಲ್ಲಿ ದಾಖಲಾಗದ 3ನೇ ಅತಿ ಕಡಿಮೆ ಮೊತ್ತ ಅನ್ನೋ ಕುಖ್ಯಾತಿಗೆ ವೆಸ್ಟ್ ಇಂಡೀಸ್ ಗುರಿಯಾಗಿದೆ. 

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಅತ್ಯಲ್ಪಮೊತ್ತ 
39 ನೆದರ್ಲೆಂಡ್ v ಶ್ರೀಲಂಕ, 2014
44 ನೆದರ್ಲೆಡ್ v ಶ್ರೀಲಂಕ, 2021
55 ವೆಸ್ಟ್ ಇಂಡೀಸ್ v ಇಂಗ್ಲೆಂಡ್, 2021
60 ನ್ಯೂಜಿಲೆಂಡ್ v ಶ್ರೀಲಂಕ, 2014
68 ಐರ್ಲೆಂಡ್ v ವೆಸ್ಟ್ ಇಂಡೀಸ್, 2010

ವೆಸ್ಟ್ ಇಂಡೀಸ್ ಟಿ20 ಕ್ರಿಕಟ್ ಇತಿಹಾಸದಲ್ಲಿ ದಾಖಲಿಸಿದ 2ನೇ ಅತ್ಯಲ್ಪ ಮೊತ್ತ ಇದಾಗಿದೆ. ವಿಶೇಷ ಅಂದರೆ ಎಲ್ಲಾ ಅತ್ಯಲ್ಪ ಮೊತ್ತ ದಾಲಾಗಿರವುದು ಇಂಂಗ್ಲೆಂಡ್ ವಿರುದ್ಧ.

ಟಿ20 ಕ್ರಿಕೆಟ್‌ನಲ್ಲಿ ವೆಸ್ಟ್ ಇಂಡೀಸ್ ಅತ್ಯಲ್ಪ ಮೊತ್ತ
45 vs ಇಂಗ್ಲೆಂಡ್,  2019
55 vs ಇಂಗ್ಲೆಂಡ್,  2021
60 vs ಇಂಗ್ಲೆಂಡ್, 2018
71 vs ಇಂಗ್ಲೆಂಡ್, 2019

T20 World Cup: ಆಫ್ರಿಕಾ ಎದುರು ಆಸ್ಟ್ರೇಲಿಯಾಗೆ ರೋಚಕ ಜಯ

ಟಾಸ್ ಸೋತು ಬ್ಯಾಟಿಂಗ್ ಇಳಿದ ವೆಸ್ಟ್ ಇಂಡೀಸ್ ಕ್ರಿಕೆಟ್ ಇತಿಹಾಸದಲ್ಲಿ ಹಿಂದೆಂದೂ ನೀಡಿದ ಕಳಪೆ ಪ್ರದರ್ಶನ ನೀಡಿತು.  8 ರನ್‌ನಿಂದ ಆರಂಭಗೊಂಡ ವಿಕೆಟ್ ಪತನ ನಿರಂತರವಾಗಿ ಸಾಗಿತು. ಇವಿನ್ ಲಿವಿಸ್ ಕೇವಲ 6 ರನ್ ಸಿಡಿಸಿ ಔಟಾದರು. ಮತ್ತೊರ್ವ ಆರಂಭಿಕ ಲಿಂಡಲ್ ಸಿಮೋನ್ಸ್ 3 ರನ್ ಸಿಡಿಸಿ ನಿರ್ಗಮಿಸಿದರು.

T20 World Cup: ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಗೆಲ್ಲೋರು ಯಾರು..?

ಅಲ್ಪ ಹೋರಾಟ ನೀಡಿದ ಕ್ರಿಸ್ ಗೇಲ್ 13 ರನ್ ಸಿಡಿಸಿ ಹೋರಾಟ ಅಂತ್ಯಗೊಳಿಸಿದರು. ಇಂಗ್ಲೆಂಡ್ ದಾಳಿಗೆ ವಿಂಡೀಸ್ ಬ್ಯಾಟ್ಸ್‌ಮನ್ ಪರದಾಡಿದರು. ರನ್ ಗಳಿಸಲು ಸಾಧ್ಯವಾಗಲಿಲ್ಲ, ವಿಕೆಟ್ ಉಳಿಸಲು ಆಗದೇ ಕೈಚೆಲ್ಲಿ ಕೂತರು. ಶಿಮ್ರೊನ್ ಹೆಟ್ಮೆಯರ್ 9 ರನ್ ಸಿಡಿಸಿ ಔಟಾದರೆ, ಡ್ವೇನ್ ಬ್ರಾವೋ 5 ರನ್ ಸಿಡಿಸಿ ನಿರ್ಗಮಿಸಿದರು.

T20 World Cup 2021:ಕೊಹ್ಲಿ ಸೈನ್ಯಕ್ಕೆ ಬಾಬರ್ ಅಜಮ್ ಎಚ್ಚರಿಕೆ, ಶುರುವಾಯ್ತು ಜಟಾಪಟಿ!

ನಿಕೋಲಸ್ ಪೂರನ್ 1, ನಾಯಕ ಕೀರನ್ ಪೊಲಾರ್ಡ್ 6 ರನ್ ಸಿಡಿಸಿ ಔಟಾದರು. ಆ್ಯಂಡ್ರೆ ರಸೆಲ್ ಹಾಗೂ ಒಬೆಡ್ ಮೆಕೊಯ್ ಡಕೌಟ್ ಆದರು. ರವಿ ರಾಂಪಾಲ್ ವಿಕೆಟ್ ಪತನದೊಂದಿಗೆ ವೆಸ್ಟ್ ಇಂಡೀಸ್ 14.2 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್ ಆಯಿತು.  ಇಂಗ್ಲೆಂಡ್ ತಂಡದ ಬೌಲಿಂಗ್ ಮಾಡಿದ ಎಲ್ಲರೂ ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಆದಿಲ್ ರಶೀದ್ 4 ವಿಕೆಟ್ ಕಬಳಿಸಿದರು. 


 

Follow Us:
Download App:
  • android
  • ios