T20 World Cup 2021 ಮೊದಲ ಸೆಮಿಫೈನಲ್ ಹೋರಾಟ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಅಬು ಧಾಬಿಯಲ್ಲಿ ನಡೆಯುತ್ತಿರುವ ಪಂದ್ಯ

ಅಬು ಧಾಬಿ(ನ.10): T20 World Cup 2021 ಅಂತಿಮ ಘಟ್ಟ ತಲುಪಿದೆ. ಮೊದಲ ಸೆಮಿಫೈನಲ್ ಹೋರಾಟದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗುತ್ತಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ನ್ಯೂಜಿಲೆಂಡ್ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ಇಂಗ್ಲೆಂಡ್ ತಂಡದಲ್ಲಿ ಒಂದು ಬದಲಾವಣ ಮಾಡಲಾಗಿದೆ. ಜೇಸನ್ ರಾಯ್ ಬದಲು ಸ್ಯಾಮ್ ಬಿಲ್ಲಿಂಗ್ಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಇಂಗ್ಲೆಂಡ್ ತಂಡ:
ಜೋಸ್ ಬಟ್ಲರ್, ಜಾನಿ ಬೈರ್‌ಸ್ಟೋ, ಡೇವಿಡ್ ಮಲಾನ್, ಮೊಯಿನ್ ಆಲಿ, ಇಯಾನ್ ಮಾರ್ಗನ್(ನಾಯಕ), ಸ್ಯಾಮ್ ಬಿಲ್ಲಿಂಗ್ಸ್, ಲಿಯಾಮ್ ಲಿವಿಂಗ್‌ಸ್ಟೋನ್, ಕ್ರಿಸ್ ವೋಕ್ಸ್, ಕ್ರಿಸ್ ಜೋರ್ಡನ್, ಆದಿಲ್ ರಶೀದ್, ಮಾರ್ಕ್ ವುಡ್

ನ್ಯೂಜಿಲೆಂಡ್ ತಂಡ:
ಮಾರ್ಟಿನ್ ಗಪ್ಟಿಲ್, ಡರಿಲ್ ಮಿಚೆಲ್, ಕೇನ್ ವಿಲಿಯಮ್ಸನ್(ನಾಯಕ), ಡೇವೊನ್ ಕೊನ್ವೆ, ಗ್ಲೆನ್ ಫಿಲಿಪ್ಸ್, ಜೇಮ್ಸ್ ನೀಶಮ್, ಮಿಚೆಲ್ ಸ್ಯಾಂಟ್ನರ್, ಆ್ಯಡಮ್ ಮಿಲ್ನೆ, ಟಿಮ್ ಸೌಥಿ, ಇಶ್ ಸೋಧಿ, ಟ್ರೆಂಟ್ ಬೊಲ್ಟ್

Team India ಮುಖ್ಯ ಕೋಚ್ ರವಿಶಾಸ್ತ್ರಿಗೆ ವಿರಾಟ್ ಕೊಹ್ಲಿ ಭಾವನಾತ್ಮಕ ಅಪ್ಪುಗೆಯ ವಿದಾಯ..!

ಟಾಸ್ ಗೆದ್ದ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ನೇರವಾಗಿ ಬೌಲಿಂಗ್ ಆಯ್ಕೆ ಮಾಡಿಕೊಂಜಿದ್ದಾರೆ. ಇದೇ ವೇಳೆ, ಸೆಕೆಂಡ್ ಇನ್ನಿಂಗ್ಸ್‌ನಲ್ಲಿ ಇಬ್ಬನಿ ತಂಡದ ಮೇಲೆ ಪರಿಣಾಮ ಬೀರುತ್ತದೆ. ಹೀಗಾಗಿ ನಾವು ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದೇವೆ. ಸೂಪರ್ 12 ಹಂತದಲ್ಲಿ ಉತ್ತಮ ಪ್ರದರ್ಶನ ನೀಡಿ ಸೆಮಿಫೈನಲ್ ಹಂತಕ್ಕೆ ಪ್ರವೇಶ ಪಡೆದಿದ್ದೇವೆ. ಇಬ್ಬರು ಅನುಭವಿ ಬೌಲರ್‌ಗಳು ಟೂರ್ನಿಯುದ್ದಕ್ಕೂ ದಿಟ್ಟ ಪ್ರದರ್ಶನ ನೀಡಿದ್ದಾರೆ. ಈ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡಿದ ಫೈನಲ್ ಪ್ರವೇಶಿಸುವ ವಿಶ್ವಾಸದಲ್ಲಿದ್ದೇವೆ ಎಂದು ಕೇನ್ ವಿಲಿಯಮ್ಸನ್ ಹೇಳಿದ್ದಾರೆ.

ರಾಯ್ ಅನುಪಸ್ಥಿತಿ ಕಾಡುತ್ತಿದೆ. ಟೂರ್ನಿಯದ್ದಕ್ಕೂ ಜೇಸನ್ ರಾಯ್ ಇಂಗ್ಲೆಂಡ್ ಗೆಲುವಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಇದೀಗ ಸ್ಯಾಮ್ ಬಿಲ್ಲಿಂಗ್ಸ್ ಮತ್ತೊಂದು ಅವಕಾಶ ಪಡೆದಿದ್ದಾರೆ. ಜಾನಿ ಬೈರ್‌ಸ್ಟೋ ಆರಂಭಿಕನಾಗಿ ಕಣಕ್ಕಿಳಿಯಲಿದ್ದಾರೆ. ನಾವು ನ್ಯೂಜಿಲೆಂಡ್ ತಂಡವನ್ನು ಲಘುವಾಗಿ ಪರಿಗಣಿಸಿಲ್ಲ. ಇಂದಿನ ಪಂದ್ಯದಲ್ಲ ಉತ್ತಮ ಹೋರಾಟ ನೀಡುತ್ತೇವೆ ಎಂದು ನಾಯಕ ಇಯಾನ್ ಮಾರ್ಗನ್ ಹೇಳಿದ್ದಾರೆ.

ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸಿದೆ, ಸೋತ ತಂಡ ಟೂರ್ನಿಯಿಂದ ಹೊರಬೀಳಲಿದೆ. ಇಂಗ್ಲೆಂಡ್ ವಿರುದ್ಧ ಸೇಡು ತೀರಿಸಿಕೊಳ್ಲಲು ನ್ಯೂಜಿಲೆಂಡ್ ಸಜ್ಜಾಗಿದೆ. 2019ರ ಏಕದಿನ ವಿಶ್ವಕಪ್ ಟೂರ್ನಿ ಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್, ಇಂಗ್ಲೆಂಡ್ ವಿರುದ್ಧ ಮುಗ್ಗರಿಸಿತ್ತು. ಈ ಮೂಲಕ ಟ್ರೋಪಿ ಕೈತಪ್ಪಿಹೋಗಿತ್ತು. ಇದೀಗ ಈ ಸೇಡು ತೀರಿಸಿಕೊಳ್ಳಲು ಸಜ್ದಾಗಿದೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ಎರಡೂ ಬಲಿಷ್ಠ ತಂಡಗಳು.ಹೀಗಾಗಿ ರೋಚಕ ಹೋರಾಟ ಏರ್ಪಡಲಿದೆ. ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಮುಖಾಮುಖಿಯಲ್ಲಿ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. 21 ಪಂದ್ಯದಲ್ಲಿ 13 ಪಂದ್ಯವನ್ನು ಇಂಗ್ಲೆಂಡ್ ಗೆದ್ದುಕೊಂಡಿದೆ.

T20 World Cup: Ind vs Pak ದಾಖಲೆಯ ಸಂಖ್ಯೆಯಲ್ಲಿ ಇಂಡೋ-ಪಾಕ್ ಟಿ20 ಪಂದ್ಯ ವೀಕ್ಷಣೆ..!

ಸೂಪರ್ 12 ಹಂತದಲ್ಲಿ ನ್ಯೂಜಿಲೆಂಡ್ ಹಾಗೂ ಇಂಗ್ಲೆಂಡ್ ತಲಾ ಒಂದೊಂದು ಪಂದ್ಯ ಸೋತಿದೆ. ಮೊದಲ ಗುಂಪಿನಲ್ಲಿದ್ದ ಇಂಗ್ಲೆಂಡ್ ತಂಡ ಸೌತ್ ಆಫ್ರಿಕಾ ವಿರುದ್ಧ ಮುಗ್ಗರಿಸಿದ್ದರೆ, ಇತ್ತ ಎರಡನೇ ಗುಂಪಿನಲ್ಲಿದ್ದ ನ್ಯೂಜಿಲೆಂಡ್ ತಂಡ ಪಾಕಿಸ್ತಾನ ವಿರುದ್ದ ಮುಗ್ಗರಿಸಿತ್ತು. ಉಭಯ ತಂಡಗಳು ಆಡಿದ 5 ಪಂದ್ಯದಲ್ಲಿ 4 ಗೆಲುವು ಕಂಡಿದೆ. ಮೊದಲ ಗಂಪಿಲ್ಲಿ ಇಂಗ್ಲೆಂಡ್ ಮೊದಲ ಸ್ಥಾನದಲ್ಲಿದ್ದರೆ, ಎರಡನೇ ಗುಂಪಿನಲ್ಲಿ ನ್ಯೂಜಿಲೆಂಡ್ 2ನೇ ಸ್ಥಾನ ಅಲಂಕರಿಸಿತ್ತು. T20 World Cup 2021 ಟೂರ್ನಿಯಲ್ಲಿ ಸೋಲೇ ಕಾಣದೆ ಸೆಮಿಫೈನಲ್ ಪ್ರವೇಶಿಸಿದ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಿದೆ. ಎರಡನೇ ಗುಂಪಿನಲ್ಲಿದ್ದ ಪಾಕಿಸ್ತಾನ ತಂಡ, ಭಾರತ, ನ್ಯೂಜಿಲೆಂಡ್ ಆಫ್ಘಾನಿಸ್ತಾನ ಸೇರಿದಂತೆ ಎಲ್ಲಾ ತಂಡಗಳನ್ನು ಮಣಿಸಿ, ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡವಾಗಿ ಗುರುತಿಸಿಕೊಂಡಿದೆ.