Asianet Suvarna News Asianet Suvarna News

T20 World Cup: ಪ್ರಸಾರಕರ ಲಾಭಕ್ಕಾಗಿ ICC, BCCIನಿಂದ ಭಾರತಕ್ಕೆ ಅನ್ಯಾಯ?

*ಜಾಹೀರಾತು, ವೀಕ್ಷಕರ ಸಂಖ್ಯೆಗೆ ಹೆಚ್ಚು ಪ್ರಾಮುಖ್ಯತೆ?
*ಭಾರತದ ಪಂದ್ಯಗಳ ನಡುವೆ  1 ವಾರ ಅಂತರ
*ಲೀಗ್‌ನಲ್ಲೇ ಹೊರಬೀಳೋ ಭೀತಿಯಲ್ಲಿ ಕೊಹ್ಲಿ ಪಡೆ

ICC and BCCI doing Injustice to Indian cricket team to gain profits through Media Rights?
Author
Bengaluru, First Published Nov 2, 2021, 8:49 AM IST
  • Facebook
  • Twitter
  • Whatsapp

ದುಬೈ (ನ. 2): ಟೀಂ ಇಂಡಿಯಾದ (Team India) ಸೋಲಿನಲ್ಲಿ ಐಸಿಸಿ(ICC), ಬಿಸಿಸಿಐ(BCCI) ಪಾತ್ರವೂ ಇದೆಯಾ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕೆಂದರೆ ಪ್ರಸಾರ ಹಕ್ಕು ಹೊಂದಿರುವ ಸಂಸ್ಥೆಗೆ ಲಾಭವಾಗಲಿ ಎನ್ನುವ ಕಾರಣಕ್ಕೆ ಟೂರ್ನಿಯ ಆಯೋಜಕರಾದ ಐಸಿಸಿ ಹಾಗೂ ಆತಿಥ್ಯ ಹಕ್ಕು ಹೊಂದಿರುವ ಬಿಸಿಸಿಐ, ಭಾರತದ ಎಲ್ಲಾ ಪಂದ್ಯಗಳನ್ನೂ ಸಂಜೆ 7.30ಕ್ಕೆ (ಭಾರತೀಯ ಕಾಲಮಾನ) ನಿಗದಿಪಡಿಸಿವೆ. ಬೇರೆಲ್ಲಾ ತಂಡಗಳು ಕನಿಷ್ಠ ಒಂದು ಪಂದ್ಯವನ್ನು ಮಧ್ಯಾಹ್ನ ಆಡಲಿವೆ. ಸಂಜೆ (Evening) ವೇಳೆ ಇಬ್ಬನಿ ಬೀಳುವ ಕಾರಣ ಟಾಸ್‌ ಗೆಲ್ಲುವ ತಂಡ ಮೊದಲು ಫೀಲ್ಡ್‌ ಮಾಡಲಿದೆ. ಟಾಸ್‌ (Toss) ಸೋಲುವ ತಂಡಕ್ಕೆ ಪಂದ್ಯದಲ್ಲಿ ಸೋಲೇ ಗತಿ ಎನ್ನುವಂತಾಗಿದೆ. ಈ ವೇಳಾಪಟ್ಟಿ ಭಾರತ ತಂಡಕ್ಕೆ ಮುಳುವಾಗಿದೆ.

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

ಮಧ್ಯಾಹ್ನ ಪಂದ್ಯ ನಡೆದರೆ ಇಬ್ಬನಿ ಸಮಸ್ಯೆ ಇರುವುದಿಲ್ಲ. ಎರಡೂ ಇನ್ನಿಂಗ್ಸ್‌ಗಳು ಸ್ಪರ್ಧಾತ್ಮಕವಾಗುತ್ತವೆ. ಆದರೆ ಮಧ್ಯಾಹ್ನದ ಪಂದ್ಯಗಳಿಗೆ ವೀಕ್ಷಕರ (Viewers) ಸಂಖ್ಯೆ ಕಡಿಮೆ. ಅಲ್ಲದೇ ಪ್ರೈಮ್‌ ಟೈಂನಲ್ಲಿ (Prime Time) ಅಂದರೆ ಸಂಜೆ 7ರ ನಂತರ ನಡೆಯುವ ಪಂದ್ಯಗಳಿಗೆ ವೀಕ್ಷಕರೂ ಹೆಚ್ಚು, ಜಾಹೀರಾತು ಮೊತ್ತವೂ ಹೆಚ್ಚು. ಹೀಗಾಗಿ ಭಾರತದ ಎಲ್ಲಾ ಪಂದ್ಯಗಳನ್ನು ಸಂಜೆ ನಡೆಸಲಾಗುತ್ತಿದೆ ಎಂದು ವಿಶ್ಲೇಷಿಸಲಾಗಿದೆ. ಎರಡೂ ಮಹತ್ವದ ಪಂದ್ಯದಲ್ಲಿ ಭಾರತ ಟಾಸ್‌ ಸೋತು ಪಂದ್ಯವನ್ನು ಕೂಡ ಕೈಚೆಲ್ಲಿದೆ. ಕನಿಷ್ಟ ಒಂದು ಪಂದ್ಯವಾದರೂ ಮಧ್ಯಾಹ್ನ ಇದ್ದಿದ್ದರೆ ಸಮಬಲದ ಪೈಪೋಟಿ ನೀಡಬಹುದಿತ್ತು ಎಂದು ಹೇಳಲಾಗಿದೆ. 

ಪಂದ್ಯಗಳ ನಡುವೆ  1 ವಾರ ಅಂತರ!

ಭಾರತದ ಮೊದಲೆರಡು ಪಂದ್ಯಗಳ ನಡುವೆ ಒಂದು ವಾರ ಅಂತರವಿತ್ತು. ಎರಡೂ ಮಹತ್ವದ ಪಂದ್ಯಗಳು. ವೀಕ್ಷಕರ ಸಂಖ್ಯೆ, ಜಾಹೀರಾತು ಮೊತ್ತ ಇವುಗಳಿಗೆ ಪ್ರಾಮುಖ್ಯತೆ ನೀಡಿ ಪಂದ್ಯಗಳನ್ನು ಭಾನುವಾರವೇ (Sunday) ನಿಗದಿ ಮಾಡಲಾಗಿದೆ. ಎರಡು ಪಂದ್ಯಗಳ ನಡುವೆ ಅಂತರ ಹೆಚ್ಚಾದ ಕಾರಣ, ಕೊಹ್ಲಿ ಪಡೆ ಆವೇಗ, ತೀವ್ರತೆ ಕಾಯ್ದುಕೊಳ್ಳುವಲ್ಲಿ ವಿಫಲವಾಯಿತು ಎನ್ನುವ ಆರೋಪವೂ ಕೇಳಿಬರುತ್ತಿವೆ.

IPL Auction: BCCI ನಿಂದ ಐಪಿಎಲ್ ಹರಾಜಿನ ಅಧಿಕೃತ ರೂಲ್ಸ್‌ ಪ್ರಕಟ..!

ದುಬೈನಲ್ಲೇ 4 ಪಂದ್ಯ! 

ಇನ್ನು ಭಾರತ ಸೂಪರ್‌-12 ಹಂತದ 5 ಪಂದ್ಯಗಳಲ್ಲಿ 4 ಪಂದ್ಯಗಳನ್ನು ದುಬೈನಲ್ಲಿ (Dubai) ಆಡಲಿದೆ. ಯುಎಇಯ (UAE) 3 ಕ್ರೀಡಾಂಗಣಗಳಲ್ಲಿ ದುಬೈ ದೊಡ್ಡ ಕ್ರೀಡಾಂಗಣ. ಪ್ರೇಕ್ಷಕರಿಗೆ ಪ್ರವೇಶ ನೀಡುತ್ತಿರುವ ಕಾರಣ, ಹೆಚ್ಚು ಪ್ರೇಕ್ಷಕರು ಆಗಮಿಸಿದರೆ ಟಿಕೆಟ್‌ ಮಾರಾಟದಿಂದ ಹೆಚ್ಚು ಸಂಪಾದಿಸಬಹುದು ಎನ್ನುವ ಲೆಕ್ಕಾಚಾರದೊಂದಿಗೆ ದುಬೈನಲ್ಲೇ ಪಂದ್ಯಗಳನ್ನು ನಡೆಸಲಾಗುತ್ತಿದೆ ಎನ್ನಲಾಗಿದೆ.

ಭಾರತ ಲೀಗ್‌ನಲ್ಲೇ ಹೊರಬಿದ್ದರೆ ನಷ್ಟ?

ನ.8ರಂದು ಭಾರತ ಲೀಗ್‌ ಹಂತದ ತನ್ನ ಕೊನೆಯ ಪಂದ್ಯವನ್ನಾಡಲಿದೆ. ಭಾರತ ತಂಡ ಸೆಮೀಸ್‌ ಪ್ರವೇಶಿಸದಿದ್ದರೆ ಕೊನೆಯ ಒಂದು ವಾರ ವಿಶ್ವಕಪ್‌ ವೀಕ್ಷಕರ ಸಂಖ್ಯೆಯಲ್ಲಿ ದೊಡ್ಡ ಕುಸಿತವಾಗಬಹುದು. ಜಾಹೀರಾತು ನೀಡುವ ಸಂಸ್ಥೆಗಳು ಮೊತ್ತ ಕಡಿತಗೊಳಿಸುವಂತೆ ಪ್ರಸಾರಕರನ್ನು ಆಗ್ರಹಿಸುವ ಸಾಧ್ಯತೆಯೂ ಇದೆ. ಕ್ರೀಡಾಂಗಣಗಳಿಗೆ ಬರುವ ಜನರ ಸಂಖ್ಯೆಯೂ ಕಡಿಮೆಯಾಗಬಹುದು ಎನ್ನುವ ಆತಂಕ ಬಿಸಿಸಿಐ, ಐಸಿಸಿಗೆ ಶುರುವಾಗಿದೆ ಎನ್ನಲಾಗಿದೆ.

ಅನುಮಾನ ಬೇಡ, ಈಗಲೂ ಇದೆ ಟೀಂ ಇಂಡಿಯಾಗೆ ಸೆಮೀಸ್‌ಗೇರುವ ಅವಕಾಶ..!

ವಿಶ್ವಕಪ್‌ನಲ್ಲಿ ಟೀಂ ಇಂಡಿಯಾ ಕಳಪೆ ಪ್ರದರ್ಶನಕ್ಕೆ ಕಾರಣವೇನು..?

ಟಿ20 ವಿಶ್ವಕಪ್‌ಗೂ (T20 World Cup)ಮುನ್ನ ಐಪಿಎಲ್‌ ನಡೆಸಿದರೆ ಭಾರತ ತಂಡಕ್ಕೆ ಲಾಭವಾಗಲಿದೆ. ಆಟಗಾರರು ಲಯ ಕಂಡುಕೊಳ್ಳಲಿದ್ದಾರೆ ಎನ್ನುವ ಕಲ್ಪನೆ ಇದೆ. ಆದರೆ ಇದು ಸುಳ್ಳು ಎನ್ನುತ್ತವೆ ಅಂಕಿ-ಅಂಶಗಳು. ಐಪಿಎಲ್‌ (IPL) ಮುಗಿದ ಬೆನ್ನಲ್ಲೇ ಟಿ20 ವಿಶ್ವಕಪ್‌ ನಡೆದಾಗಲೆಲ್ಲಾ ಭಾರತ ತಂಡ ನಾಕೌಟ್‌ ಹಂತಕ್ಕೇರುವಲ್ಲಿ ವಿಫಲವಾಗಿದೆ.

ಸೇಮಿಸ್ ಕನಸು ಬಲುದೂರ ಎಂದ ಸೆಹ್ವಾಗ್ ಕೊಟ್ಟ ಅಂಕಿ ಅಂಶ

ಈ ಬಾರಿಯೂ ಐಪಿಎಲ್‌ ಅನುಭವ ಭಾರತ ತಂಡದ (Indian cricket Team) ಕೈಹಿಡಿಯುತ್ತಿಲ್ಲ. ತಂಡ ಲೀಗ್‌ನಲ್ಲೇ ಹೊರಬೀಳುವ ಪರಿಸ್ಥಿತಿ ತಂದುಕೊಂಡಿದೆ. ಈ ಹಿಂದೆ 2 ಬಾರಿ ಐಪಿಎಲ್‌ ಆವೃತ್ತಿ ಮುಗಿದ 10 ದಿನಗಳೊಳಗೆ ಟಿ20 ವಿಶ್ವಕಪ್‌ ನಡೆದಿತ್ತು. ಆ ಎರಡೂ ವರ್ಷವೂ ಭಾರತ ನಾಕೌಟ್‌ ಪ್ರವೇಶಿಸಲಿಲ್ಲ. ಐಪಿಎಲ್‌ ಟೂರ್ನಿಯಿಂದ ದಣಿದಿದ್ದ ಆಟಗಾರರು ಕಳಪೆ ಪ್ರದರ್ಶನ ತೋರಿದ್ದರು.

Follow Us:
Download App:
  • android
  • ios