ಆಫ್ಘಾನ್ ದಾಳಿಗೆ ತತ್ತರಿಸಿದ ಸ್ಕಾಟ್‌ಲೆಂಡ್ ಕೇವಲ 60 ರನ್‌ಗೆ ಸ್ಕಾಟ್‌ಲೆಂಡ್ ತಂಡ ಆಲೌಟ್ 130 ರನ್ ಗೆಲುವು ದಾಖಲಿಸಿದ ಆಫ್ಘಾನಿಸ್ತಾನ T20 World Cup 2021ಯಲ್ಲಿ ಆಫ್ಘಾನ್ ಶುಭಾರಂಭ

ಶಾರ್ಜಾ(ಅ.25): ಸ್ಫೋಟಕ ಬ್ಯಾಟಿಂಗ್, ಮಿಂಚಿನ ದಾಳಿ ಮೂಲಕ ಆಫ್ಘಾನಿಸ್ತಾನ T20 World Cup 2021 ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಸ್ಕಾಟ್‌ಲೆಂಡ್ ವಿರುದ್ಧದ ಮೊದಲ ಪಂದ್ಯದಲ್ಲಿ ಆಫ್ಘಾನಿಸ್ತಾನ 130 ರನ್ ಭರ್ಜರಿ ಗೆಲುವು ದಾಖಲಿಸಿದೆ. ಈ ಮೂಲಕ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಆಫ್ಘಾನಿಸ್ತಾನ(Afghanistan) ಮೊದಲ ಸ್ಥಾನಕ್ಕೆ ಲಗ್ಗೆ ಇಟ್ಟಿದೆ.

Scroll to load tweet…

ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 4 ವಿಕೆಟ್ ನಷ್ಟಕ್ಕೆ 190 ರನ್ ಸಿಡಿಸಿತ್ತು. ನಜೀಬುಲ್ಲಾ 59, ಹಜರತುಲ್ಹಾ ಜಜೈ 44, ಗುರ್ಬಾಜ್ 46, ಮೊಹಮ್ಮದ್ ಶಹಝಾದ್ 22 ಹಾಗೂ ಮೊಹಮ್ಮದ್ ನಬಿ ಅಜೇಯ 11 ರನ್ ಮೂಲಕ ಆಫ್ಘಾನಿಸ್ತಾನ ಬೃಹತ್ ಮೊತ್ತ ಪೇರಿಸಿತು. 191 ರನ್ ಟಾರ್ಗೆಟ್ ಪಡೆದ ಸ್ಕಾಟ್‌ಲೆಂಟ್(Scotland) ಬ್ಯಾಟಿಂಗ್‌ನಲ್ಲಿ ಸಂಪೂರ್ಣ ವೈಫಲ್ಯ ಅನುಭವಿಸಿತು.

IPL 2021: ಜದ್ರಾನ್ ಫಿಫ್ಟಿ, ಸ್ಕಾಟ್ಲೆಂಡ್‌ಗೆ ಕಠಿಣ ಗುರಿ ನೀಡಿದ ಆಫ್ಘಾನ್‌

ಜಾರ್ಜ್ ಮುನ್ಸೆ ಸಿಡಿಸಿದ 25 ರನ್ ಹೊರತು ಪಡಿಸಿದರೆ ಇನ್ನುಳಿದ ಎಲ್ಲಾ ಬ್ಯಾಟ್ಸ್‌ಮನ್ ಪೆವಿಲಿಯನ್ ಪರೇಡ್ ನಡೆಸಿದರು. ಕೈಯಲ್ ಕೋಯೆಟ್ಜರ್ 10 ರನ್ ಹಾಗೂ ಕ್ರಿಸ್ ಗೇವಸ್ 12 ರನ್ ಸಿಡಿಸಿದರು. ಇನ್ನು ಐವರು ಬ್ಯಾಟ್ಸ್‌ಮನ್ ಡಕೌಟ್‌ಗೆ ಬಲಿಯಾಗಿದ್ದಾರೆ. ಮುಜೀಬ್ ಯುಆರ್ ರೆಹಮಾನ್ ಹಾಗೂ ರಶೀದ್ ಖಾನ್ ದಾಳಿಗೆ ಸ್ಕಾಟ್‌ಲೆಂಡ್ ತತ್ತರಿಸಿತು.

3ನೇ ಓವರ್‌ನಿಂದ ಸ್ಕಾಟ್‌ಲೆಂಡ್ ತಂಡದ ವಿಕೆಟ್ ಪತನ ಆರಂಭಗೊಂಡಿತು. 10.2 ಓವರ್‌ಗಳಿಗೆ ಸ್ಕಾಟ್‌ಲೆಂಡ್ ತನ್ನಲ್ಲಾ 10 ವಿಕೆಟ್ ಕಳೆದುಕೊಂಡು 60 ರನ್‌ಗಳಿಗೆ ಆಲೌಟ್ ಆಯಿತು. ಇದರೊಂದಿಗೆ ಆಫ್ಘಾನಿಸ್ತಾನ 130 ರನ್ ಗೆಲುವು ಸಾಧಿಸಿತು. 

IPLಗೆ ಅಹಮ್ಮದಾಬಾದ್, ಲಕ್ನೌ ಹೊಸ 2 ತಂಡ; ಬಿಡ್ಡಿಂಗ್ ಗೆದ್ದ RPSG ಹಾಗೂ CVC ಕ್ಯಾಪಿಟಲ್!

ಮಜೀಬ್ 5 ವಿಕೆಟ್ ಕಬಳಿಸಿದರೆ, ರಶೀದ್ ಖಾನ್ 4 ವಿಕೆಟ್ ಉರುಳಿಸಿದರು. ಇನ್ನು ನವೀನ್ ಉಲ್ ಹಕ್ 1 ವಿಕೆಟ್ ಕಬಳಿಸಿ ಸ್ಕಾಟ್‌ಲೆಂಡ್ ತಂಡವನ್ನು ಆಲೌಟ್ ಮಾಡಿದರು. ಇದರೊಂದಗೆ ಸ್ಕಾಟ್‌ಲೆಂಟ್ ನಿರಾಸೆ ಅನುಭವಿಸಿದರೆ, ಆಫ್ಘಾನಿಸ್ತಾನ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಭರ್ಜರಿ ಆರಂಭ ಪಡೆದಿದೆ.

ಅಂಕಪಟ್ಟಿಯಲ್ಲಿ ಮೊದಲ ಸ್ಥಾನ:
ಸ್ಕಾಟ್‌ಲೆಂಡ್ ವಿರುದ್ಧ 130 ರನ್ ಭರ್ಜರಿ ಗೆಲುವು ಸಾಧಿಸಿದ ಆಫ್ಘಾನಿಸ್ತಾನ 2ನೇ ಗುಂಪಿನ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಅಲಂಕರಿಸಿದೆ. ಭಾರತ ವಿರುದ್ಧ 10 ವಿಕೆಟ್ ಗೆಲುವು ಸಾಧಿಸಿ ಮೊದಲ ಸ್ಥಾನ ಅಲಂಕರಿಸಿದ್ದ ಪಾಕಿಸ್ತಾನ ತಂಡವನ್ನು ಆಫ್ಘಾನಿಸ್ತಾನ ಹಿಂದಿಕ್ಕಿದೆ. 6.500 ನೆಟ್‌ರನ್‌ರೇಟ್ ನಿಂದ ಆಫ್ಘಾನಿಸ್ತಾನ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನ 2ನೇ ಸ್ಥಾನಕ್ಕೆ ಕುಸಿದಿದೆ.

Scroll to load tweet…
Scroll to load tweet…