Asianet Suvarna News Asianet Suvarna News

T20 World Cup : ಕಿವೀಸ್‌ ವಿರುದ್ಧ ಸೇಡಿಗೆ ಕಾಯುತ್ತಿದೆ ಪಾಕಿಸ್ತಾನ!

*ಸತತ 2ನೇ ಗೆಲುವಿನ ಮೇಲೆ ಪಾಕಿಸ್ತಾನ ಕಣ್ಣು!
*ಇತ್ತೀಚೆಗೆ ಪಾಕ್‌ ಸರಣಿ ರದ್ದುಗೊಳಿಸಿದ್ದ ನ್ಯೂಜಿಲೆಂಡ್‌
*ಭಾರತ ವಿರುದ್ದ ಐತಿಹಾಸಿಕ ಗೆಲುವು ಸಾಧಿಸಿದ್ದ ಪಾಕಿಸ್ತಾನ

T20 World Cup 19th Match Between Pakistan and New Zealand in Sharjah
Author
Bengaluru, First Published Oct 26, 2021, 7:29 AM IST
  • Facebook
  • Twitter
  • Whatsapp

ಶಾರ್ಜಾ(ಅ. 26) : ಟಿ20 ವಿಶ್ವಕಪ್‌ನ (T20 World Cup) ಆರಂಭಿಕ ಪಂದ್ಯದಲ್ಲಿ ಸಾಂಪ್ರಾದಾಯಿಕ ಎದುರಾಳಿ ಭಾರತ ವಿರುದ್ಧ ಐತಿಹಾಸಿಕ ಗೆಲುವು ಸಾಧಿಸಿದ್ದ ಪಾಕಿಸ್ತಾನ (Pakistan), ಕೇವಲ ಒಂದು ದಿನ ವಿಶ್ರಾಂತಿ ಬಳಿಕ ಇಂದು (ಅ. 26)  ನ್ಯೂಜಿಲೆಂಡ್‌ (New Zealand) ವಿರುದ್ಧ ಸೆಣಸಾಡಲಿದೆ. ಮಾಜಿ ಚಾಂಪಿಯನ್‌ ಪಾಕಿಸ್ತಾನ, ಯುಎಇಯಲ್ಲಿ ಅತ್ಯುತ್ತಮ ದಾಖಲೆ ಹೊಂದಿದ್ದು, ಕಿವೀಸ್‌ ವಿರುದ್ಧವೂ ಗೆದ್ದು ಅಗ್ರಸ್ಥಾನ ಭದ್ರಪಡಿಸುವ ಯೋಚನೆಯಲ್ಲಿದೆ. ಈ ಪಂದ್ಯ ಗೆದ್ದರೆ ಪಾಕಿಸ್ತಾನ ಸೆಮಿಫೈನಲ್‌ ಪ್ರವೇಶಿಸುವುದು ಬಹುತೇಕ ಖಚಿತ ಎನಿಸಲಿದೆ.

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

ಅಲ್ಲದೇ, ಇತ್ತೀಚೆಗಷ್ಟೇ ಭದ್ರತಾ ಸಮಸ್ಯೆ ಕಾರಣ ನೀಡಿ ಪಂದ್ಯ ಆರಂಭಕ್ಕೆ ಕೆಲವೇ ಗಂಟೆಗಳ ಮೊದಲು ಸರಣಿಯನ್ನೇ ರದ್ದುಗೊಳಿಸಿ ತವರಿಗೆ ವಾಪಸಾಗಿದ್ದ ನ್ಯೂಜಿಲೆಂಡ್‌ ವಿರುದ್ಧ ಸೇಡು ತೀರಿಸಲು ಪಾಕ್‌ ಆಟಗಾರರು ಕಾಯುತ್ತಿದ್ದಾರೆ. ಎಲ್ಲಾ ಮಾದರಿಯಲ್ಲೂ ಸೂಪರ್‌ಸ್ಟಾರ್‌ ಅಗಿರುವ ಬಾಬರ್‌ ಆಜಂ (Babar Azam) ಹಾಗೂ ಉತ್ಕೃಷ್ಟಲಯದಲ್ಲಿರುವ ಮೊಹಮದ್‌ ರಿಜ್ವಾನ್‌ ಪಾಕ್‌ ಬ್ಯಾಟಿಂಗ್‌ಗೆ ಬಲವಾಗಿದ್ದಾರೆ. ಅನುಭವಿಗಳಾದ ಶೋಯಿಬ್‌ ಮಲಿಕ್‌, ಮೊಹಮದ್‌ ಹಫೀಜ್‌, ಫಖರ್‌ ಜಮಾನ್‌ ಸೇರಿದಂತೆ ಹಲವು ಬ್ಯಾಟಿಂಗ್‌ ತಾರೆಗಳು ತಂಡದಲ್ಲಿದ್ದಾರೆ. ಕಳೆದ ಪಂದ್ಯದಲ್ಲಿ ತಮ್ಮ ಅತ್ಯುತ್ತಮ ಬೌಲಿಂಗ್‌ ಮೂಲಕ ಭಾರತದ ಬ್ಯಾಟರ್‌ಗಳ ಬೆವರಿಳಿಸಿದ ಶಾಹೀನ್‌ ಅಫ್ರಿದಿ ಕಿವೀಸ್‌ಗೂ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ಇದೆ. ಇವರ ಜೊತೆ ಹ್ಯಾರಿಸ್‌ ರೌಫ್‌, ಇಮಾದ್‌ ವಸೀಂ, ಶದಾಬ್‌ ಖಾನ್‌ ತಮ್ಮ ಬೌಲಿಂಗ್‌ ಅಸ್ತ್ರವನ್ನು ಪ್ರಯೋಗಿಸಲು ಕಾತರಿಸುತ್ತಿದ್ದಾರೆ.

ಭಾರತದ ಸೋಲು ಅರಗಿಸಿಕೊಳ್ಳಲಾಗದೆ ಹೃದಯಾಘಾತ, ಮಡಿಕೇರಿ ಅಭಿಮಾನಿ ಸಾವು

ಇನ್ನೊಂದೆಡೆ, ಅಭ್ಯಾಸ ಪಂದ್ಯದಲ್ಲಿ ಆಸ್ಪ್ರೇಲಿಯಾ (Australia) ಹಾಗೂ ಇಂಗ್ಲೆಂಡ್‌ (England) ವಿರುದ್ಧ ಸೋಲನುಭವಿಸಿದ್ದ ಕಿವೀಸ್‌ಗೆ ಪಾಕಿಸ್ತಾನ ವಿರುದ್ಧ ಅಸಲಿ ಸವಾಲು ಎದುರಾಗಲಿದೆ. ವಿಶ್ವ ದರ್ಜೆಯ ಬೌಲಿಂಗ್‌ ಪಡೆಯನ್ನು ಹೊಂದಿದ್ದರೂ ಬ್ಯಾಟಿಂಗ್‌ನಲ್ಲಿ ಸ್ಥಿರತೆ ಇಲ್ಲದಿರುವುದು ಕಿವೀಸ್‌ಗೆ ತಲೆನೋವಾಗಿ ಪರಿಣಮಿಸಿದೆ. ಗಾಯಗೊಂಡಿರುವ ನಾಯಕ ಕೇನ್‌ ವಿಲಿಯಮ್ಸನ್‌ ಈ ಪಂದ್ಯಕ್ಕೆ ಲಭ್ಯವಿರುವುದು ಅನುಮಾನವೆನಿಸಿದೆ. ಈವರೆಗೂ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್‌  ಒಟ್ಟು 24 ಮುಖಾಮುಖಿಯಾಗಿದ್ದು ಪಾಕಿಸ್ತಾನ 14 ಪಂದ್ಯಗಳಲ್ಲಿ ಜಯ ಸಾಧಿಸಿದ್ದರೆ ನ್ಯೂಜಿಲೆಂಡ್‌ 10 ಪಂದ್ಯಗಳಲ್ಲಿ ಗೆದ್ದಿದೆ.

ಇಂದು ವೆಸ್ಟ್‌ಇಂಡೀಸ್‌  Vs ದಕ್ಷಿಣ ಆಫ್ರಿಕಾ ಪಂದ್ಯ!

ಇಂದು ಟಿ20 ವಿಶ್ವಕಪ್‌ನ ಸೂಪರ್‌-12 ಹಂತದಲ್ಲಿ ‘ಗ್ರೂಪ್‌ ಆಫ್‌ ಡೆತ್‌’ ಎಂದೇ ಕರೆಸಿಕೊಳ್ಳುತ್ತಿರುವ ಗುಂಪು-1ರಲ್ಲಿ ಸ್ಥಾನ ಪಡೆದಿರುವ ಹಾಲಿ ಚಾಂಪಿಯನ್‌ ವೆಸ್ಟ್‌ಇಂಡೀಸ್‌ (West Indies) ಹಾಗೂ ದಕ್ಷಿಣ ಆಫ್ರಿಕಾ (South Africa), ಸೆಮಿಫೈನಲ್‌ ರೇಸ್‌ನಲ್ಲಿ ಉಳಿದುಕೊಳ್ಳಲು ಎದುರು ನೋಡುತ್ತಿವೆ. ಎರಡೂ ತಂಡಗಳು ಮೊದಲ ಪಂದ್ಯದಲ್ಲಿ ಸೋತಿದ್ದು, ಇಂದು (ಅ. 26) ನಡೆಯುವ ಪಂದ್ಯದಲ್ಲಿ ಮುಖಾಮುಖಿಯಾಗಲಿರುವ ಉಭಯ ತಂಡಗಳಿಗೆ ಇದು ನಿರ್ಣಾಯಕ ಪಂದ್ಯವೆನಿಸಿದೆ. ಈ ಪಂದ್ಯದಲ್ಲಿ ಸೋಲುವ ತಂಡ ಸೆಮೀಸ್‌ ರೇಸ್‌ನಿಂದ ಹೆಚ್ಚೂ ಕಡಿಮೆ ಹೊರಬಿದ್ದಂತೆಯೇ ಲೆಕ್ಕ. 

T20 World Cup: ಸ್ಕಾಟ್‌ಲೆಂಡ್ ವಿರುದ್ಧ ಆಫ್ಘಾನ್‌ಗೆ 130 ರನ್ ಭರ್ಜರಿ ಗೆಲುವು!

ನಿನ್ನೆ (ಅ. 25)  ನಡೆದ ಪಂದ್ಯದಲ್ಲಿ ಅಫ್ಘಾನಿಸ್ತಾನ, ಸ್ಕಾಟ್ಲೆಂಡ್‌ ವಿರುದ್ಧ 130 ರನ್‌ಗಳ ಅಮೋಘ ಗೆಲುವು ಸಾಧಿಸಿ, 2021ರ ಐಸಿಸಿ ಟಿ20 ವಿಶ್ವಕಪ್‌ನಲ್ಲಿ ಭರ್ಜರಿ ಆರಂಭ ಪಡೆದುಕೊಂಡಿದೆ. ತಂಡದ ನೆಟ್‌ ರನ್‌ರೇಟ್‌ 6.5 ತಲುಪಿದ್ದು, ಇದು ಭಾರತ ಸೇರಿ ಕೆಲ ತಂಡಗಳಿಗೆ ಅಪಾಯ ತರಬಹುದಾದ ಸಾಧ್ಯತೆ ಇದೆ.

Follow Us:
Download App:
  • android
  • ios