Asianet Suvarna News Asianet Suvarna News

ಭಾರತದ ಸೋಲು ಅರಗಿಸಿಕೊಳ್ಳಲಾಗದೆ ಹೃದಯಾಘಾತ, ಮಡಿಕೇರಿ ಅಭಿಮಾನಿ ಸಾವು

* ಕ್ರಿಕೆಟ್ ಸೋಲಿನಿಂದ  ಆಘಾತ : ಹೃದಯಾಘಾತದಿಂದ ಸಾವನ್ನಪ್ಪಿದ ಅಭಿಮಾನಿ 
*  ಮಡಿಕೇರಿಯ ಕ್ರಿಕೆಟ್ ಆಭಿಮಾನಿಗೆ ಆಘಾತ
* ಭಾರತ ಸೋತ ಹತ್ತು ನಿಮಿಷದಲ್ಲಿ ಕುಸಿದು ಬಿದ್ದರು
* ಕ್ರಿಕೆಟ್ ಆಟಗಾರರಾಗಿದ್ದ ಉದಯ್ ಅವರಿಗೆ ಹೃದಯಾಘಾತ

T20 world cup 55-year-old Madikeri Cricket lover died of heart attack after India s defeat
Author
Bengaluru, First Published Oct 25, 2021, 9:48 PM IST
  • Facebook
  • Twitter
  • Whatsapp

ಮಡಿಕೇರಿ (ಅ. 25) ಟಿ ಟ್ವೆಂಟಿ ವಿಶ್ವ ಕಪ್ (T20 WorldCup) ನಲ್ಲಿ ಭಾರತ (India) ಪಾಕಿಸ್ತಾನದ (Pakistan)ವಿರುದ್ಧ  ಸೋಲು ಕಂಡಿದೆ. ಸಹಜವಾಗಿಯೇ ಕ್ರಿಕೆಟ್(Cricket) ಅಭಿಮಾನಿಗಳಿಗೆ ಈ ಸೋಲು ದೊಡ್ಡ ಆಘಾತವನ್ನೇ  ನೀಡಿದೆ.

ಐಸಿಸಿ ಟಿ-20 ಕ್ರಿಕೆಟ್ ವಿಶ್ವಕಪ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಭಾರತ ಸೋಲುತ್ತಿರುವುದನ್ನು ಕಂಡ ಅಭಿಮಾನಿಗೆ ಹೃದಯಾಘಾತವಾಗಿದ್ದು (Heart Attack) ಮೃತಪಟ್ಟಿದ್ದಾರೆ.

ಸೋಮವಾರಪೇಟೆ ತಾಲೂಕಿನ ದೊಡ್ಡಮಳ್ತೆ ಗ್ರಾಮದಲ್ಲಿ ಭಾನುವಾರ ರಾತ್ರಿ ಅಣ್ಣಯ್ಯಗೌಡ ಅವರ ಪುತ್ರ ಡಿ.ಎ.ಉದಯ(55) ಎಂಬುವರಿಗೆ ಹೃದಯಾಘಾತವಾಗಿದೆ. ಕ್ರಿಕೆಟ್ ಪಂದ್ಯ ವೀಕ್ಷಿಸುತ್ತಿದಾಗ ಭಾರತ ಸೋತ ಹತ್ತು ನಿಮಿಷದಲ್ಲೇ ಹೃದಯಾಘಾತವಾಗಿ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ.

Spirit of Cricket| ಗೆಲುವಿನ ಬಳಿಕ ಧೋನಿ ಎದುರು ಕೈಕಟ್ಟಿ ನಿಂತ ಪಾಕ್ ಆಟಗಾರರು!

ತಕ್ಷಣ ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತ್ತಾದರೂ ಅಷ್ಟೊತ್ತಿಗಾಗಲೆ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಕ್ರೀಡಾಭಿಮಾನಿ ಹಾಗೂ ಕಾಫಿ ಬೆಳೆಗಾರರಾಗಿದ್ದ ಉದಯ ಪತ್ನಿ ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

ಕ್ರಿಕೆಟ್ ಪ್ರೇಮಿಯಾಗಿದ್ದ ಉದಯ್ ಸ್ಥಳೀಯ ಆಟಗಾರರೊಂದಿಗೆ ಗುರುತಿಸಿಕೊಂಡಿದ್ದರು. ಭಾರತ  ತಂಡ ಸೋಲು ಕಂಡಿದ್ದು ಇವರಿಗೆ ದೊಡ್ಡ ಆಘಾತ ತಂದಿತ್ತು.  ಕ್ರಿಕೆಟ್ ಆಟಗಾರರಾಗಿದ್ದ ಉದಯ್ ಭಾರತ ತಂಡದ ಮೇಲೆ ವಿಶೇಷ ಅಭಿಮಾನ ಇಟ್ಟುಕೊಂಡಿದ್ದರು. 

 

 

Follow Us:
Download App:
  • android
  • ios