Asianet Suvarna News Asianet Suvarna News

ಭರ್ಜರಿ ಗೆಲುವಿನೊಂದಿಗೆ T20 World Cup 2021ರಲ್ಲಿ ಇಂಗ್ಲೆಂಡ್ ಶುಭಾರಂಭ!

  • ವೆಸ್ಟ್ ಇಂಡೀಸ್ ವಿರುದ್ಧ ಇಂಗ್ಲೆಂಡ್ ತಂಡಕ್ಕೆ 6 ವಿಕೆಟ್ ಗೆಲುವು
  • ಸುಲಭ ಟಾರ್ಗೆಟ್ ಚೇಸ್ ಮಾಡಲು ಇಂಗ್ಲೆಂಡ್ ಪರದಾಟ
  • 4 ವಿಕೆಟ್ ಕಳೆದುಕೊಂಡು ಗೆಲವು ಸಾಧಿಸಿದ ಇಂಗ್ಲೆಂಡ್
T20 World Cup 2021 england beat west indies by 6 wickets in Dubai ckm
Author
Bengaluru, First Published Oct 23, 2021, 9:58 PM IST
  • Facebook
  • Twitter
  • Whatsapp

ದುಬೈ(ಅ.23): T20 World Cup 2021 ಟೂರ್ನಿಯಲ್ಲಿ ಇಂಗ್ಲೆಂಡ್(England) ಶುಭಾರಂಭ ಮಾಡಿದೆ. ವೆಸ್ಟ್ ಇಂಡೀಸ್ ತಂಡವನ್ನು ಅಲ್ಪಮೊತ್ತಕ್ಕೆ ಕಟ್ಟಿಹಾಕಿದ ಇಂಗ್ಲೆಂಡ್, ಬ್ಯಾಟಿಂಗ್‌ನಲ್ಲೂ ಅಬ್ಬರಿಸಲು  ಸಾಧ್ಯವಾಗಲಿಲ್ಲ. ಆದರೆ ಇಂಗ್ಲೆಂಡ್ 8.2 ಓವರ್‌ಗಳಲ್ಲಿ4  ವಿಕೆಟ್ ಕಳೆದುಕೊಂಡು ಗುರಿ ತಲುಪಿದೆ.  6 ವಿಕೆಟ್ ಗೆಲುವು ಕಂಡ ಇಂಗ್ಲೆಂಡ್ ವಿಶ್ವ ಚುಟುಕು ಸಮರದಲ್ಲಿ ಗೆಲುವಿನೊಂದಿಗೆ ಅಭಿಯಾನ ಆರಂಭಿಸಿದೆ.

T20 World Cup 2021: ಇಂಗ್ಲೆಂಡ್ ದಾಳಿಗೆ ವಿಂಡೀಸ್ ಧೂಳೀಪಟ, 55 ರನ್‌ಗೆ ಆಲೌಟ್!

ಆದಿಲ್ ರಶೀದ್(Adil Rashid) ಸೇರಿದಂತೆ ಇಂಗ್ಲೆಂಡ್ ದಾಳಿಗೆ ತತ್ತರಿಸಿದ ವೆಸ್ಟ್ ಇಂಡೀಸ್(West Indies) ಕೇವಲ 55 ರನ್‌ಗೆ ಆಲೌಟ್ ಆಗಿತ್ತು. ಸುಲಭ ಟಾರ್ಗೆಟ್ ಪಡೆದ ಇಂಗ್ಲೆಂಡ್ ಒಂದು ಹಂತದಲ್ಲಿ ಕೊಂಚ ಒತ್ತಡಕ್ಕೆ ಸಿಲುಕಿತು. ಜೇಸನ್ ರಾಯ್ ಹಾಗೂ ಜೋಸ್ ಬಟ್ಲರ್ ಡೀಸೆಂಟ್ ಆರಂಭ ನೀಡಿದರು. ಆದರೆ ರವಿ ರಾಂಪಾಲ್ ಇವರ ಜೊತೆಯಾಟಕ್ಕೆ ಬ್ರೇಕ್ ಹಾಕಿದರು. 21 ರನ್‌ಗೆ ಇಂಗ್ಲೆಂಡ್ ಮೊದಲ ವಿಕೆಟ್ ಕಳೆದುಕೊಂಡಿತು. 

56 ರನ್ ಟಾರ್ಗೆಟ್ ಕಾರಣ ವಿಕೆಟ್ ಪತನ ಇಂಗ್ಲೆಂಡ್ ತಂಡದ ಮೇಲೆ ಹೆಚ್ಚಿನ ಪ್ರಭಾವ ಬೀರಲಿಲ್ಲ.  ಜೇಸನ್ ಬೆನ್ನಲ್ಲೇ ಜಾನಿ ಬೈರ್‌ಸ್ಟೋ ವಿಕೆಟ್ ಪತನಗೊಂಡಿತು. ಬೈರ್‌ಸ್ಟೋ  9 ರನ್ ಸಿಡಿಸಿ ಔಟಾದರು. 3 ರನ್ ಸಿಡಿಸಿ ಮುನ್ನಗ್ಗುತ್ತಿದ್ದ ಮೊಯಿನ್ ಆಲಿ ರನೌಟ್‍ಗೆ ಬಲಿಯಾದರು. 3ನೇ ವಿಕೆಟ್ ಪತನ ಇಂಗ್ಲೆಂಡ್ ತಂಡದ ಮೇಲೆ ಆತಂಕ ಚಾಯೆ ಮೂಡಿಸಿತು.

T20 World Cup: ಭಾರತ vs ಪಾಕಿಸ್ತಾನ ನಡುವಿನ ಪಂದ್ಯ ಗೆಲ್ಲೋರು ಯಾರು..?

3ನೇ ವಿಕೆಟ್ ಪತನದ ವೇಳೆ ಇಂಗ್ಲೆಂಡ್ ಗೆಲುವಿಗೆ 88 ಎಸೆತಲ್ಲಿ 20 ರನ್ ಅವಶ್ಯಕತೆ ಇತ್ತು. ವೆಸ್ಟ್ ಇಂಡೀಸ್ ಕೂಡ ಅಷ್ಟೇ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿತು.  ಅಲ್ಪಮೊತ್ತವಾದರೂ ವೆಸ್ಟ್ ಇಂಡೀಸ್ ಹೋರಾಟ ಇಂಗ್ಲೆಂಡ್ ತಂಡದ ಸುಲಭ ಗೆಲುವನ್ನು ತಪ್ಪಿಸಿತು. ಲಿಯಾಮ್ ಲಿವಿಂಗ್‌ಸ್ಟೋನ್ ಕೇವಲ 1 ರನ್ ಸಿಡಿಸಿ ಔಟಾದರು.

ಜೋಸ್ ಬಟ್ಲರ್ ಹೋರಾಟ ಮುಂದುವರಿಸಿದರೆ, ಇತರರ ವಿಕೆಟ್ ಪತನ ಬಟ್ಲರ್ ಮೇಲೂ ಪರಿಣಾಮ ಬೀರಿತು. ಹೀಗಾಗಿ ಬಟ್ಲರ್ ರನ್ ವೇಗಕ್ಕೆ ಕಡಿವಾಣ ಬಿತ್ತು. ಸುಲಭ ಟಾರ್ಗೆಟ್‌ನಲ್ಲಿ ಇಂಗ್ಲೆಂಡ್ ಒಂದು ಕ್ಷಣ ಬೆವತು ಹೋಯಿತು. ಒಂದೊಂದು ರನ್ ಗಳಿಕೆಯೂ ಕಷ್ಟವಾಯಿತು. 

ಜೋಸ್ ಬಟ್ಲರ್ ಅಜೇಯ 24 ರನ್ ಸಿಡಿಸಿದರೆ, ಇಯಾನ್ ಮಾರ್ಗನ್ ಅಜೇಯ 7 ರನ್ ಸಿಡಿಸಿದರು. ಈ ಮೂಲಕ ಇಂಗ್ಲೆಂಡ್ 8.2 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗುರಿ ತಲುಪಿತು.  

ವೆಸ್ಟ್ ಇಂಡೀಸ್ ಕಳೆಪೆ ಪ್ರದರ್ಶನ:
ಇಂಗ್ಲೆಂಡ್ ದಾಳಿಗೆ ನಲುಗಿದ ವೆಸ್ಟ್ ಇಂಡೀಸ್ ದಿಟ್ಟ ಹೋರಾಟ ನೀಡುವಲ್ಲಿ ವಿಫಲವಾಯಿತು. ಕ್ರಿಸ್ ಗೇಲ್ ಸಿಡಿಸಿದ 13 ರನ್ ವಿಂಡೀಸ್ ಪರ ದಾಖಲಾದ ಗರಿಷ್ಠ ವೈಯುಕ್ತಿಕ ಮೊತ್ತ. ಇನ್ನುಳಿದವರು ಎರಡಂಕಿ ದಾಟಿಲ್ಲ. ಘಟಾನುಘಟಿ ಬ್ಯಾಟ್ಸ್‌ಮನ್‌ಗಳೆಲ್ಲಾ ಪೆವಿಲಿನಯನ್ ಸೇರಿಕೊಂಡರು. ಹೀಗಾಗಿ ಕೇವಲ 14.2 ಓವರ್‌ಗಳಲ್ಲಿ 55 ರನ್‌ಗೆ ಆಲೌಟ್ ಆಯಿತು.

ವೆಸ್ಟ್ ಇಂಡೀಸ್ 55 ರನ್ ಸಿಡಿಸಿ ಔಟಾಗೋ ಮೂಲಕ ಟಿ20 ವಿಶ್ವಕಪ್ ಟೂರ್ನಿಯಲ್ಲಿ ದಾಖಲಾದ 3ನೇ ಅತಿ ಕಡಿಮೆ ಮೊತ್ತ ಇದಾಗಿದೆ. ವೆಸ್ಟ್ ಇಂಡೀಸ್ ಟಿ20 ಟೂರ್ನಿಯಲ್ಲಿ ಸಿಡಿಸಿದ 2ನೇ ಅತೀ ಕಡಿಮೆ ಮೊತ್ತ ಇದಾಗಿದೆ.  ಟಿ20 ವಿಶ್ವಕಪ್ ಟೂರ್ನಿಯಲ್ಲಿ 2 ಬಾರಿ ಚಾಂಪಿಯನ್ ಆಗಿರುವ ವೆಸ್ಟ್ ಇಂಡೀಸ್ ಹೀನಾಯ ಪ್ರದರ್ಶನ ನೀಡುವ ಮೂಲಕ ಟೀಕೆಗೆ ಗುರಿಯಾಯಿತು.
 

Follow Us:
Download App:
  • android
  • ios