T20 World Cup: Ind vs Pak ದಾಖಲೆಯ ಸಂಖ್ಯೆಯಲ್ಲಿ ಇಂಡೋ-ಪಾಕ್ ಟಿ20 ಪಂದ್ಯ ವೀಕ್ಷಣೆ..!

* ದಾಖಲೆ ಪ್ರಮಾಣದಲ್ಲಿ ಭಾರತ-ಪಾಕಿಸ್ತಾನ ಹೈವೋಲ್ಟೇಜ್ ಪಂದ್ಯ ವೀಕ್ಷಿಸಿದ ಕ್ರಿಕೆಟ್ ಫ್ಯಾನ್ಸ್

* 16.7 ಕೋಟಿ ಮಂದಿಯಿಂದ ಇಂಡೋ-ಪಾಕ್ ಪಂದ್ಯ ವೀಕ್ಷಣೆ

* ಹಳೆದ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿದ ಇಂಡೋ-ಪಾಕ್ ಪಂದ್ಯ

T20 World Cup India vs Pakistan Clash Most Viewed T20I Match Says Report kvn

ಮುಂಬೈ(ನ.10): ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ (Ind vs Pak) ನಡುವಿನ ಟಿ20 ವಿಶ್ವಕಪ್‌ (ICC T20 World Cup) ಪಂದ್ಯ ಈವರೆಗಿನ ಗರಿಷ್ಠ ವೀಕ್ಷಣೆಯ ಅಂತಾರಾಷ್ಟ್ರೀಯ ಟಿ20 ಪಂದ್ಯ ಎಂಬ ದಾಖಲೆ ಬರೆದಿದೆ. 

ಈ ಪಂದ್ಯವನ್ನು 167 ಮಿಲಿಯನ್‌(16.7 ಕೋಟಿ) ಜನರು ವೀಕ್ಷಿಸಿದ್ದಾರೆ ಎಂದು ಟೂರ್ನಿಯ ಅಧಿಕೃತ ಪ್ರಸಾರಕರಾದ ಸ್ಟಾರ್‌ ಸ್ಪೋರ್ಟ್ಸ್ (Star Sports) ಮಂಗಳವಾರ ಮಾಹಿತಿ ನೀಡಿದೆ. ಟಿ20 ವಿಶ್ವಕಪ್‌ನ ಅರ್ಹತಾ ಸುತ್ತಿನ ಪಂದ್ಯಗಳೂ ಸೇರಿ ಈ ವರೆಗೂ ಒಟ್ಟು 238 ಮಿಲಿಯನ್‌ (23.8 ಕೋಟಿ) ಮಂದಿ ವೀಕ್ಷಿಸಿದ್ದಾರೆ. 2016ರಲ್ಲಿ ಭಾರತ ಹಾಗೂ ವೆಸ್ಟ್‌ ಇಂಡೀಸ್‌ ನಡುವಿನ ಟಿ20 ವಿಶ್ವಕಪ್‌ ಸೆಮಿಫೈನಲ್‌ ಪಂದ್ಯವನ್ನು 136 ಮಿಲಿಯನ್‌(13.6 ಕೋಟಿ) ಜನರು ವೀಕ್ಷಿಸಿದ್ದು ಈವರೆಗಿನ ದಾಖಲೆಯಾಗಿತ್ತು. 

Team India Squad:ನ್ಯೂಜಿಲೆಂಡ್ ವಿರುದ್ಧ T20ಗೆ ಬಲಿಷ್ಠ ತಂಡ ಪ್ರಕಟ, ರೋಹಿತ್ ನಾಯಕ, ಕೊಹ್ಲಿಗೆ ರೆಸ್ಟ್!

ವಿಶ್ವಕಪ್‌ ಟೂರ್ನಿಯಲ್ಲಿ ಮೊದಲ ಬಾರಿಗೆ ಪಾಕ್ ಎದುರು ಸೋಲುಂಡ ಟೀಂ ಇಂಡಿಯಾ: ವಿಶ್ವಕಪ್‌ ಇತಿಹಾಸದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಈ ಹಿಂದೆ ಒಟ್ಟು 12 ಬಾರಿ ಮುಖಾಮುಖಿಯಾಗಿದ್ದವು. ವಿಶ್ವಕಪ್ ಟೂರ್ನಿಯಲ್ಲಿ ಆಡಿದ ಎಲ್ಲಾ ಪಂದ್ಯಗಳಲ್ಲೂ ಭಾರತ ಕ್ರಿಕೆಟ್ ತಂಡವು (Indian Cricket Team) ಸಂಪೂರ್ಣ ಪ್ರಾಬಲ್ಯ ಮೆರೆದಿತ್ತು. ಹೀಗಾಗಿ 2021ರ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯು ಸಾಕಷ್ಟು ಕುತೂಹಲ ಹುಟ್ಟುಹಾಕಿತ್ತು. ಅಕ್ಟೋಬರ್ 24ರಂದು ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಈ ಹೈವೋಲ್ಟೇಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿತ್ತು. ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ (Team India) 7 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತ್ತು. ಇದಕ್ಕುತ್ತರವಾಗಿ ಪಾಕಿಸ್ತಾನ ತಂಡವು 17.5 ಓವರ್‌ಗಳಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ ಗೆಲುವಿನ ನಗೆ ಬೀರಿತ್ತು.

2021ನೇ ಸಾಲಿನ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಬಾಬರ್ ಅಜಂ (Babar Azam) ನೇತೃತ್ವದ ಪಾಕಿಸ್ತಾನ ಕ್ರಿಕೆಟ್ ತಂಡವು (Pakistan Cricket Team) ಸೂಪರ್‌ 12 ಹಂತದಲ್ಲಿ ಆಡಿದ 5 ಪಂದ್ಯಗಳಲ್ಲೂ ಗೆಲುವು ಸಾಧಿಸಿ, ಅಜೇಯವಾಗಿ ಸೆಮಿಫೈನಲ್‌ಗೆ ಲಗ್ಗೆಯಿಟ್ಟಿದೆ. ಇನ್ನೊಂದಡೆ ವಿರಾಟ್ ಕೊಹ್ಲಿ (Virat Kohli) ನೇತೃತ್ವದ ಟೀಂ ಇಂಡಿಯಾ 3 ಗೆಲುವು ಹಾಗೂ 2 ಸೋಲುಗಳನ್ನು ಕಾಣುವ ಮೂಲಕ ಲೀಗ್ ಹಂತದಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದೆ. 

24 ವರ್ಷ ಬಳಿಕ ಪಾಕ್‌ ಪ್ರವಾಸಕ್ಕೆ ಆಸ್ಪ್ರೇಲಿಯಾ!

ಲಾಹೋರ್‌: 24 ವರ್ಷಗಳಲ್ಲೇ ಮೊದಲ ಬಾರಿ ಆಸ್ಪ್ರೇಲಿಯಾ ಕ್ರಿಕೆಟ್‌ ತಂಡ (Australia Cricket Team) ಪಾಕಿಸ್ತಾನ ಪ್ರವಾಸ ಕೈಗೊಳ್ಳಲು ಒಪ್ಪಿಗೆ ಸೂಚಿಸಿದೆ ಎಂದು ಪಾಕಿಸ್ತಾನ ಕ್ರಿಕೆಟ್‌ ಮಂಡಳಿ(ಪಿಸಿಬಿ) (Pakistan Cricket Board) ಘೋಷಿಸಿದ್ದು, ಕ್ರಿಕೆಟ್‌ ಆಸ್ಪ್ರೇಲಿಯಾ ಈ ವಿಷಯವನ್ನು ಖಚಿತಪಡಿಸಿದೆ. ಮುಂದಿನ ವರ್ಷ ಮಾರ್ಚ್‌ 3ರಿಂದ ಏಪ್ರಿಲ್‌ 5ರವರೆಗೆ 3 ಟೆಸ್ಟ್‌, 3 ಏಕದಿನ ಹಾಗೂ 1 ಟಿ20 ಪಂದ್ಯ ನಡೆಯಲಿದೆ.

T20 World Cup 2021: ಸೋಲಿಲ್ಲದ ಸರದಾರನಾಗಿ ಸೆಮೀಸ್ ಪ್ರವೇಶಿಸಿದ ಪಾಕಿಸ್ತಾನ!

ಇತ್ತೀಚೆಗಷ್ಟೇ ಭದ್ರತಾ ಕಾರಣ ನೀಡಿ ನ್ಯೂಜಿಲೆಂಡ್‌ ಹಾಗೂ ಇಂಗ್ಲೆಂಡ್‌ ತಂಡಗಳು ಸರಣಿ ರದ್ದುಗೊಳಿಸಿದ ಬಳಿಕ ಪಾಕಿಸ್ತಾನಕ್ಕೆ ತೆರಳಲು ಆಸ್ಪ್ರೇಲಿಯಾ ಒಪ್ಪಿಕೊಂಡಿರುವುದು ಅಚ್ಚರಿ ಮೂಡಿಸಿದೆ. ಈ ಹಿಂದೆ ಭದ್ರತಾ ಸಮಸ್ಯೆ ಕಾರಣ ನೀಡಿ ಆಸ್ಪ್ರೇಲಿಯಾ, ಬಾಂಗ್ಲಾದೇಶ ಪ್ರವಾಸವನ್ನು ಮುಂದೂಡಿತ್ತು. ಆರ್ಥಿಕ ನಷ್ಟ ಎದುರಿಸುತ್ತಿರುವ ಪಿಸಿಬಿಗೆ ಆಸ್ಪ್ರೇಲಿಯಾ ವಿರುದ್ಧದ ಸರಣಿ ಅತ್ಯಂತ ಮಹತ್ವದೆನಿಸಿದೆ.

ಆಸ್ಪ್ರೇಲಿಯಾ ಕೊನೆಯ ಬಾರಿ 1998ರಲ್ಲಿ ಪಾಕಿಸ್ತಾನದಲ್ಲಿ ಕ್ರಿಕೆಟ್‌ ಆಡಿತ್ತು. ಬಳಿಕ 2002ರ ಆಸೀಸ್‌ ಸರಣಿಗೂ ಮುನ್ನ ಕರಾಚಿಯಲ್ಲಿ ಆತ್ಮಹತ್ಯಾ ಬಾಂಬ್‌ ದಾಳಿ ನಡೆದಿದ್ದರಿಂದ ಸರಣಿಯನ್ನು ಕೊಲಂಬೊ ಹಾಗೂ ಯುಎಇಗೆ ಸ್ಥಳಾಂತರಿಸಲಾಗಿತ್ತು.

Latest Videos
Follow Us:
Download App:
  • android
  • ios