ಅಬ್ಬರಿಸಿದ ಪಾಕಿಸ್ತಾನ ನಾಯಕ ಬಾಬರ್, ರಿಜ್ವಾನ್, ಹಫೀಜ್ ನಮಿಬಿಯಾ ವಿರುದ್ದ ಪಾಕಿಸ್ತಾನ 189 ರನ್ ಗೆಲುವಿನ ಮೂಲಕ ಸೆಮಿಫೈನಲ್ ಪ್ರವೇಶಕ್ಕೆ ಪಾಕ್ ಸಜ್ಜು
ಅಬು ಧಾಬಿ(ನ.02): ನಾಯಕ ಬಾಬರ್ ಅಜಮ್(Babar Azam) ಸಿಡಿಸಿದ 70 ರನ್ ಹಾಗೂ ಮೊಹಮ್ಮದ್ ರಿಜ್ವಾನ್(Mohammad Rizwan) ಸಿಡಿಸಿದ 73 ರನ್ ನೆರವಿನಿಂದ ನಮಿಬಿಯಾ ವಿರುದ್ಧ ಪಾಕಿಸ್ತಾನ(Pakistan) 2 ವಿಕೆಟ್ ನಷ್ಟಕ್ಕೆ 189 ರನ್ ಸಿಡಿಸಿದೆ. ಪಾಕಿಸ್ತಾನ ಬಲಿಷ್ಠ ಬೌಲಿಂಗ್ ದಾಳಿ ಮುಂದೆ ನಮಿಬಿಯಾ(Namibia) ಇದೀಗ ರನ್ ಚೇಸ್ ಮಾಡಲು ಸಜ್ಜಾಗಿದೆ.
T20 World Cup: ಬಾಂಗ್ಲಾದೇಶ ಎದುರು ಸುಲಭ ಗೆಲುವು ದಾಖಲಿಸಿದ ದಕ್ಷಿಣ ಆಫ್ರಿಕಾ
ಟಾಸ್(Toss) ಗೆದ್ದು ಬ್ಯಾಟಿಂಗ್(Batting) ಆಯ್ಕೆ ಮಾಡಿಕೊಂಡ ಪಾಕಿಸ್ತಾನ, ತಂಡದ ಬ್ಯಾಟಿಂಗ್ ಸ್ಟ್ರೆಂಥ್ ಪರೀಕ್ಷಿಸಲು ಮುಂದಾಯಿತು. ಇನ್ನಿಂಗ್ಸ್ ಆರಂಭಿಸಿದ ಪಾಕಿಸ್ತಾನಕ್ಕೆ ಮೊಹಮ್ಮದ್ ರಿಜ್ವಾನ್ ಹಾಗೂ ನಾಯಕ ಬಾಬರ್ ಅಜಮ್ ಶತಕದ ಜೊತೆಯಾಟಕ್ಕೆ ನಮಿಬಿಯಾ ಸುಸ್ತಾಯಿತು. ಬಾಬರ್ ಅಬ್ಬರದಿಂದ ಪಾಕಿಸ್ತಾನ ರನ್ ವೇಗ ಹೆಚ್ಚಾಯಿತು.
ಅಬ್ಬರಿಸಿದ ಬಾಬರ್ ಅಜಮ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಮೊಹಮ್ಮದ್ ರಿಜ್ವಾನ್ ಉತ್ತಮ ಸಾಥ್ ನೀಡಿದರು. ಬಾಬರ್ 49 ಎಸೆತದಲ್ಲಿ 7 ಬೌಂಡರಿ ಮೂಲಕ 70 ರನ್ ಸಿಡಿಸಿ ಔಟಾದರು. ಮೊದಲ ವಿಕೆಟ್‌ಗೆ ಬಾಬರ್ ಹಾಗೂ ರಿಜ್ವಾನ್ ಜೋಡಿ 113 ರನ್ ಜೊತೆಯಾಟ ನೀಡಿದರು.
T20 World Cup: ಟೀಂ ಇಂಡಿಯಾದಲ್ಲಿ ಸಂವಹನದ ಕೊರತೆ..?
ಮೊಹಮ್ಮದ್ ರಿಜ್ವಾನ್ ಹೋರಾಟ ಮುಂದುವರಿಸಿದರೆ, ಇತ್ತ ಫಕರ್ ಜಮಾನ್(Fakhar Zaman) ಕೇವಲ 5 ರನ್ ಸಿಡಿಸಿ ಔಟಾದರು. ಮೊಹಮ್ಮದ್ ರಿಜ್ವಾನ್ ಹಾಗೂ ಮೊಹಮ್ಮದ್ ಹಫೀಜ್(Mohammad Hafeez) ಜೊತೆಯಾಟದಿಂದ ಪಾಕಿಸ್ತಾನ ಮತ್ತೆ ಚೇತರಿಸಿಕೊಂಡಿತು. ಈ ಮೂಲಕ ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿತು.
ಮೊಹಮ್ಮದ್ ರಿಜ್ವಾನ್ ಹಾಫ್ ಸೆಂಚುರಿ ಸಿಡಿಸಿದರು. ಇತ್ತ ಹಫೀಜ್ 200ರ ಸ್ಟ್ರೈಕ್‌ರೇಟ್‌ನಲ್ಲಿ ಅಬ್ಬರಿಸಿದರು. ರಿಜ್ವಾನ್ ಅಜೇಯ 79 ರನ್ ಹಾಗೂ ಹಫೀಜ್ ಅಜೇಯ 32 ರನ್ ಸಿಡಿಸಿದರು. ಈ ಮೂಲಕ ಪಾಕಿಸ್ತಾನ 2 ವಿಕೆಟ್ ಕಳೆದುಕೊಂಡು 189 ರನ್ ಸಿಡಿಸಿತು.
T20 World Cup: ಪ್ರಸಾರಕರ ಲಾಭಕ್ಕಾಗಿ ICC, BCCIನಿಂದ ಭಾರತಕ್ಕೆ ಅನ್ಯಾಯ?
ನಮಿಬಿಯಾ ಗೆಲುವಿಗೆ 190 ರನ್ ಬೃಹತ್ ನೀಡಿರುವ ಪಾಕಿಸ್ತಾನ ಭರ್ಜರಿ ಗೆಲುವಿನ ವಿಶ್ವಾಸದಲ್ಲಿದೆ. ಈ ಮೂಲಕ ಅಂಕಗಳೊಂದಿಗೆ ನೆಟ್ ರನ್‌ರೇಟ್ ಹೆಚ್ಚಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದೆ.
ಅಂಕಪಟ್ಟಿ:
T20 World Cup 2021 ವಿಶ್ವಕಪ್ ಟೂರ್ನಿಯಲ್ಲಿ ಎರಡನೇ ಗುಂಪಿನಲ್ಲಿರುವ ಪಾಕಿಸ್ತಾನ ಹಾಗೂ ನಮಿಬಿಯಾ ಅಂಕಪಟ್ಟಿಯಲ್ಲಿ ಕ್ರಮವಾಗಿ 1 ಮತ್ತು 4ನೇ ಸ್ಥಾನದಲ್ಲಿದೆ. ಪಾಕಿಸ್ತಾನ ಆಡಿದ 3 ಪಂದ್ಯದಲ್ಲೂ ಗೆಲುವು ಸಾಧಿಸಿ ಮೊದಲ ಅಂಕ ಸಂಪಾದಿಸಿದೆ. ಇತ್ತ ನಮಿಬಿಯಾ 1 ಗೆಲುವು ಹಾಗೂ 2 ಸೋಲಿನ ಮೂಲಕ 4ನೇ ಸ್ಥಾನದಲ್ಲಿದೆ.
ಆಫ್ಘಾನಿಸ್ತಾನ(Afghanistan) ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದರರೆ, ನ್ಯೂಜಿಲೆಂಡ್(New zealand) 3ನೇ ಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ(Team India) ಆಡಿದ ಎರಡಲ್ಲೂ ಸೋಲು ಅನುಭವಿಸುವ ಮೂಲಕ 5ನೇ ಸ್ಥಾನದಲ್ಲಿದೆ. ಇನ್ನು ಅಂತಿಮ ಸ್ಥಾನಕ್ಕ ಸ್ಕಾಟ್‌ಲೆಂಡ್ ಕುಸಿದಿದೆ.
ಪಾಕಿಸ್ತಾನ ಈ ಬಾರಿ ಟೂರ್ನಿಯಲ್ಲಿ ಬಲಿಷ್ಠ ತಂಡವಾಗಿ ಗುರುತಿಸಿಕೊಂಡಿದೆ. ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ 10 ವಿಕೆಟ್ ಗೆಲುವು ಕಂಡಿತ್ತು. ನ್ಯೂಜಿಲೆಂಡ್ ವಿರುದ್ಧ 5 ವಿಕೆಟ್ ಗೆಲುವು ಕಂಡಿದೆ. ಆಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ 5 ವಿಕೆಟ್ ಗೆಲುವು ದಾಖಲಿಸಿದೆ. ಈ ಮೂರು ಗೆಲುವು ಚೇಸಿಂಗ್‌ನಿಂದ ಲಭ್ಯವಾಗಿದೆ. ಹೀಗಾಗಿ ಇಂದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಸೆಮಿಫೈನಲ್ ಪ್ರವೇಶ:
ಸತತ 3 ಗೆಲುವು ಕಂಡಿರುವ ಪಾಕಿಸ್ತಾನ ಇಂದು ನಮಿಬಿಯಾ ವಿರುದ್ಧ ಗೆಲುವು ಸಾಧಿಸಿದರೆ, ಸೆಮಿಫೈನಲ್ ಪ್ರವೇಶ ಖಚಿತವಾಗಲಿದೆ. ಈ ಮೂಲಕ ಇಂಗ್ಲೆಂಡ್ ಬಳಿಕ ಸೆಮೀಸ್ ಪ್ರವೇಶ ಖಚಿತ ಪಡಿಸಿದ ಎರಡನೇ ತಂಡ ಅನ್ನೋ ಹೆಗ್ಗಳಿಕೆಗೆ ಪಾಕಿಸ್ತಾನ ಪಾತ್ರವಾಗಲಿದೆ.
