ಸೂರತ್‌(ನ.22): ಮು​ಷ್ತಾಕ್‌ ಅಲಿ ರಾಷ್ಟ್ರೀಯ ಟಿ20 ಟೂರ್ನಿಯ ಸೂಪರ್‌ ಲೀಗ್‌ನಲ್ಲಿ ಕರ್ನಾ​ಟಕ ಶುಭಾ​ರಂಭ ಮಾಡಿದೆ. ಗುರು​ವಾರ ಇಲ್ಲಿ ನಡೆದ ‘ಬಿ’ ಗುಂಪಿನ ಮೊದಲ ಪಂದ್ಯ​ದಲ್ಲಿ ತಮಿ​ಳು​ನಾಡು ವಿರುದ್ಧ 9 ವಿಕೆಟ್‌ಗಳ ಭರ್ಜರಿ ಗೆಲುವು ಸಾಧಿ​ಸಿತು. 

ಟಾಸ್‌ ಗೆದ್ದು ಫೀಲ್ಡಿಂಗ್‌ ಆಯ್ಕೆ ಮಾಡಿ​ಕೊಂಡ ಕರ್ನಾ​ಟಕ, ತಮಿ​ಳು​ನಾಡು ತಂಡ​ವನ್ನು 20 ಓವರ್‌ಗಳಲ್ಲಿ 7 ವಿಕೆಟ್‌ಗೆ 158 ರನ್‌ಗಳಿಗೆ ನಿಯಂತ್ರಿ​ಸಿತು. ಸುಲಭ ಗುರಿ ಬೆನ್ನ​ತ್ತಿದ ಹಾಲಿ ಚಾಂಪಿ​ಯನ್‌ ತಂಡ, ಕೆ.ಎಲ್‌. ರಾ​ಹುಲ್‌ ಹಾಗೂ ನಾಯಕ ಮನೀಶ್‌ ಪಾಂಡೆ ಅವರ ಅಜೇಯ ಅರ್ಧ​ಶ​ತ​ಕ​ಗಳ ನೆರ​ವಿ​ನಿಂದ 16.2  ಓವರಲ್ಲಿ ಗೆಲು​ವಿನ ದಡ ಸೇರಿತು.

ಮುಷ್ತಾಕ್‌ ಅಲಿ ಟಿ20: ಇಂದಿ​ನಿಂದ ಟಿ20 ಸೂಪರ್‌ ಲೀಗ್‌

ಕರ್ನಾಟಕ ತಂಡಕ್ಕೆ ದೇವ​ದತ್‌ ಪಡಿ​ಕ್ಕಲ್‌ ಸ್ಫೋಟಕ ಆರಂಭ ಒದ​ಗಿ​ಸಿ​ದರು. 20 ಎಸೆ​ತ​ಗ​ಳಲ್ಲಿ 36 ರನ್‌ ಸಿಡಿಸಿ ಔಟಾ​ದರು. ಮೊದಲ ವಿಕೆಟ್‌ಗೆ ರಾಹುಲ್‌ ಹಾಗೂ ದೇವ​ದತ್‌ 7 ಓವ​ರಲ್ಲಿ 70 ರನ್‌ ಜೊತೆ​ಯಾಟವಾಡಿ​ದರು. 2ನೇ ವಿಕೆಟ್‌ಗೆ ಜತೆಯಾದ ರಾಹುಲ್‌ ಹಾಗೂ ಪಾಂಡೆ, ತಮಿ​ಳು​ನಾಡು ಬೌಲರ್‌ಗಳ ಮೇಲೆ ಸವಾರಿ ಮಾಡಿ​ದರು. ರಾಹುಲ್‌ 46 ಎಸೆ​ತ​ಗ​ಳಲ್ಲಿ 69 ರನ್‌ ಗಳಿಸಿದರೆ, ಪಾಂಡೆ 33 ಎಸೆ​ತ​ಗ​ಳಲ್ಲಿ 52 ರನ್‌ ಸಿಡಿ​ಸಿ​ದರು.

ಮುಷ್ತಾಕ್‌ ಅಲಿ ಟಿ20: ಸೂಪರ್‌ ಲೀಗ್‌ ವೇಳಾ​ಪಟ್ಟಿ ಪ್ರಕಟ

ಮೊದಲು ಬ್ಯಾಟ್‌ ಮಾಡಿದ ತಮಿ​ಳು​ನಾಡು ಪರ ನಾಯಕ ದಿನೇಶ್‌ ಕಾರ್ತಿಕ್‌ 43 ರನ್‌ ಗಳಿ​ಸಿ​ದರು. ಕರ್ನಾ​ಟ​ಕ ಪರ ವಿ.ಕೌ​ಶಿಕ್‌ 2, ರೋನಿತ್‌ ಮೋರೆ ತಲಾ 2 ವಿಕೆಟ್‌ ಕಿತ್ತರು. ಶುಕ್ರ​ವಾರ ಕರ್ನಾ​ಟಕ, ಜಾರ್ಖಂಡ್‌ ತಂಡ​ವನ್ನು ಎದು​ರಿ​ಸ​ಲಿದೆ. ಶುಕ್ರವಾರ[ನ.22]ರಂದು 6.30ಕ್ಕೆ ನಡೆಯಲಿರುವ ಎರಡನೇ ಪಂದ್ಯದಲ್ಲಿ ಕರ್ನಾಟಕ ತಂಡವು ಜಾರ್ಖಂಡ್ ತಂಡವನ್ನು ಎದುರಿಸಲಿದೆ.

ಸ್ಕೋರ್‌: 
ತಮಿ​ಳು​ನಾಡು 158/7
ಕರ್ನಾ​ಟಕ 161/1