Asianet Suvarna News Asianet Suvarna News

ಮುಷ್ತಾಕ್‌ ಅಲಿ ಟ್ರೋಫಿ: ಕರ್ನಾಟಕಕ್ಕಿಂದು ಗೋವಾ ಚಾಲೆಂಜ್‌

ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿಂದು ಕರ್ನಾಟಕ ತಂಡವು ತನ್ನ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ಗೋವಾ ತಂಡವನ್ನು ಎದುರಿಸಲಿದೆ. ಈ ಪಂದ್ಯವನ್ನು ಗೆಲ್ಲುವುದರೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಲು ಮನೀಶ್ ಪಡೆ ತುದಿಗಾಲಿನಲ್ಲಿ ನಿಂತಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Syed Mushtaq Ali Trophy Karnataka vs Goa Match Preview
Author
Visakhapatnam, First Published Nov 17, 2019, 8:44 AM IST

ವಿಶಾಖಪಟ್ಟಣಂ[ನ.17]: ಸಯ್ಯದ್‌ ಮುಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಕರ್ನಾಟಕ ತಂಡ, ಭಾನುವಾರ ಗೋವಾ ಸವಾಲನ್ನು ಎದುರಿಸಲಿದೆ. 

‘ಎ’ ಗುಂಪಿನಲ್ಲಿ ಮನೀಶ್ ಪಾಂಡೆ ನೇತೃತ್ವದ ಕರ್ನಾಟಕ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದ್ದು 16 ಅಂಕಗಳಿಂದ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇತರೆ ತಂಡಗಳಿಗಿಂತ ಉತ್ತಮ ನೆಟ್‌ ರನ್‌ರೇಟ್‌ ಹೊಂದಿರುವ ಕರ್ನಾಟಕ ತಂಡ, ಗುಂಪು ಹಂತದ ಅಂತಿಮ ಪಂದ್ಯದಲ್ಲಿ ಗೆದ್ದು ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ವಿಶ್ವಾಸದಲ್ಲಿದೆ.

ಮುಷ್ತಾಕ್‌ ಅಲಿ ಟಿ20: ಬಿಹಾರ ವಿರುದ್ಧ ಕರ್ನಾ​ಟ​ಕಕ್ಕೆ ಸುಲಭ ಜಯ

ತಾರಾ ಆಟ​ಗಾ​ರ​ರನ್ನು ಹೊಂದಿ​ರುವ ಕರ್ನಾ​ಟಕ, ಗೆಲ್ಲುವ ನೆಚ್ಚಿ​ನ ತಂಡ ಎನಿ​ಸಿ​ಕೊಂಡರೂ, ಗೋವಾ ತಂಡ​ವನ್ನು ಲಘುವಾಗಿ ಪರಿ​ಗ​ಣಿ​ಸು​ವಂತಿಲ್ಲ. ಭರ್ಜರಿ ಜಯ​ದೊಂದಿ​ಗೆ ಮುಂದಿನ ಹಂತಕ್ಕೆ ಪ್ರವೇ​ಶಿ​ಸು​ವುದು ರಾಜ್ಯ ತಂಡದ ಗುರಿ​ಯಾ​ಗಿದೆ. ಸ್ಥಿರತೆ ಕಾಯ್ದು​ಕೊ​ಳ್ಳಲು ಪರ​ದಾ​ಡು​ತ್ತಿ​ರುವ ಕೆ.ಎಲ್‌.ರಾ​ಹುಲ್‌ ಮೇಲೆ ಒತ್ತಡವಿದೆ. ಟೂರ್ನಿಯಲ್ಲಿ ಕರ್ನಾಟಕ ತಂಡವು ಬರೋಡ ಎದುರು ಮಾತ್ರವೇ ಮುಗ್ಗರಿಸಿತ್ತು. ಇನ್ನು ಬರೋಡ ತಂಡಕ್ಕೆ ಗೋವಾ ಶಾಕ್ ನೀಡಿತ್ತು.

ಮುಷ್ತಾಕ್‌ ಅಲಿ ಟ್ರೋಫಿ: ರಾಜ್ಯ ತಂಡಕ್ಕೆ ರಾಹುಲ್‌ ಸೇರ್ಪಡೆ

‘ಎ’ ಗುಂಪಿನಿಂದ ಕರ್ನಾಟಕ ಹಾಗೂ ಬರೋಡಾ ತಂಡಗಳು ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶ ಪಡೆಯುವುದು ಬಹುತೇಕ ಖಚಿತವಾಗಿದೆ. ಬರೋಡಾ ತಂಡ 6 ಪಂದ್ಯಗಳನ್ನು ಆಡಿದ್ದು 5ರಲ್ಲಿ ಗೆಲುವ ಮೂಲಕ 20 ಅಂಕ ಗಳಿಸಿ ಮೊದಲ ಸ್ಥಾನ​ದ​ಲ್ಲಿದೆ. 5 ಗುಂಪು​ಗ​ಳಲ್ಲಿ ಅಗ್ರ 2 ಸ್ಥಾನ​ಗ​ಳನ್ನು ಪಡೆ​ಯುವ ತಂಡ​ಗ​ಳು ಸೂಪರ್‌ ಲೀಗ್‌ ಹಂತಕ್ಕೆ ಪ್ರವೇಶಿಸಲಿವೆ. ನ. 21 ರಿಂದ ಸೂಪರ್‌ ಲೀಗ್‌ ಆರಂಭ​ಗೊ​ಳ್ಳ​ಲಿದ್ದು, ನ. 29ರಂದು ಸೆಮಿಫೈನಲ್‌ ಹಾಗೂ ಡಿ.1ರಂದು ಫೈನಲ್‌ ಪಂದ್ಯ ನಡೆಯಲಿದೆ.
 

Follow Us:
Download App:
  • android
  • ios