"

ಕ್ರೈಸ್ಟ್‌ಚರ್ಚ್[ಜ.06]: ಓವರ್‌ನ ಎಲ್ಲಾ ಎಸೆತಗಳಲ್ಲಿ ಚೆಂಡನ್ನು ಸಿಕ್ಸರ್‌ ಗಡಿ ದಾಟಿಸಿದ ನ್ಯೂಜಿಲೆಂಡ್‌ನ ಬ್ಯಾಟ್ಸ್‌ಮನ್‌ ಲಿಯೋ ಕಾರ್ಟರ್‌ ಈ ಸಾಧನೆ ಮಾಡಿದ ವಿಶ್ವದ 7ನೇ ಕ್ರಿಕೆಟಿಗರಾಗಿ ಹೊರಹೊಮ್ಮಿದ್ದಾರೆ. ಲಿಯೋ ಕಾರ್ಟರ್‌ ಬ್ಯಾಟಿಂಗ್ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಬ್ಯಾಟಿಂಗ್ ನೆನಪಿಸುವಂತಿತ್ತು.

ಯುವರಾಜ್ ಸಿಂಗ್ 6,6,6,6,6,6 ಬಾರಿಸಿ ಇಂದಿಗೆ 12 ವರ್ಷ..!

ನ್ಯೂಜಿಲೆಂಡ್‌ ದೇಶಿ ಟಿ20 ಕ್ರಿಕೆಟ್‌ನ ಪ್ರಮುಖ ಟೂರ್ನಿಯೊಂದರಲ್ಲಿ ಕ್ಯಾಂಟೆರ್‌ಬರ್ರಿ ಕಿಂಗ್ಸ್‌ ತಂಡವನ್ನು ಪ್ರತಿನಿಧಿಸುತ್ತಿರುವ ಕಾರ್ಟರ್‌, ನಾರ್ದನ್‌ ನೈಟ್ಸ್‌ ವಿರುದ್ಧದ ಪಂದ್ಯದಲ್ಲಿ ಈ ಸಾಧನೆ ಮಾಡಿದರು. 6 ಸಿಕ್ಸರ್‌ ಚಚ್ಚಿಸಿಕೊಂಡ ಅಪಖ್ಯಾತಿಗೆ ಗುರಿಯಾಗಿದ್ದ ಆ್ಯಂಟನ್‌ ದೇವಿಸಿಚ್‌.

ಹೀಗಿತ್ತು ನೋಡಿ ಆ ಕ್ಷಣ:

ಎಲ್ಲಾ ಮಾದರಿಯ ಕ್ರಿಕೆಟ್‌ ಅನ್ನು ಪರಿಗಣಿಸಿದಾಗ ಓವರಲ್ಲಿ 6 ಸಿಕ್ಸರ್‌ ಸಿಡಿಸಿದ 7ನೇ ಆಟಗಾರ ಎನ್ನುವ ಹಿರಿಮೆ ಗಳಿಸಿದ್ದಾರೆ. ಈ ಮೊದಲು ಗ್ಯಾರಿ ಸೋಬ​ರ್ಸ್, ರವಿಶಾಸ್ತ್ರಿ, ಹರ್ಷಲ್‌ ಗಿಬ್ಸ್‌, ಯುವರಾಜ್‌ ಸಿಂಗ್‌, ವೊರ್ಚೆಸ್ಟ್‌ಶೈರ್‌ನ ರೋಸ್‌ ವೈಟ್ಲೀ ಹಾಗೂ ಆಫ್ಘಾನಿಸ್ತಾನದ ಹಜರತ್ತುಲ್ಲಾ ಜಜಾಯಿ ಈ ಮೊದಲು ಓವರಲ್ಲಿ 6 ಸಿಕ್ಸರ್‌ ಬಾರಿಸಿದ್ದರು. ಟಿ20 ಕ್ರಿಕೆಟ್‌ ಅನ್ನು ಮಾತ್ರ ಪರಿಗಣಿಸಿದರೆ, ಕಾರ್ಟರ್‌ ಈ ಸಾಧನೆ ಮಾಡಿದ 4ನೇ ಆಟಗಾರ ಎನಿಸುತ್ತಾರೆ.

ಹೇರ್ ಡ್ರೈಯರ್, ಇಸ್ತ್ರಿ ಪೆಟ್ಟಿಗೆ..ಬಡ ಬಿಸಿಸಿಐಗೆ ಇಂಥಾ ದುಸ್ಥಿತಿ ಬರಬಾರ್ದಿತ್ತು! ಒಂದೊಂದು ಟ್ರೋಲು

ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸರ್ ಸಿಡಿಸಿದ ದಾಖಲೆ ಹರ್ಷೆಲ್ ಗಿಬ್ಸ್ ಹಾಗೂ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಗಿಬ್ಸ್ 2007ರ ಏಕದಿನ ವಿಶ್ವಕಪ್’ನಲ್ಲಿ ನೆದರ್’ಲ್ಯಾಂಡ್ಸ್ ವಿರುದ್ಧ ಈ ಸಾಧನೆ ಮಾಡಿದರೆ, ಯುವರಾಜ್ ಸಿಂಗ್ 2007ರ ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇಂಗ್ಲೆಂಡ್’ನ ಸ್ಟುವರ್ಟ್ ಬ್ರಾಡ್ ಬೌಲಿಂಗ್’ನಲ್ಲಿ 6 ಸಿಕ್ಸರ್ ಬಾರಿಸಿ ದಾಖಲೆ ಬರೆದಿದ್ದರು.